ನೇತ್ರ ದಾನ ಮಹಾ ದಾನ ಎಂಬುದನ್ನು ವರ ನಟ ಡಾ.ರಾಜ್‍ಕುಮಾರ್ ಅವರು ಅಕ್ಷರಶಃ ಪಾಲಿಸಿದವರು.‌ ಅವರು ನಿಧನರಾದಾಗ ಅವರ ಕಣ್ಣುಗಳನ್ನು ದೃಷ್ಟಿ ಹೀನರಿಗೆ ದಾನವಾಗಿ ನೀಡಿ, ಅವರಿಗೆ ಈ ಜಗತ್ತನ್ನು ನೋಡುವ ಭಾಗ್ಯ ಕಲ್ಪಿಸಿದವರು ಅಣ್ಣಾವ್ರು. ಅವರ ಈ ಕಾರ್ಯವು ಅವರ ಅಭಿಮಾನಿಗಳಿಗೂ ನೇತ್ರ ದಾನ ಮಾಡುವ ಹುಮ್ಮಸ್ಸನ್ನು, ಪ್ರೇರಣೆಯನ್ನು ನೀಡಿದ್ದು ಕೂಡಾ ಅಷ್ಟೇ ನಿಜ. ಈಗ ಅದರಿಂದ ಪ್ರೇರೇಪಿತವಾಗಿ ಟಿವಿ ಶೋ ಒಂದರಲ್ಲಿ ಇಡೀ ತಂಡ ನೇತ್ರ ದಾನ ಮಾಡುವ ಮೂಲಕ ನಿನ್ನೆ ಇದ್ದ ಅಣ್ಣಾವ್ರ ಹುಟ್ಟು ಹಬ್ಬಕ್ಕೆ‌ ಒಂದು ಮರೆಯದ ಕಾಣಿಕೆಯನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಇಂತಹ ಒಂದು ಮಾನವೀಯ ಕಾರ್ಯಕ್ಕೆ ವೇದಿಕೆಯಾಗಿದೆ. ಈ ಇಡೀ ಕಾರ್ಯಕ್ರಮ ಈಗಾಗಲೇ ಚಿತ್ರೀಕರಣಗೊಂಡಿದ್ದು, ಬಹಳ ಬೇಗ ಜನರ ಮುಂದೆ ಬಂದು ಜನರ ಮೆಚ್ಚುಗೆಯನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾರ್ಯಕ್ರಮದಲ್ಲಿ ಜ್ಯೂರಿ ಆಗಿರುವ ಗಾಯಕಿ ಸಂಗೀತಾ ರಾಜೀವ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಾವು ನೇತ್ರ ದಾನ ಮಾಡಿದ ವಿಷಯವನ್ನು ಶೇರ್ ಮಾಡಿ, ಇದು ಅಣ್ಣಾವ್ರ ಜನ್ಮ ದಿನಕ್ಕೆ ನನ್ನ ಉಡುಗೊರೆ ಎಂದು ಬರೆದು ಕೊಂಡಿದ್ದಾರೆ.

ಇಂತಹ ಒಂದು ವಿಶೇಷ ಹಾಗೂ ಅರ್ಥಪೂರ್ಣವಾದ ಅವಕಾಶವನ್ನು ನೀಡಿದ ಜೀ ಕನ್ನಡಕ್ಕೆ ಅವರು ಧನ್ಯವಾದಗಳನ್ನು ಕೂಡಾ ತಿಳಿಸಿದ್ದಾರೆ. ಅದೇ ಸಮಯದಲ್ಲೇ ಅವರು ಇತರರಿಗೂ ಕೂಡಾ ನೇತ್ರ ದಾನ ಮಾಡುವಂತೆ ಸಲಹೆ ನೀಡುವುದನ್ನು ಮರೆತಿಲ್ಲ. ನಿಜಕ್ಕೂ ಇಂತಹ ಒಂದು ಬೆಳವಣಿಗೆ ಒಂದು ಟಿವಿ ಶೋ ಮೂಲಕ ಆದಾಗ ಅದು ಜನರಲ್ಲಿ ಮತ್ತಷ್ಟು ಜಾಗೃತಿಯನ್ನು ಮೂಡಿಸುತ್ತದೆ. ಮನರಂಜನೆಯ ಜೊತೆಗೆ ಇಂತಹ ಮಾನವೀಯ ಕಾರ್ಯವನ್ನು, ಮಾಡುತ್ತಿರುವ ಜೀ ಕನ್ನಡದ ಅನೇಕರಿಗೆ ಸ್ಪೂರ್ತಿಯಾಗಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here