ಕನ್ನಡದ ಸುಪ್ರೀಂ ಹೀರೋ, ಕನ್ನಡಕ್ಕೆ ಒಬ್ಬ ಕಮಲಹಾಸನ್ ರಂತ ಅಂದಗಾರ, ಕನ್ನಡಕ್ಕೊಬ್ಬ ಸೂಪರ್ ಡಾನ್ಸರ್, ಕನ್ನಡದಲ್ಲೊಬ್ಬ ಸ್ಪುರದ್ರೂಪಿ ನಾಯಕ ನಟ ಎಂದೆಲ್ಲಾ ಖ್ಯಾತಿ ಗಳಿಸಿ, ಅಂದಿನ ದಿನಗಳಲ್ಲಿ ಹುಡುಗಿಯರ ಮನಸ್ಸು ಕದ್ದ ಡ್ರೀಮ್ ಬಾಯ್ ಅಂದರೆ ಅದು ಶಶಿಕುಮಾರ್ ಅವರು ಮಾತ್ರ. ಶಶಿಕುಮಾರ್ ಯಶಸ್ಸಿನ ಉತ್ತುಂಗದಲ್ಲಿ ಇದ್ದಂತಹ ಕಾಲ, ಯಶಸ್ವಿ ಚಿತ್ರಗಳ ನಾಯಕನಾಗಿ ಒಂದರ ಹಿಂದೊಂದು ಯಶಸ್ವಿ ಚಿತ್ರಗಳನ್ನು ಕೊಡುತ್ತಾ ಮುಂದೆ ನಡೆದಿದ್ದ ನಟ. ಅಂತಹ ಸಂದರ್ಭದಲ್ಲಿ ನಡೆದು ಹೋಯಿತೊಂದು ದುರ್ಘಟನೆ. ಇದನ್ನು ಯಾರೊಬ್ಬರೂ ಕೂಡಾ ನಿರೀಕ್ಷೆ ಮಾಡಿರಲಿಲ್ಲ.
1998 ಜುಲೈ 31 ನಟ ಶಶಿಕುಮಾರ್ ಅವರ ಜೀವನದಲ್ಲಿ ಮರೆಯಲಾಗದ ನೋವನ್ನು ತಂದ ದಿನ.

ಅದರ ಬಗ್ಗೆ ಶಶಿಕುಮಾರ್ ಅವರೇ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಂದು ಅವರು ಬಾರೊ ನನ್ನ ಮುದ್ದಿನ ಕೃಷ್ಣ ಸಿನಿಮಾ ಶೂಟಿಂಗ್ ಮುಗಿಸಿ ಮನೆಗೆ ಬರುತ್ತಿದ್ದ ಸಮಯ, ಅಲ್ಲದೆ ಶಶಿಕುಮಾರ್ ಅವರು ಬಸವೇಶ್ವರ ನಗರದಿಂದ ,ಆರ್.ಟಿ. ನಗರಕ್ಕೆ ಮನೆ ಶಿಫ್ಟ್ ಮಾಡಿದ್ದರಂತೆ. ಆಗ ಶಿವಾನಂದ ಸರ್ಕಲ್ ನಲ್ಲಿ ಬರುವಾಗ ಅವರ ಮಗಳು ಐಶ್ವರ್ಯ ಫೋನ್ ಮಾಡಿ ಡ್ಯಾಡಿ ಐಸ್ ಕ್ರೀಂ ತಗೊಂಡು ಬನ್ನಿ ಎಂದು ಕೇಳಿದಾಗ, ಅವರು ಅದಕ್ಕಾಗಿ ಜನಾರ್ಧನ್ ಹೋಟೇಲ್ ಬಳಿ ರಸ್ತೆಯ ತಗ್ಗಿನಲ್ಲಿ ಹೋಗುವಾಗ ತುಂತುರು ಮಳೆ ಹನಿಗಳು ಆರಂಭವಾಗಿದೆ. ತಗ್ಗಿನಲ್ಲಿ ರಾತ್ರಿ 9:30 , 10 ರ ಸಮಯದಲ್ಲಿ ನಿಧಾನವಾಗಿ ಮಾರುತಿ ಕಾರ್ ನಲ್ಲಿ ಬರುತ್ತಿದ್ದರಂತೆ.

ಆಗ ಎದುರಿನಿಂದ ಐದಾರು ಬಾರಿ ಸರ್ಚ್ ಲೈಟ್ ಬೆಳಕಿನಂತಹ ಬೆಳಕು ಅವರ ಮುಖದ ಮೇಲೆ ಬಿದ್ದು ಅವರ ಕಾರಿನ ಚಾಲನೆಗೆ ತೊಂದರೆ ಆಗಿದೆ. ಆಗ ಶಶಿಕುಮಾರ್ ಬಹುಶಃ ಮುಂದಿನಿಂದ ಯಾರೋ ಬರ್ತಾ ಇರಬಹುದು ಎಂದು ಗಾಡಿ ಸ್ವಲ್ಪ ಬಲಗಡೆಗೆ ತಗೊಂಡಿದ್ದಷ್ಟೆ ಅವರಿಗೆ ನೆನಪು. ಅದಾದ ಮೇಲೆ ಅವರು ಒಂದು ಭೀಕರ ಅಪಘಾತಕ್ಕೆ ಗುರಿಯಾಗಿದ್ದಾರೆ. ಕಾರಿನ ಬಾನೆಟ್ ಅವರ ಮುಖದವರೆಗೂ ಬಂದಿದೆ. ಅವರ ದುರಾದೃಷ್ಟ ಮುಖ ಮಾತ್ರ ಹಲವು ಫ್ರಾಕ್ಷರ್ ಗಳಿಗೆ ಗುರಿಯಾಗಿದೆ. ಆಟೋ ಚಾಲಕರು ಅವರನ್ನು ಹತ್ತಿರದಲ್ಲೇ ಇದ್ದ ಮಲ್ಲಿಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಪ್ರಜ್ಞಾಹೀನರಾದ ಶಶಿಕುಮಾರ್ ಅವರು ಪ್ರಜ್ಞೆ ಬಂದಾಗ ಮಲ್ಯ ಆಸ್ಪತ್ರೆಯಲ್ಲಿ ಇದ್ದೆ ಎಂದು ತಮಗಾದ ಅಪಘಾತದ ಬಗ್ಗೆ ಹೇಳಿದ್ದಾರೆ.

https://m.facebook.com/story.php?story_fbid=2185323414908465&id=378024258971732

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here