ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟರ  ಸಾಲಲ್ಲಿ ತನ್ನದೇ ಆದ ನಟನೆಯಿಂದ ಜನ ಮನ ಗೆದ್ದಿರುವ ಯಶಸ್ವಿ ನಾಯಕ ನಟರಲ್ಲಿ ಸತೀಶ್ ನೀನಾಸಂ ಸಹ ಪ್ರಮುಖರು. ಅಭಿನಯ ಚತುರ ಎಂದು ಅಭಿಮಾನಿಗಳಿಂದ ಗುರುತಿಸಿಕೊಂಡಿರುವ  ಸತೀಶ್ ನೀನಾಸಂ ಅವರು ನಾಯಕ ನಟನಾಗಿ ಒಂದರ ಹಿಂದೆ ಮತ್ತೊಂದು ಯಶಸ್ವಿ ಚಿತ್ರಗಳನ್ನು ನೀಡುತ್ತಾ ಸಾಗಿದ್ದಾರೆ.  ಸತೀಶ್ ನೀನಾಸಂ ಅಭಿನಯದ  ಬ್ರಹ್ಮಚಾರಿ ಭರ್ಜರಿ 25 ದಿನಗಳತ್ತ  ಕಾಲಿಟ್ಟಿದ್ದು , ಬಿಡುಗಡೆಯಾದ ಸಿನಿಮಾ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿರುವುದು ಇಡೀ ಚಿತ್ರ ತಂಡಕ್ಕೆ ಸಂತಸವನ್ನು ತಂದಿದ್ದು, ಸತೀಶ್ ನೀನಾಸಂ ಅವರ ಯಶಸ್ವಿ ಚಿತ್ರಗಳ ಸಾಲಿನಲ್ಲಿ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.

ಯುವಕನ ಪ್ರಸ್ತ ಪುರಾಣ ಕಥಾ ಹಂದರವಾಗಿ ಮೂಡಿ ಬಂದಿರುವ ಸರಳ ಕಥೆ ಹಾಗೂ ವಿಭಿನ್ನ ಹಾಸ್ಯ ಶೈಲಿಯ ಬ್ರಹ್ಮಾಚಾರಿಯನ್ನು ಚಂದ್ರ ಮೋಹನ್ ಅವರು ನಿರ್ದೇಶನ ಮಾಡಿದ್ದು , ಈ ಸಿನಿಮಾದ ಪ್ರಮುಖ ಆಕರ್ಷಣೆ ನಾಯಕ ಸತೀಶ್ ನೀನಾಸಂ ಮತ್ತು ನಾಯಕಿ ಅದಿತಿ ಪ್ರಭುದೇವ ಅವರು. ಈ ಇಬ್ಬರ ನಟನೆ ಜನರ ಮನಸ್ಸನ್ನು ಗೆದ್ದಿದ್ದು, ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿ ಕೈಹಿಡಿದು ಯಶಸ್ಸಿನತ್ತ ನಡೆಸಿದ್ದಾರೆ. 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಇದೀಗ 225 ಚಿತ್ರಮಂದಿರಗಳಿಗೆ ಏರಿದೆ ಎಂದು‌ ನಿರ್ಮಾಪಕ ಉದಯ್ ಮೆಹ್ತಾ ಅವರು ಹೇಳಿದ್ದಾರೆ.

ಅಯೋಗ್ಯ ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ನೀಡುತ್ತಿದ್ದಾರೆ ಸತೀಶ್ ನೀನಾಸಂ ಅವರು. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಿಂಚಿರುವ ಶಿವರಾಜ್ ಕೆ ಆರ್ ಪೇಟೆ, ದತ್ತಣ್ಣ , ಗಿರಿಜಾ ಲೋಕೇಶ್ , ಅಶೋಕ್ ಸಹ ನೋಡುಗರ ಮನ ಗೆದ್ದಿದಾರೆ. ಬ್ರಹ್ಮಚಾರಿ ಸಿನಿಮಾ‌ ನವಿರಾದ ಹಾಸ್ಯ, ಉತ್ತಮ ಸಂಗೀತ ಹಾಗೂ ಕಲಾವಿದರ ಪಾತ್ರ ಪೋಷಣೆಯಂತಹ ಅಂಶಗಳಿಂದ ಜನರ ಮೆಚ್ಚುಗೆ ಪಡೆದು ಮುನ್ನುಗ್ಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here