ಉತ್ತರ ಕರ್ನಾಟಕ ಹಿಂದೆಂದೂ ಕಂಡಿರದಂತಹ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರೀ ಮಳೆಯಿಂದ ಪೊರೆಯಬೇಕಾದ ನದಿಗಳೇ ಉಕ್ಕಿ ಹರಿದು, ಪ್ರಾಣಾಪಾಯ ತಂದೊಡ್ಡಿ ಅಲ್ಲಿನ ಜನರು ಮನೆ ಮಠಗಳನ್ನು ತೊರೆಯುವ ಹಾಗೆ ಮಾಡಿವೆ. ಅಲ್ಲಿನ ಜನರ ಕಷ್ಟ ಸಂಕಷ್ಟಗಳು ನಾಡಿನ ಜನರ ಮನಸ್ಸನ್ನು ಕರಗಿಸಿದೆ. ಸ್ವಾವಲಂಬಿಗಳಾಗಿ ಬದುಕು ನಡೆಸಿದ್ದ ಅದೆಷ್ಟೋ ಜನ ಇಂದು ಆಶ್ರಯವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೂಲಭೂತ ಸೌಲಭ್ಯಗಳ ಪಡೆಯಲು ಸರ್ಕಾರದ ಕಡೆ ತಮ್ಮ ನೋಟವನ್ನು ನೆಟ್ಟಿದ್ದಾರೆ. ಅವರಿಗಾಗಿ ಅನೇಕರು ನೆರವಿರ ಹಸ್ತವನ್ನು ಚಾಚಿದ್ದಾರೆ.

ಸಿನಿಮಾ ನಟರು ಕೂಡಾ ಇದಕ್ಕೆ ಹೊರತಾಗಿಲ್ಲ. ಅವರು ಕೂಡಾ ಆ ಜನರ ಸಂಕಷ್ಟವನ್ನು ಪರಿಹರಿಸಲು, ಅವರಿಗೆ ಸೂಕ್ತ ನೆರವನ್ನು ನೀಡಲು ಮುಂದಾಗಿದ್ದಾರೆ. ಧನ ಸಹಾಯ, ಅಗತ್ಯ ವಸ್ತುಗಳ ಪೂರೈಕೆ ಮಾಡಲು ಮುಂದಾಗಿದ್ದಾರೆ. ಮಾದ್ಯಮಗಳು ಕೂಡಾ ಈ ಕೆಲಸಕ್ಕೆ ಸಾಥ್ ನೀಡಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಖ್ಯಾತ ನಟ ನೀನಾಸಂ ಸತೀಶ್ ಅವರು ಪ್ರತಿಕ್ರಿಯೆ ನೀಡುತ್ತಾ, ನೆರೆ ಸಂತ್ರಸ್ತರಿಗೆ ಧೈರ್ಯವನ್ನು ಹೇಳುವ, ಅವರ ಸಹಾಯಕ್ಕೆ ಹೊರಡುವ ಮಾತನ್ನಾಡಿದ್ದಾರೆ.

ಅವರು ಉತ್ತರ ಕರ್ನಾಟಕದಲ್ಲಿ ಆಗಿರುವ ಅನಾಹುತ ನೋಡಿ, ಮನೆಯಲ್ಲೇ ಕೂರಲು ಮನಸ್ಸಾಗುತ್ತಿಲ್ಲ, ಇದೇ 15, 16 ರಂದು, ಹುಬ್ಬಳ್ಳಿ , ಬೆಳಗಾವಿ, ಸುತ್ತಮುತ್ತಲ ಹಳ್ಳಿಗಳಿಗೆ ಭೇಟಿ ನೀಡಿ, ಸಾಧ್ಯವಾದಷ್ಟು ಸಹಾಯ ಮಾಡಲು ಮತ್ತು ಅವರಿಗೆ ಒಂದು ಸಣ್ಣ ಸ್ಫೂರ್ತಿ ತುಂಬುವ ಕೆಲಸ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ನಾಳೆ ಭೇಟಿ ನೀಡುವ ಸ್ಥಳಗಳ ಪಟ್ಟಿಯನ್ನು ತಿಳಿಸುವೆ ಎಂದು ಹೇಳುತ್ತಾ ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆಯ ಮಾತನ್ನು ಹೇಳಿದ್ದಾರೆ.‌

ಉತ್ತರ ಕರ್ನಾಟಕದಲ್ಲಿ ಆಗಿರುವ ಅನಾಹುತ ನೋಡಿ, ಮನೆಯಲ್ಲೇ ಕೂರಲು ಮನಸ್ಸಾಗುತ್ತಿಲ್ಲ, ಇದೇ 15, 16 ರಂದು, ಹುಬ್ಬಳ್ಳಿ , ಬೆಳಗಾವಿ, ಸುತ್ತಮುತ್ತಲ…

Sathish Ninasam यांनी वर पोस्ट केले सोमवार, १२ ऑगस्ट, २०१९

ಈ ಪ್ರವಾಹದಿಂದ ಆದಷ್ಟು ಬೇಗ ನಮ್ಮ ಜನ ಹೊರಬರಲಿ ಎಂದು ಪ್ರಾರ್ಥಿಸೋಣ ಧನ್ಯವಾದಗಳು…..

Sathish Ninasam यांनी वर पोस्ट केले शनिवार, १० ऑगस्ट, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here