ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದರೂ ಕೂಡಾ ಅಮೆರಿಕಾದಲ್ಲಿ ಶ್ವೇತಭವನವು ಅಲ್ಲಿನ ರಾಜ್ಯಗಳನ್ನು ಶಾಲೆಗಳನ್ನು ತೆರೆಯುವಂತೆ ಒತ್ತಡವನ್ನು ಹೇರುತ್ತಿವೆ. ಅಮೆರಿಕಾದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 3 ಮಿಲಿಯನ್ ದಾಟಿದ್ದು, ಒಂದು ಲಕ್ಷದ 32 ಸಾವಿರದ ಜನ ಈಗಾಗಲೇ ಕೊರೊನಾದಿಂದ ಮೃತರಾಗಿದ್ದರೂ ಕೂಡಾ ಸರ್ಕಾರ ತನ್ನ ಹಠವನ್ನು ಬಿಡುತ್ತಿಲ್ಲ ಎನ್ನಲಾಗಿದೆ. ಶಾಲೆಗಳು ವೈಯಕ್ತಿಕವಾಗಿ ಕಲಿಯುವುದನ್ನು ಮತ್ತೆ ಆರಂಭ ಮಾಡಬೇಕೆಂದು ಇಲ್ಲವಾದಲ್ಲಿ ಶಾಲೆಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸುವುದಾಗಿ ಅಮೆರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡಿ ಎಚ್ಚರಿಕೆಯನ್ನು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳನ್ನು (ಸಿಡಿಸಿ) ಅವುಗಳ ಕಠಿಣ ಮಾರ್ಗಸೂಚಿಗಳನ್ನು ಕೂಡಾ ಟೀಕೆ ಮಾಡಿದ್ದಾರೆ.‌ ಇದು ಮಾತ್ರವೇ ಅಲ್ಲದೇ ಉಪಾಧ್ಯಕ್ಷರಾದ ಮೈಕ್ ಪೆನ್ಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಮುಂದಿನ ವಾರ ಶಾಲೆಗಳನ್ನು ಪುನಃ ತೆರೆಯುವ ವಿಚಾರವಾಗಿ ಸಿಡಿಸಿ ಹೊಸ ಮಾರ್ಗದರ್ಶನವನ್ನು ನೀಡುವುದು ಎಂದು ಹೇಳಿದ್ದಾರೆ.‌ ಸಿಡಿಸಿಯ ನಿಯಮಗಳೇ ಶಾಲೆಗಳು ತೆರೆಯದಿರಲು ಕಾರಣ ಎಂದು ಕೂಡಾ ಅವರು ಹೇಳಿದ್ದಾರೆ. ‌

ಮಂಗಳವಾರ ಸರ್ಕಾರಿ ಅಧಿಕಾರಿಗಳು ಮತ್ತು ಶಾಲಾ‌ ಅಧಿಕಾರಿಗಳೊಂದಿಗೆ ಶ್ವೇತ ಭವನದಲ್ಲಿ ಸಭೆ ನಡೆಸಿದ ಟ್ರಂಪ್ ನಾವು ಶಾಲೆಗಳನ್ನು ತೆರೆಯಲು ರಾಜ್ಯಪಾಲರು ಮತ್ತು ಇತರೆ ಎಲ್ಲರ ಮೇಲೆ ಒತ್ತಡವನ್ನು ಹೇರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಶಾಲೆಗಳನ್ನು ಮುಚ್ಚಿ ದೇಶ ಹಿಂದಕ್ಕೆ ಹೋಗುವುದನ್ನು ನಾವು ಬಯಸುವುದಿಲ್ಲ ಮತ್ತು ಇದನ್ನು ಪರಿಗಣಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here