ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಹಾಗೂ ಇದು ಅಂತಹ ವಿಶೇಷ ಅಥವಾ ವಿಶ್ಲೇಷಣೆಗೆ ಒಳ ಪಡಿಸುವಂತಹ ವಿಷಯವೇನೂ ಅಲ್ಲ. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿಯ ಉಡುಪನ್ನು ಧರಿಸುವ ವಸ್ತ್ರ ಸಂಹಿತೆ ಬಹುತೇಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಬಹಳ ಹಿಂದಿನಿಂದಲೂ ಇರುವ ಪದ್ಧತಿ.ಆದರೆ ಮುಂಬಯಿನ ಬಳಿಯ ಪುಣೆ ಅಥವಾ ಪೂನಾದ ವಿಶ್ವಶಾಂತಿ ಗುರುಕುಲ ಶಾಲೆ, ಅಲ್ಲಿನ ವಿದ್ಯಾರ್ಥಿನಿಯರಿಗಾಗಿ ಒಂದು ಹೊಸ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿದ್ದು, ಅದನ್ನು ವಿದ್ಯಾರ್ಥಿಗಳ ಡೈರಿಯಲ್ಲಿ ನಮೂದಿಸಿದೆ. ಈ ನೂತನ ಸಂಹಿತೆಯ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರು ಬಿಳಿಯ ಅಥವಾ ಚರ್ಮ ಬಣ್ಣದ ಒಳ ಉಡುಪನ್ನೇ ಧರಿಸಬೇಕೆಂದು.

 

ಇದರ ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ನಿಗಧಿತ ಅವಧಿಯಲ್ಲಿ ಮಾತ್ರವೇ ಶಾಲೆಯ ಶೌಚಾಲಯ ಬಳಸಬೇಕೆಂದು, ಆ ಸಮಯ ಮುಗಿದ ನಂತರ ತುರ್ತು ಸಂದರ್ಭದಲ್ಲಿ ಅಥವಾ ವೈದ್ಯಕೀಯ ಕಾರಣಗಳಿಂದ ಶೌಚಾಲಯ ಬಳಸಬೇಕಾದಲ್ಲಿ ವಿದ್ಯಾರ್ಥಿಗಳು ಅನುಮತಿ ಪಡೆದು, ಜೊತೆಯಲ್ಲಿ ತಮ್ಮ ಗೆಳೆಯ ಅಥವಾ ಹುಡುಗಿಯಾದಲ್ಲಿ ಗೆಳತಿಯೊಬ್ಬಳನ್ನು ಕರೆದುಕೊಂಡು ಹೋಗಬೇಕೆಂಬ ಕಾನೂನನ್ನು ಸಹಾ ಮಾಡಿದ್ದು ಇದು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಪೋಷಕರು ಇದರ ವಿರುದ್ಧ ದೂರು ನೀಡಿದ್ದಾರೆ.

ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯು, ಈ ಹಿಂದೆ ಕೆಲವು ಹೆಣ್ಣು ಮಕ್ಕಳು ನೀಡಿದ ದೂರು ಹಾಗೂ ಅವರ ಸಮಸ್ಯೆಗಳನ್ನು ಅರಿತು ಈ ಹೊಸ ನೀತಿ ಜಾರಿಗೊಳಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿನಿಯರ ಪೋಷಕರನ್ನು ಕರೆದು ಮಾತನಾಡುವುದಕ್ಕೆ ಸಾಧ್ಯವಿಲ್ಲದ ಕಾರಣ ದಿನಚರಿಯಲ್ಲಿ ನಮೂದಿಸಲಾಗಿದೆಯೆಂದೂ, ಹಾಗೂ ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಶೌಚಾಲಯದ ಬಳಕೆಯ ಮೇಲೆ ನಿಗಾ ವಹಿಸಲು ಈ ರೀತಿ ಶೌಚಾಲಯ ಬಳಸುವ ಸಮಯ ನಿಗಧಿ ಮಾಡಲಾಗಿದೆ. ತುರ್ತು ಇದ್ದಾಗ ವಿದ್ಯಾರ್ಥಿಗಳಿಗೆ ಹೋಗಲು ಅನುಮತಿ ನೀಡಲಾಗುವುದು ಎಂದು ಹೇಳಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here