ಶಿಕ್ಷಕ ಅಥವಾ ಶಿಕ್ಷಕಿ ಎಂದರೆ ಸಮಾಜದಲ್ಲಿ ದೇವರ ಸ್ಥಾನ ಕೊಟ್ಟು ಪೂಜಿಸುತ್ತಾರೆ. ಅದೆಷ್ಟೋ ಮಕ್ಕಳ ಭವಿಷ್ಯಕ್ಕೆ ದಾರಿ ದೀಪ ಆಗಬೇಕಿರುವ ಶಿಕ್ಷಕರನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆದರ್ಶರಾಗಿ ಇಟ್ಟುಕೊಳ್ಳುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಆದರೆ ಇಲ್ಲೊಬ್ಬ ಶಿಕ್ಷಕ ಮಾಡಿದ ಕೆಲಸ ನೋಡಿದ್ರೆ ಪಿತ್ತ ನೆತ್ತಿಗೆ ಏರದೇ ಇರಲ್ಲ… ಶಾಲೆಯ ಶೌಚಾಲಯದಲ್ಲಿ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಶಿಕ್ಷಕನನ್ನು ಗ್ರಾಮಸ್ಥರೇ ಹಿಡಿದು ಥಳಿಸಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆ ಪುದುಚತ್ರಂ ಬಳಿಯ ಎಸ್.ಉದುಂಬಮ್ ಎಂಬ ಗ್ರಾಮದಲ್ಲಿ ನಡೆದಿದೆ.

 

ಶಾಲೆಯ ಪಕ್ಕದಲ್ಲಿರುವ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಜತೆ ಶಿಕ್ಷಕ ಸರವಣನ್ ಎಂಬುವರರು ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಆತ ಕಳೆದ ಕೆಲವು ತಿಂಗಳುಗಳಿಂದ ಶಾಲೆಯ ಶೌಚಾಲಯದಲ್ಲಿ ಆಕೆಯೊಂದಿಗೆ ರಾಸಲೀಲೆಯಲ್ಲಿ ತೊಡಗುತ್ತಿದ್ದ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ವಿಷಯವನ್ನು ಪೋಷಕರಿಗೆ ತಿಳಿಸಿದ್ದರು.ಮಂಗಳವಾರ ಬೆಳಿಗ್ಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಶಾಲೆಯ ಬಳಿ ಜಮಾಯಿಸಿ, ಶಿಕ್ಷಕ ಸರವಣನ್ ನನ್ನು ಹಿಡಿದು ಮಹಿಳೆಯೊಂದಿಗಿನ ಅಕ್ರಮ ಸಂಬಂಧ ವಿಷಯ ಪ್ರಸ್ತಾಪಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಮಹಿಳೆಯರು ಶಿಕ್ಷಕನಿಗೆ ಚಪ್ಪಲಿ ಹಾಗೂ ಪೊರಕೆಯಿಂದ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದರು. ಈ ವಿಷಯ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಜಯರಾಜ್ ಮಾತನಾಡಿ, “ಎರಡು ತಿಂಗಳ ಹಿಂದೆ ಇದೇ ರೀತಿ ಸರವಣನ್ ಅವರು ಮಹಿಳೆಯೊಂದಿಗೆ ಶಾಲೆಯ ಶೌಚಾಲಯಲ್ಲಿರುವ ಮಾಹಿತಿ ತಿಳಿಯಿತು. ಕೂಡಲೇ ಅಲ್ಲಿಗೆ ತೆರಳಿದಾಗ ಶೌಚಾಲಯದ ಬೀಗ ಹಾಕಲಾಗಿತ್ತು. ಶೌಚಾಲಯ ಬೀಗ ತೆಗೆದು ಒಳಗೆ ನೋಡಿದಾಗ ಮಹಿಳೆ ಒಳಗೆ ಇದ್ದಳು. ನಂತರ ಸರವಣನ್ ಅವರಿಗೆ ಎಚ್ಚರಿಕೆ ನೀಡಿದ್ದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here