ಇಂದಿನಿಂದ ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ.ರಾಜ್ಯಾದ್ಯಂತ ಸುಮಾರು 690150 ವಿಧ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ವಿಧ್ಯಾರ್ಥಿಗಳು ಕಾಪಿ ಮಾಡದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪೋಲೀಸ್ ಕೂಡ ನೇಮಿಸಲಾಗಿದೆ.

ಈ ಸಂದರ್ಭದಲ್ಲಿ ನಮ್ಮ ಸುದ್ದಿಮನೆ ವೆಬ್ಸೈಟ್ ತಂಡದ ವತಿಯಿಂದ ಎಲ್ಲಾ ವಿಧ್ಯಾರ್ಥಿಗಳಿಗೆ ಶುಭಾಷಯ ತಿಳಿಸುತ್ತೇವೆ.ಎಲ್ಲಾ ವಿಧ್ಯಾರ್ಥಿಗಳು ಚೆನ್ನಾಗಿ ಓದಿಕೊಳ್ಳಿ.ಜಾಸ್ತಿ ಒತ್ತಡ ಹಾಕಿಕೊಳ್ಳದಿರಿ.ಪರೀಕ್ಷಾ ಕೇಂದ್ರಗಳಿಗೆ ಇಪ್ಪತ್ತು ನಿಮಿಷ ಮುಂಚಿತವಾಗಿ ಹೋಗಿ.ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಓದಿಕೊಳ್ಳಿ.ನಿಮಗೆ ಗೊತ್ತಿರುವ ಉತ್ತರಗಳನ್ನು ಮೊದಲು ಬರೆಯಿರಿ.ಎಲ್ಲಾ ಉತ್ತರಗಳನ್ನು ಬರೆಯುವಾಗ ಗೊಂದಲವಾಗದಿರಿ.ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಮಾಡಿ .ಮುಂಜಾನೆ ಬೇಗ ಎದ್ದು ಒಂದು ತಾಸು ಗಮನದಲ್ಲಿಟ್ಟುಕೊಂಡು ಓದಿಕೊಳ್ಳಿ.ಒಂದು ವೇಳೆ ನಿಮಗೆ ಪ್ರಶ್ನೆಗೆ ಉತ್ತರ ಗೊತ್ತಿರದಿದ್ದರೆ ಸಂಬಂಧಿಸಿದ ಉತ್ತರ ಬರೆಯಲು ಪ್ರಯತ್ನಿಸಿ.ಪರೀಕ್ಷೆ ಬರೆಯುವಾಗ ಆರಾಮಾಗಿರಿ.ಆಲ್ ದ ಬೆಸ್ಟ್ ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಿಗೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here