ಕೊಲೆ ಆರೋಪಿಗಳೊಂದಿಗೆ ಉತ್ಸಾಹದಿಂದ ಸೆಲ್ಫಿ ತೆಗೆದುಕೊಂಡಿದ್ದರು ಪೊಲೀಸ್ ಅಧಿಕಾರಿಯೊಬ್ಬರು, ಆ ಸೆಲ್ಫಿ ಸಿಕ್ಕಾಪಟ್ಟೇ ವೈರಲ್ ಆದ ನಂತರ ಒಡಿಶಾ ಪೊಲೀಸ್ ಇಲಾಖೆ ಮಂಗಳವಾರ ಸಂಜೆ, ಪುರಿ ಜಿಲ್ಲೆಯ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದು, ಆ ವಿಷಯವನ್ನು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆ ಆರೋಪಿಯೊಂದಿಗೆ ಇನ್ಸ್‌ಪೆಕ್ಟರ್ ತೆಗೆದುಕೊಂಡು ಸೆಲ್ಫಿ ಪೊಲೀಸ್ ಇಲಾಖೆಯ ಮುಖ ಕೆಂಪಾಗಲು ಕಾರಣವಾಗಿತ್ತು. ಕೊಲೆಯ ಆರೋಪಿ ರಾಧಾ ಮೋಹನ್ ಬಿಸ್ವಾಲ್ ಅಲಿಯಾಸ್ ಮುನ್ನಾ ಅವರ ಸೆಲ್ಫಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಫೋಟೋ ವೈರಲ್ ಆದ ನಂತರ ಚಂದ್ರಭಾಗ ಸಾಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬುಲು ಮುಂಡಾ ಅವರನ್ನು ಸೋಮವಾರ ತಡರಾತ್ರಿ ಜಿಲ್ಲಾ ಪೊಲೀಸ್ ಪ್ರಧಾನ ಕಛೇರಿಗೆ ವರ್ಗಾಯಿಸಲಾಯಿತು. ಹಿರಿಯ ಅಧಿಕಾರಿಗಳು ಆಗ ಇಲಾಖೆ ಅವರ ವಿರುದ್ಧ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೂಡಾ ಹೇಳಿದ್ದರು. ಕಳೆದ ಅಕ್ಟೋಬರ್ 5 ರಂದು ಅಲಾಸಾಹಿಯಲ್ಲಿ ದಿಲೀಪ್ ಸ್ವೈನ್ ಎಂಬ ಯುವಕನನ್ನು ಕೊಲೆ ಮಾಡಿದ ಆರೋಪವನ್ನು ಬಿಸ್ವಾಲ್ ಮೇಲೆ ಹೊರಿಸಲಾಗಿದೆ. ಬಿಸ್ವಾಲ್ ಸ್ವೈನ್‌ನನ್ನು ತಂದೆಯ ಮುಂದೆ ಕೊಂದಿದ್ದಾನೆ ಮತ್ತು ಪರಾರಿಯಾಗಿದ್ದಾನೆ ಎಂಬುದು ಬಿಸ್ವಾಲ್ ಮೇಲಿನ ಆರೋಪ.

 

 

ಇದು ಮಾತ್ರವಲ್ಲದೆ, ಕೊಲೆ ಯತ್ನದ 4 ಪ್ರಕರಣಗಳು ಸೇರಿದಂತೆ ಬಿಸ್ವಾಲ್ ಇತರ ಆರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಬಿಸ್ವಾಲ್ ನನ್ನು ಸೋಮವಾರ ಬಂಧಿಸಲಾಗಿತ್ತು. ಆತನನ್ನು ಬಂಧಿಸಿದ ನಂತರ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುವ ಸಮಯದಲ್ಲಿ, ಚಂದ್ರಭಾಗ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅವರು ಪೊಲೀಸ್ ವ್ಯಾನ್‌ನೊಳಗೆ ಆತನ ಜೊತೆ ಸೆಲ್ಫಿಯನ್ನು ಕ್ಲಿಕ್ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು. ನಂತರ ಫೋಟೋವನ್ನು ವ್ಯಾಪಕವಾಗಿ ಶೇರ್ ಆಗಿ ಪೋಲಿಸ್ ಇಲಾಖೆಯು ಕಠಿಣ ಕ್ರಮಕ್ಕೆ ಮುಂದಾಯಿತೆನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here