ಇನ್ನು ಮುಂದೆ ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಯಾವುದೇ ರೀತಿಯ ನಿರ್ಬಂಧಗಳು ಇಲ್ಲ. ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಳ್ಳಬೇಕೆಂಬ ಗೀಳಿರುವ ಸೆಲ್ಫಿ ಪ್ರಿಯರಿಗೆಲ್ಲಾ ಇದೊಂದು ಸಂತಸದ ಸುದ್ದಿಯಾಗಿದೆ. ಈ ಹಿಂದೆ ಭಾರತದಲ್ಲಿ ಐತಿಹಾಸಿಕ ಸ್ಮಾರಕಗಳ‌ ಮುಂದೆ ಕಾನೂನು ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಅಪರಾಧವಾಗಿತ್ತು. ಆದರೂ ಅದರ ಮಾಹಿತಿಯೇ ಇಲ್ಲದ ಹಲವರು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಅಲ್ಲದೆ ಸ್ಮಾರಕಗಳ ಬಳಿ ಅವರು ಸೆಲ್ಫಿ ತೆಗೆದುಕೊಳ್ಳುವುದನ್ನು ಗಮನಿಸುವುದು ತುಸು ಕಷ್ಟವೇ ಸರಿ. ಈಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಸೆಲ್ಫಿ ತೆಗೆದುಕೊಳ್ಳಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.

ರಾಷ್ಟ್ರೀಯ ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಈ ಹಿಂದೆ ಅನುಮತಿ ನೀಡಲಾಗಿರಲಿಲ್ಲ. ರಾಷ್ಟ್ರ ಸ್ಮಾರಕಗಳ ರಕ್ಷಣೆ, ಅವುಗಳ ಸಂರಕ್ಷಣೆ, ವಾಣಿಜ್ಯಕ್ಕಾಗಿ ಫೋಟೋಗಳನ್ನು ಬಳಸುವುದು ಹೀಗೆ ಹತ್ತು ಹಲವು ಕಾರಣಗಳಿಗಾಗಿ ರಾಷ್ಟ್ರೀಯ ಸ್ಮಾರಕಗಳ ಮುಂದೆ ಸೆಲ್ಫಿ ನಿಷೇಧಿಸಲಾಗಿತ್ತು. ಆದರೆ ಈಗ ಆ ಎಲ್ಲಾ ನಿಷೇಧಗಳನ್ನು ತೆರವುಗೊಳಿಸುವ ಮೂಲಕ ಎಲ್ಲರಿಗೂ ಮುಕ್ತವಾಗಿ ಸೆಲ್ಫಿ ತೆಗೆದುಕೊಳ್ಳುವ ಅವಕಾಶವನ್ನು ಮಾಡಲಾಗಿದೆ.ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ರಾಷ್ಟ್ರೀಯ ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುವ ವಿಷಯದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು. ಇದಾದ ನಂತರ ಭಾರತೀಯ ಪುರಾತತ್ವ ಪರಿವೀಕ್ಷಣಾ ಇಲಾಖೆ ಮೋದಿಯವರ ಮಾತನ್ನು ಅರ್ಥ ಮಾಡಿಕೊಂಡಂತೆ , ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಇದ್ದ ಎಲ್ಲಾ ತಡೆಗಳನ್ನು ತೆಗೆದು ಹಾಕುತ್ತಿರುವುದಾಗಿ ಘೋಷಿಸಿದೆ. ಇದರಿಂದ ಸೆಲ್ಫಿ ಪ್ರಿಯರಿಗೆ ಬಹಳ ಸಂತೋಷವಂತೂ ಆಗಿದೆ.

ಸೆ

ಆದರೆ ಈಗಾಗಲೇ ಸೆಲ್ಫಿ ಹುಚ್ಚಿಗೆ ಹಲವರು ಪ್ರಾಣ ಕಳೆದುಕೊಂಡ ಘಟನೆಗಳು ವರದಿಯಾಗಿರುವುದರಿಂದ ಸ್ವಲ್ಪ ಆತಂಕವಂತೂ ಇಲ್ಲಿದೆ.ಇದರ ಜೊತೆಗೆ ಅಜಂತಾ ಎಲ್ಲೋರ ಗಳಂತಹ ಚಿತ್ರಕಲೆಗಳನ್ನು ಹೊಂದಿರುವ ಗುಹೆಗಳ ಮುಂದೆ ಮಾತ್ರ ಸೆಲ್ಫಿ ತೆಗೆದುಕೊಳ್ಳಲು ಇರುವ ನಿರ್ಬಂಧಗಳನ್ನು ಮುಂದುವರೆಸಲಾಗಿದೆ. ಇತರೆ ಎಲ್ಲಾ ರೀತಿಯ ರಾಷ್ಟ್ರೀಯ ಸ್ಮಾರಕಗಳ ಮುಂದೆ ಅವಕಾಶವನ್ನು ನೀಡಲಾಗಿದೆ. ಇನ್ನು ಭಾರತೀಯ ರಾಷ್ಟ್ರೀಯ ಸ್ಮಾರಕಗಳ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಕಾಣಿಸಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ‌. ಅಲ್ಲದೆ ಈ ಸೆಲ್ಫಿ ಹುಚ್ಚಿನಿಂದ ಯಾರ್ಯಾರು ಪ್ರಾಣಕ್ಕೆ ಕಂಟಕ ತಂದುಕೊಳ್ಳುವರೋ ತಿಳಿದಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here