ಸೆರೆನಾ ವಿಲಿಯಮ್ಸ್‌ ಮಹಿಳಾ ಟೆನಿಸ್ ನಲ್ಲಿ ವಿಶ್ವ ಪ್ರಸಿದ್ದಿ ತನ್ನ ಪಾಲಾಗಿಸಿಕೊಂಡಿರುವ ಕ್ರೀಡಾಪಟು. ಈಕೆಯ ಸಾಧನೆ ಅಪರೂಪ ಹಾಗೂ ಅಸಾಮಾನ್ಯ ಎಂದೇ ಹೇಳಬಹುದು. ಈಗ ಸದ್ಯಕ್ಕೆ ಸೆರೆನಾ ಯಾವುದೇ ವಿಶ್ವ ಚಾಂಪಿಯನ್ ಶಿಪ್ ಪಡೆದಿಲ್ಲ. ಬದಲಿಗೆ ತಮ್ಮ ವಿಡಿಯೋ ಒಂದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಲು ಬಿಟ್ಟು, ದೊಡ್ಡ ಸುದ್ದಿ ಮಾಡಿದ್ದಾರೆ. ಕಳೆದ ಯುಎಎಸ್ ಓಪನ್ ಟೆನ್ನಿಸ್ ನಲ್ಲಿ ತಮ್ಮ ನಡವಳಿಕೆಯಿಂದಾಗಿ ವಿವಾದಕ್ಕೆ ಗುರಿಯಾಗಿದ್ದ ಸೆರಾನಾ ಈಗ ಮತ್ತೊಮ್ಮೆ ತಮ್ಮ ವಿಡಿಯೋ ಮೂಲಕ ಇಂಟರ್ನೆಟ್ ಸಂಚಲನವನ್ನು ಸೃಷ್ಟಿಸಿದ್ದಾರೆ.

ಸೆರೆನಾ ವಿಲಿಯಮ್ಸ್ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಟಾಪ್ ಲೆಸ್ ಆಗಿ, ತಮ್ಮ ಕೈಯಿಂದ ಎದೆ ಭಾಗವನ್ನು ಮುಚ್ಚಿ, 1991 ರ ಆಸ್ಟ್ರೇಲಿಯನ್ ಬ್ಯಾಂಡ್ ನ ಹಿಟ್ ಸಾಂಗ್ “ಐ ಟಚ್ ಮೈ ಸೆಲ್ಫ್” ಎಂಬ ಹಾಡನ್ನು ಹಾಡುವ ಮೂಲಕ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ತರಲು ಪ್ರಯತ್ನಿಸಿದ್ದಾರೆ. ಭಾನುವಾರ ಅವರು ತಮ್ಮ ಈ ಸೆನ್ಷೇಷನಲ್ ವಿಡಿಯೋ ವನ್ನು ಇನ್ಸ್ಟಾಗ್ರಾಂ ನಲ್ಲಿ ಅಪಲೋಡ್ ಮಾಡಿದ್ದಾರೆ. ವೀಡಿಯೋ ಹಾಕಿದ ಹತ್ತು ಗಂಟೆಗಳ ಅವಧಿಯಲ್ಲೇ 1.3 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಹಳಷ್ಟು ಸುದ್ದಿ ಮಾಡಿದ್ದು, ದೊಡ್ಡ ಕ್ರೇಜ್ ಸೃಷ್ಟಿಸಿದೆ.

ಆಕೆ ಹಾಡಿರುವ ಹಾಡನ್ನು ಬರೆದವರು ಡಿವಿನಿಲ್ಸ್ , ಅವರು ಕೂಡಾ ಸ್ತನ ಕ್ಯಾನ್ಸರ್ ನಿಂದಾಗಿ ಕೊನೆಯುಸಿರೆಳೆದವರು. ಅದಕ್ಕಾಗಿಯೇ ಆ ಹಾಡನ್ನು ಬಳಸಿರುವುದಾಗಿ ಸೆರೆನಾ ಹೇಳಿದ್ದಾರೆ. ಅಲ್ಲದೆ ಆಕೆ ಪ್ರತಿ ಮಹಿಳೆ ತನ್ನ ಸ್ತನಗಳನ್ನು ತಾನೇ ಪರೀಕ್ಷಿಸಿಕೊಳ್ಳಬೇಕು. ರೋಗ ಬರುವ ಮೊದಲೇ ಅದರ ಬಗ್ಗೆ ಜಾಗರೂಕರಾಗಬೇಕೆಂಬುದು ನನ್ನ ಆಶಯ ಎಂದಿದ್ದಾರೆ. ಅಲ್ಲದೆ ಸೆರೆನಾ ಅವರ ವಿಡಿಯೋಗೆ ಹಲವರು ಮೆಚ್ಚುಗೆ ಸೂಚಿಸಿರುವುದು ಮಾತ್ರವಲ್ಲ. ಅವರ ಈ ನಡೆಯ ಬಗ್ಗೆ ಮೆಚ್ಚುಗೆಯನ್ನು ಹಲವು ಮಹಿಳೆಯರು ತಮ್ಮ ಕಾಮೆಂಟ್ ಗಳ ಮೂಲಕ ತಿಳಿಸಿದ್ದಾರೆ. ಸೆರೆನಾ ಅವರ ಈ ದಿಟ್ಟ ಹೆಜ್ಜೆಗೆ ಹಲವರು ಮಾರು ಹೋಗಿದ್ದಾರೆ. ಈ ವಿಡಿಯೋ ಇನ್ನೂ ಎಷ್ಟು ಪ್ರಭಾವ ಬೀರಲಿದೆಯೆಂಬುದು ಕಾದು ನೋಡಬೇಕಿದೆ.ಸೆರೆನಾ ವಿಲಿಯಂ ಮಾಡಿರುವ ವೀಡಿಯೋ ಇಲ್ಲಿದೆ ನೋಡಿ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here