ಕಿರು ತೆರೆ ಲೋಕದಲ್ಲಿ ಧಾರಾವಾಹಿಗಳದ್ದೇ ರಾಜ್ಯ. ಇಲ್ಲಿ ಪ್ರೇಕ್ಷಕರು ಧಾರಾವಾಹಿಗಳನ್ನು ನೋಡಲು ಸಾಕಷ್ಟು ಉತ್ಸುಕರಾಗಿರುತ್ತಾರೆ ಮತ್ತು ಹಲವರಿಗೆ ಈ ಧಾರಾವಾಹಿಗಳು ಅವರ ಜೀವನದ ಅವಿಭಾಜ್ಯ ಅಂಗ ಕೂಡಾ ಆಗಿ ಬಿಟ್ಟಿರುತ್ತದೆ. ಇಂತಹ ಧಾರಾವಾಹಿಗಳ ಲೋಕದಲ್ಲೊಂದು ಸಂಚಲನವನ್ನು ಹುಟ್ಟು ಹಾಕಿರುವುದು ಝೀ ಕನ್ನಡದ ಜೊತೆ ಜೊತೆಯಲಿ ಧಾರಾವಾಹಿ. ಒಂದು ಹೊಸ ಕಥೆ, ಹೊಸ ವಿಚಾರ ಧಾರೆ, ಕಥೆಯ ಜೊತೆ ಜೊತೆಗೆ ಜೀವನ ಪಾಠ ಹೀಗೆ ವಿವಿಧ ಅಂಶಗಳಿಂದ ದಿನದಿಂದ ದಿನಕ್ಕೆ ಜನಪ್ರಿಯತೆಯ ಉತ್ತುಂಗ ವೇರಿದ ಈ ಧಾರಾವಾಹಿ ಮೊದಲ ವಾರದಲ್ಲೇ ಟಿ ಆರ್ ಪಿ ಯಲ್ಲಿ ದಾಖಲೆ ಬರೆದು ಮೊದಲ ಸ್ಥಾನ ಪಡೆಯಿತು.

ವಾರದಿಂದ ವಾರಕ್ಕೆ ಟಿ ಆರ್ ಪಿ ಹೆಚ್ಚಿ ಜೊತೆ ಜೊತೆಯಲಿ ಹೊಸ ಇತಿಹಾಸವನ್ನು ಬರೆಯುವಾಗಲೇ ಕಳೆದ ವಾರ ಈ ಧಾರಾವಾಹಿಯ ಟಿ ಆರ್ ಪಿ ಯನ್ನು ಮೀರಿ ಮತ್ತೊಂದು ಧಾರಾವಾಹಿ ನಂಬರ್ ಒನ್ ಸ್ಥಾನ ಪಡೆಯಿತು ಎಂಬ ಸುದ್ದಿ ಆನ್ ಲೈನ್ ಮಾದ್ಯಮವೊಂದರಲ್ಲಿ ಬಂದು ಜನರು ಆಶ್ಚರ್ಯ ಪಟ್ಟರು. ಮಾದ್ಯಮದಲ್ಲಿ ಬಂದಿರುವ ಸುದ್ದಿಯ ಪ್ರಕಾರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮಂಗಳ ಗೌರಿ ಧಾರಾವಾಹಿ ಕಳೆದ ವಾರ ಮನರಂಜನೆಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ ಎಂದು, ಇನ್ನೊಂದು ಮಾದ್ಯಮದಲ್ಲಿ ಇಲ್ಲವೆಂದು ರೇಟಿಂಗ್ ಚಾರ್ಟ್ ಗಳನ್ನು ನೋಡಿ ಜನ ಯಾವುದು ಸರಿ? ಯಾವುದು ಸುಳ್ಳು? ಎಂದು ಗೊಂದಲಕ್ಕೆ ಈಡಾದರು.

ಹೀಗೆ ಯಾವ ಧಾರಾವಾಹಿ ನಂಬರ್ ಒನ್ ನಲ್ಲಿ ಇತ್ತು ಎಂದು ಜನರು ಯೋಚಿಸುವಾಗಲೇ ಜೊತೆ ಜೊತೆಯಲಿ ಧಾರಾವಾಹಿಯ ನಾಯಕ ಅನಿರುದ್ ಅವರು ಮಾತ್ರ ಒಂದು ಅತ್ಯುತ್ತಮ ಹೇಳಿಕೆಯನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ
ಧನ್ಯವಾದಗಳು.. “ಪ್ರತಿಯೊಂದು ಧಾರಾವಾಹಿಯಲ್ಲೂ ತಂಡದ ಪರಿಶ್ರಮವಿದೆ.. ಪ್ರೇಕ್ಷಕರನ್ನು ಮನರಂಜಿಸುವುದೊಂದೆ ಎಲ್ಲರ ಪರಮ ಧ್ಯೇಯ.. ಎಲ್ಲರಿಗೂ ಶುಭವಾಗಲಿ.. “#Anirudh ಎಂದು ಪೋಸ್ಟ್ ಮಾಡಿ ಒಂದು ಅತ್ಯುತ್ತಮ ಮನಸ್ತತ್ವವನ್ನು ಎಲ್ಲರಿಗೂ ಶುಭ ಕೋರುವ ವ್ಯಕ್ತಿತ್ವವನ್ನು ಮೆರೆದು ಮಾದರಿ ಎನಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here