ಕೊರೊನಾ ಎಂಬ ಮಹಾ ಮಾರಿಗೆ ಜಗತ್ತೇ ತಲ್ಲಣಿಸಿದೆ. ವಿಶ್ವದ ರಾಷ್ಟ್ರಗಳು ಈ ಮಹಾ ಮಾರಿಯನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿವೆ. ಇನ್ನು ಈ ವೈರಸ್ ಬಡವ, ಶ್ರೀಮಂತ, ಗಂಡು, ಹೆಣ್ಣು, ಜಾತಿ, ಧರ್ಮ ಅಥವಾ ಹಿರಿಯರು ಕಿರಿಯರು ಎಂಬ ಯಾವುದೇ ಬೇಧವಿಲ್ಲದೆ ಎಲ್ಲರನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಸ್ವಲ್ಪ ಅಜಾಗರೂಕರಾದರೂ ಸೋಂಕು ತಗಲುವು ಅವಕಾಶವಿದೆ. ಇಂತಹ ಸೋಂಕು ಎಳೆಯ ಮಕ್ಕಳನ್ನು ಕೂಡಾ ಬಿಟ್ಟಿಲ್ಲ. ದೇಶದ ಕೆಲವೆಡೆ ಹಸುಗೂಸುಗಳು ಕೂಡಾ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಯನ್ನು ನೀಡಲಾಗುತ್ತಿದೆ.

 

ಮುಂಬೈ ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವರ್ಷವೂ ತುಂಬದ ಒಂದು ಮಗುವಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಗುವಿನ ಆರೈಕೆಯಲ್ಲಿ ನಿರತರಾಗಿರುವ ನರ್ಸ್ ಒಬ್ಬರು ಆ ಮುದ್ದಾದ ಮಗುವನ್ನು ಆಡಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ಕೊರೊನಾ ಏನು ಎಂದು ತಿಳಿಯದ ಆ ಕಂದಮ್ಮನನ್ನು ಕೊರೊನಾ ಕಾಡುತ್ತಿದೆ. ಆದರೆ ಅದರ ಅರಿವಿಲ್ಲದ ಮಗುವಿನ ಮುಗ್ಧತೆ ಅದರ ಮುಖದಲ್ಲಿ ಕಾಣುತ್ತಿದೆ.

ಐಸೋಲೇಶನ್ ವಾರ್ಡ್ ನಲ್ಲಿ ನರ್ಸ್ ಮಗುವಿನ ಆರೈಕೆ ಮಾಡಲು ತಮ್ಮನ್ನು ತಾವು ಸುರಕ್ಷಿತವಾಗಿ ಇಟ್ಟುಕೊಳ್ಳಲು ಧರಿಸಿರುವ ರಕ್ಷಣಾ ವಸ್ತ್ರ ಆ ಮಗುವಿಗೆ ವಿಸ್ಮಯವನ್ನು ಉಂಟು ಮಾಡಿದಂತೆ ಮಗು ನರ್ಸ್ ಅನ್ನು ನೋಡಿಕೊಂಡೇ ಇದ್ದುಬಿಟ್ಟಿದೆ ಮಾತ್ರವಲ್ಲದೇ ಆಕೆಯ ಕೈ ಬೆರಳನ್ನು ಹಿಡಿದು ಮಗು ಆಟವಾಡಿದೆ. ನಿಜಕ್ಕೂ ನೋಡುಗರನ್ನು ಭಾವುಕರನ್ನಾಗಿಸುವ ವಿಡಿಯೋ ನೋಡಿದಾಗ ಈ ಕೊರೊನಾ ಬೇಗ ನಿವಾರಣೆಯಾಗಲಿ ಎನಿಸದೇ ಇರಲಾರದು.

 

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here