ಕೊರೊನಾ ವಿರುದ್ಧ ಹೋರಾಟ ದೇಶದಲ್ಲಿ ಆರಂಭವಾಗಿದೆ. ಈ ಹೋರಾಟಕ್ಕೆ ಕೈ ಜೋಡಿಸಿದ್ದಾರೆ ಸೆಲೆಬ್ರಿಟಿಗಳು, ಉದ್ಯಮಿಗಳು, ಶ್ರೀಮಂತರು ಕೋಟಿ ಕೋಟಿ ಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಮದ್ಯಮ ವರ್ಗದ ಹಾಗೂ ಸಾಮಾನ್ಯ ಜನರು ಕೂಡಾ ತಮ್ಮಿಂದ ಸಾಧ್ಯವಿರುವಷ್ಟು ಹಣವನ್ನು ನೀಡಲು ಮುಂದಾಗಿದ್ದಾರೆ. ಇಂತಹುದೇ ಸನ್ನಿವೇಶದಲ್ಲಿ ಬಾಲಕನೊಬ್ಬ ಮನೆಯವರು ತನಗೆ ಕೊಡುತ್ತಿದ್ದ ಹಣವನ್ನು ಕೂಡಿಟ್ಟಿದ್ದ. ಆ ಹಣವನ್ನು ಈಗ ಕೊರೊನಾ ವಿರುದ್ಧದ ಹೋರಾಟಕ್ಕೆ ಸಿದ್ಧವಾಗಿ ಬಂದಿದ್ದ ಟಾಸ್ಕ್ ಫೋರ್ಸ್ ಸದಸ್ಯರಿಗೆ ನೀಡಿ ಮಾನವೀಯತೆ ಮೆರೆದಿದ್ದಾನೆ.

ಏಳು ವರ್ಷದ ರೊಮೆಲ್ ಲಾಲ್ ಮುವಾನ್ ಸಂಗಾ ಎಂಬ ಬಾಲಕ ಮಿಝೋರಾಂ ನ ಕೊಲಾಸಿಬ್ ವೆಂಗ್ಲೈ ಎಂಬ ಗ್ರಾಮದವನಾಗಿದ್ದು, ಕೊರೊನಾ ವಿರುದ್ಧ ಹೋರಾಟಕ್ಕೆ ಗ್ರಾಮಮಟ್ಟದಲ್ಲಿ ಸ್ಥಾಪಿಸಲಾದ ಟಾಸ್ಕ್ ಪೋರ್ಸ್ ಸದಸ್ಯರು ಬಂದಿದ್ದರು. ಆಗ ರೊಮೆಲ್ ತನ್ನ ಮನೆಯವರು ತನಗೆ ನೀಡಿದ್ದ ಹಣವನ್ನೆಲ್ಲಾ ಕೂಡಿಟ್ಟಿದ್ದ ಪ್ಲಾಸ್ಟಿಕ್ ಕವರ್ ನಲ್ಲಿದ್ದ ಮುನ್ನೂರು ಮೂವತ್ತು ರೂಪಾಯಿಗಳನ್ನು ಟಾಸ್ಕ್ ಫೋರ್ಸ್ ಸದಸ್ಯರಿಗೆ ನೀಡಿದ್ದಾನೆ. ಹಣ ಸ್ವೀಕರಿಸಿದ ಟಾಸ್ಕ್ ಫೋರ್ಸ್ ಸದಸ್ಯರು ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.

ಹೀಗೆ ವಿಷಯ ಮಿಜೋರಾಂ ನ ಮುಖ್ಯಮಂತ್ರಿ ಝೋರಾಮ್ ಥಂಗಾ ಅವರಿಗೆ ತಲುಪಿದೆ. ಅವರು ಬಾಲಕನ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಈ ಸಣ್ಣ ಬಂಡಲ್ ನಲ್ಲಿ 333 ರೂಪಾಯಿಗಳಿದ್ದು, ತನ್ನ ಉಳಿತಾಯದ ಹಣವನ್ನೆಲ್ಲಾ ದೇಣಿಗೆ ನೀಡಿದ ಬಾಲಕನಿಗೆ ಆ ಭಗವಂತನು ಹರಸಲಿ ಎಂದು ಬರೆದುಕೊಂಡಿದ್ದು, ನೆಟ್ಟಿಗರು ಬಾಲಕನ ದೇಣಿಗೆ ಕೋಟಿಗಳಿಗಿಂತ ಕಡಿಮೆ ಏನಿಲ್ಲ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here