ಇಂದು ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ. ಸಮಸ್ತ ಭಾರತದ ಪೌರರಿಗೆ ಒಂದು ಹಬ್ಬದ ಸಂಭ್ರಮ. ಇಂದು 71 ನೇ ಗಣರಾಜ್ಯೋತ್ಸವ ಸಂಭ್ರಮವು ದೇಶದಾದ್ಯಂತ ಸಂತೋಷದಿಂದ ಆಚರಣೆ ಮಾಡಲಾಗುತ್ತಿದೆ. ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಬಹಳ ಸಡಗರದಿಂದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಶಾಲಾ ಮಕ್ಕಳು ಸೇರಿ ಗಣರಾಜ್ಯ ದಿನಕ್ಕೊಂದು ರಂಗನ್ನು ನೀಡಿದ್ದಾರೆ. ಇಂತಹುದೇ ಸಂಭ್ರಮ ದೇಶದ ಗಡಿಯಲ್ಲಿ ಕೂಡಾ ಇದ್ದು, ಸೇನೆಯಲ್ಲಿರುವ ಭಾರತೀಯ ಯೋಧರೂ ಕೂಡಾ ಗಣರಾಜ್ಯೋತ್ಸವ ಸಂಭ್ರಮವನ್ನು ಆಚರಿಸಿ ತಮ್ಮ ದೇಶಾಭಿಮಾನವನ್ನು ತೋರಿದ್ದಾರೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಪಡೆ ಕೊರೆವ ಚಳಿಯನ್ನು ಲೆಕ್ಕಿಸದೆ ಹಿಮ ಪರ್ವತವನ್ನು ಏರಿ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಿ ಶುಭಾಶಯವನ್ನು ಕೋರಿದೆ. ಕೊರೆವ ಚಳಿಯಲ್ಲಿ ಮನೆಯಿಂದ ಹೊರಗೆ ಅಡಿಯಿಡಲು ಕೂಡಾ ಬೆದರುವ ಮಂದಿ, ಬೆಚ್ಚಗೆ ಮನೆಯಲ್ಲೇ ಕುಳಿತು ವಾಟ್ಸಾಪ್, ಫೇಸ್ ಬುಕ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಗಣರಾಜ್ಯೋತ್ಸವ ಶುಭಾಶಯ ಹಂಚಿಕೊಂಡರೆ, ಗಡಿಯಲ್ಲಿರುವ ಯೋಧರು ಆ ಚಳಿಯನ್ನು ಲೆಕ್ಕಿಸದೆ ಪರ್ವತ ಏರಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಐಟಿ ಬಿಟಿ ಪಡೆಯ ಯೋಧರು ಭಾರತದ ಗೌರವವಾದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು, 17,000 ಅಡಿಯ ಹಿಮ ಪರ್ವತವನ್ನು ಏರಿ ಹೋಗಿ, ತೀವ್ರವಾದ ಚಳಿಯನ್ನು ಮೆಟ್ಟಿ ನಿಂತು, ತ್ರಿವರ್ಣ ಧ್ವಜ ಹಾರಿಸಿ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂಬ ಘೋಷಣೆ ಕೂಗಿ ಸಂಭ್ರಮ ಪಟ್ಟಿದ್ದಾರೆ. ಇದಲ್ಲವೇ ನಿಜವಾದ ದೇಶ ಪ್ರೇಮ. ಇಂತಹ ವೀರ ಯೋಧರಿಗೊಂದು ಸಲಾಂ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here