ಶಬರಿ ಮಲೆ ಏರುವ ಮೂಲಕ ಅಲ್ಲಿನ ಬಹುವರ್ಷಗಳ ಸಂಪ್ರದಾಯಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ ಬಿಂದು ಮತ್ತು ಕನಕದುರ್ಗ ಎಂಬ ಇಬ್ಬರು ಮಹಿಳೆಯರು. ಬುಧವಾರ ಮುಂಜಾನೆ 3.45 ಕ್ಕೆ ದೇಗುಲವನ್ನು ಪ್ರವೇಶಿಸಿ ಇಡೀ ದೇಶದಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಇದಾದ ನಂತರ ಇವರ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿಗಳು ಹರಿದಾಡಿ ಕೇರಳದಲ್ಲಿ ಉದ್ರಿಕ್ತ ಪರಿಸ್ಥಿತಿ ಕೂಡಾ ನಿರ್ಮಾಣವಾಗಿತ್ತು. ಇಷ್ಟೆಲ್ಲಾ ಆದ ಮೇಲೆ ಈ ಮಹಿಳೆಯರಿಬ್ಬರು ಮಾಡಿರುವ ಕೆಲಸ ಈಗ ಹಲವರಿಗೆ ಇವರಿಬ್ಬರು ನಿಜವಾಗಿಯೂ ದೈವದ ಮೇಲಿನ ಭಕ್ತಿಯಿಂದ ಆಲಯ ಪ್ರವೇಶವನ್ನು ಮಾಡಿದರೋ ಅಥವಾ ಕೇವಲ ಸಂಪ್ರದಾಯದ ವಿರುದ್ಧ ನಡೆದುಕೊಂಡರೋ ಎಂಬ ಅನುಮಾನಗಳನ್ನು ಹುಟ್ಟು ಹಾಕಿವೆ.

ಇಷ್ಟಕ್ಕೂ ಇವರಿಬ್ಬರು ಮಾಡಿದ ಕೆಲಸವೇನೆಂದರೆ, ಮಾಲೆ ಧರಿಸಿ ಶಬರಿಮಲೈ ಸನ್ನಿಧಾನಕ್ಕೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುವವರು, ಹಿಂದಿರುಗಿದ ನಂತರ ಮಾಲೆಯನ್ನು ತೆಗೆಯುವುದು ಯಾವುದಾದರೂ ಆಲಯದಲ್ಲಿ. ದೇವಸ್ಥಾನದ ಒಳಗೆ ಹೋಗುವಾಗ ಅಯ್ಯಪ್ಪನ ಮಾಲೆ ಹಾಗೂ ಕಪ್ಪು ವಸ್ತ್ರ ಧರಿಸಿದ್ದ ಈ ಮಹಿಳೆಯರಿಬ್ಬರು, ಆಲಯದಿಂದ ಬಂದ ಮೇಲೆ ಹತ್ತಿರದ ಪೋಲಿಸ್ ಠಾಣೆಯಲ್ಲಿ ಮಾಲೆಯನ್ನು ಬಿಚ್ಚಿ, ವಸ್ತ್ರ ಬದಲಿಸಿದ್ದಾರೆ. ಹಾಗೆ ಬಟ್ಟೆ ಧರಿಸಿ ಪೋಲಿಸ್ ಠಾಣೆಯಿಂದ ಹೊರಬರುತ್ತಿರುವ ಅವರ ವಿಡಿಯೋ ಈಗ ವೈರಲ್ ಆಗಿದ್ದು ಈ ಮಹಿಳೆಯರ ಮೇಲೆ ಹಲವರು ಕೆಂಡಾಮಂಡಲವಾಗಿದ್ದಾರೆ.

ನಿಯಮದ ಪ್ರಕಾರವಾದರೆ ಮಾಲೆ ತೆಗೆಯಲು ಯಾವುದಾದರೂ ಆಲಯ, ನದಿ ತೀರದಲ್ಲಿ ಅಥವಾ ಮರಳಿ ಮನೆಗೆ ಬಂದ ನಂತರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಮಾಲೆಯನ್ನು ತೆಗೆಯಬೇಕು. ಆದರೆ ಅಯ್ಯಪ್ಪನ ಆಲಯ ದರ್ಶನ ಮಾಡಲು ಪಾಲಿಸಬೇಕಾದ ನಿಯಮ ಅವರಿಬ್ಬರು ಪಾಲಿಸಿರುವರೋ ಇಲ್ಲವೋ ಎಂಬ ಅನುಮಾನಗಳಿಗೆ ಇನ್ನು ಸ್ಪಷ್ಟ ಉತ್ತರ ಸಿಗುವ ಮೊದಲೇ ಈ ಇಬ್ಬರೂ, ಪೋಲೀಸ್ ಠಾಣೆಯಲ್ಲಿ ಮಾಲೆ ಬಿಚ್ಚಿರುವುದು, ಅವರ ಭಕ್ತಿಯ ಮೇಲೆ ಹಲವರಿಗೆ ಅನುಮಾನ ಹಾಗೂ ಆಕ್ರೋಶ ಎರಡನ್ನೂ ಮೂಡಿಸಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here