ಕಲರ್ಸ್ ಕನ್ನಡ ಚಾನಲ್‌ ಸದಭಿರುಚಿಯ ಹಾಗೂ ನೂತನ‌ ಕಾರ್ಯಕ್ರಮಗಳ‌ ಮೂಲಕ‌ ಕನ್ನ‌ಡ ನಾಡಿನ‌ ಜನರನ್ನು ರಂಜಿಸುತ್ತಾ, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಧಾರಾವಾಹಿಗಳಾಗಲೀ, ರಿಯಾಲಿಟೀ ಶೋಗಳಾಗಲಿ ಎಲ್ಲವೂ ಕಲರ್ ಫುಲ್. ಇದೇ ಕಲರ್ಸ್ ವಾಹಿನಿಯಲ್ಲಿ ಕರ್ಮ‌ ಫಲದಾತ ‘ಶನಿ’ ಧಾರಾವಾಹಿ ಪ್ರಾರಂಭವಾದ ಮೇಲೆ , ಶನಿ ಎಂದರೆ ತೊಂದರೆ ಕೊಡುವ ದೇವರು ಎಂಬ ನಂಬಕೆಯನ್ನೇ ಇಟ್ಟುಕೊಂಡಿದ್ದ‌ ಜನರಿಗೆ , ಶನಿ ಕೇವಲ‌ ಕರ್ಮಾನುಸಾರ ನಮಗೆ ಸಂಕಟ ನೀಡುವುನೆಂದು , ಸುಕರ್ಮಿಗಳಿಗೆ ಆತನಿಂದ ನಷ್ಟ ಇಲ್ಲವೆಂದು ಅರ್ಥೈಸುತ್ತಿದೆ ಈ ಧಾರಾವಾಹಿ.

ಇನ್ನು ಈ ಧಾರಾವಾಹಿಯಲ್ಲಿ ಬಾಲ‌ ಶನಿಯಾಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಬಾಲ‌ ನಟ ಸುನೀಲ್, ಈತನ ನಟನೆ ಈಗ ರಾಜ್ಯದಲ್ಲಿ ಜನಜನಿತ. ಬಹುಶಃ ಶನಿಯ ಪಾತ್ರಕ್ಕೆ ಈ ಹುಡುಗನೇ ಸರಿ ಎನ್ನುವಷ್ಟರ ಮಟ್ಟಿಗೆ ಈತನ ನಟನೆ ಪ್ರಭಾವ ಬೀರಿದೆ. ಈಗ ಇದೇ ಧಾರಾವಾಹಿಯಲ್ಲಿ ಮತ್ತೊಬ್ಬ ಬಾಲನಟ ತನ್ನ ನಟನಾ ಕೌಶಲ್ಯದಿಂದ ಹೆಸರಾಗುತ್ತಿದ್ದಾನೆ. ಸುನೀಲ್ ಶನಿಯ ಪಾತ್ರದಿಂದ ಹೆಸರು ಗಳಿಸುತ್ತಿದ್ದರೆ, ಅದೇ ಧಾರಾವಾಹಿಯಲ್ಲಿ ಬಾಲ ಹನುಮಂತನಾಗಿ ನಟಿಸುತ್ತಿರುವ ಇನ್ನೊಬ್ಬ ಬಾಲಕನೂ ಈಗ ತನ್ನ ಪಾತ್ರದ ಮೂಲಕ ಮಿಂಚುತ್ತಿದ್ದಾನೆ.

ಸ್ಟಾರ್ ಸುವರ್ಣ ಚಾನೆಲ್‌ನ ಹರಹರ ಮಹಾದೇವ ಧಾರಾವಾಹಿಯಲ್ಲಿ ಅಂಧಕನಾಗಿ ನಟಿಸಿದ್ದ ಬಾಲ ನಟ ಕನಿಷ್ಕ್ ಈಗ ಶನಿ ಧಾರಾವಾಹಿಯಲ್ಲಿ ಹನುಮಂತನ ಪಾತ್ರ ನಿರ್ವಹಿಸುತ್ತಿದ್ದು, ಈ ಹುಡುಗನ ಪೂರ್ತಿ ಹೆಸರು ಕನಿಷ್ಕ್ ರವಿ ದೇಸಾಯಿಯಾಗಿದ್ದು, ಈತನ ನಟನೆ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹುಡುಗ ಬಂದಿರುವುದು ಯಾದಗಿರಿ ಜಿಲ್ಲೆಯಿಂದ, ನಟನೆಯಲ್ಲಿ ಪರಿಣಿತಿಯಾಗಲೀ, ತರಬೇತಿಯಾಗಲೀ‌ ಪಡೆದು ಬಂದಿಲ್ಲ. ಆದರೆ ನಟಿಸಲು ಆರಂಭಿಸಿದರೆ, ತರಬೇತಿ ಪಡೆದವರು ಕೂಡಾ , ಒಮ್ಮೆ ಇವನತ್ತ ತಿರುಗಿ ನೋಡುವಂತೆ ಮಾಡುವ ಸಾಮರ್ಥ್ಯ ಈ ಚಿಕ್ಕ ಹುಡುಗನ ನಟನೆಯಲ್ಲಿದೆ ಎಂದರೆ, ಅದು ಅತಿಶಯೋಕ್ತಿಯೇನಲ್ಲ. ಮೈಸೂರು ರಸ್ತೆಯ ಕುಂಬಳಗೋಡು ಬಳಿಯ ಶ್ರೀ ಸ್ವಾಮಿ ನಾರಾಯಣ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದಾನೆ ಕಾನಿಸ್ಕ್.

ಕನಿಷ್ಕ್ ನಟನೆಯಂತೆ ವಿದ್ಯಾಭ್ಯಾಸದಲ್ಲೂ ಕೂಡಾ ಹಿಂದೆ ಬಿದ್ದಿಲ್ಲ. ಏಳನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈ ಹುಡುಗ ನಟನೆಗೂ ಸೈ, ಓದಿಗೂ ಸೈ ಎಂಬಂತಹ ಪ್ರತಿಭಾವಂತನಾಗಿದ್ದಾನೆ. ಐ.ಸಿ.ಎಸ್.ಸಿ. ಪಠ್ಯಕ್ರಮದಲ್ಲಿ ಓದುತ್ತಿರುವ ಕನಿಷ್ಕ್ ತಂದೆ ರವಿ ಕೆ ದೇಸಾಯಿ ಜಾಗೂ ತಾಯಿ ಸವಿತಾ ರವಿ ದೇಸಾಯಿ ಇಬ್ಬರೂ ವೃತ್ತಿಯಿಂದ ವೈದ್ಯರಾಗಿದ್ದಾರೆ. ಕನಿಷ್ಕ್ ನಟನೆ ಹಾಗೂ ವಿದ್ಯಾಭ್ಯಾಸದ ಜೊತೆಗೆ ಚೆಸ್ ಹಾಗೂ ಕರಾಟೆಯಲ್ಲೂ ನಿಪುಣ. ಶಾಲೆಯಲ್ಲಿ ಚೆಸ್ ಚಾಂಪಿಯನ್ ಆಗಿದ್ದು, ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಪಡೆದಿದ್ದಾನೆ.

ಇನ್ನು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಈತ ಶಾಲೆಯ ಭಾಷಣಗಳಲ್ಲಿ ಪ್ರಥಮ ಬಹುಮಾನ ಈತನಿಗೆ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಕಿಟ್ ಗಳ ನಿರ್ದೇಶಕ ಕೂಡಾ ಕನಿಷ್ಕನೇ ಆಗುತ್ತಾನೆ. ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತೆ ಒಂದನೇ ತರಗತಿಯಲ್ಲಿರುವಾಗಲೇ ಮಲೇಷ್ಯಾ ದಲ್ಲಿ 58 ದೇಶಗಳ ಮಕ್ಕಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 2 ನೇ‌ ಸ್ಥಾನ ಪಡೆದದ್ದು ಆತನ‌ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಭವಿಷ್ಯದಲ್ಲಿ ವಿಜ್ಞಾನಿ ಅಥವಾ ಗಗನಯಾತ್ರಿ ಯಾಗಿ ದೇಶಕ್ಕೆ ಹೆಸರು ತರಬೇಕೆಂಬ ಗುರಿಯಿರುವ ಕನಿಷ್ಕ್ ನ ಅಬ್ದುಲ್‌ ಕಲಾಂ ಆದರ್ಶ ಆಗಿದ್ದಾರೆ.

ಶನಿ ಧಾರಾವಾಹಿಯಲ್ಲಿ ಈಗ ಶನಿ ಹಾಗೂ ಸಂಬಂಧಿತ ದೇವತೆಗಳ ಬಾಲ್ಯದ ಕತೆಗಳ ಸರಣಿ ನಡೆಯುತ್ತಿರುವುದರಿಂದ , ಬಾಲ‌ ಕಲಾವಿದರಿಗೆ ತಮ್ಮ ನಟನಾ ನೈಪುಣ್ಯತೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ದೊರೆತಿದ್ದು , ಪ್ರಮುಖ ಪಾತ್ರಧಾರಿಯಾದ ಅಂದರೆ ಶನಿ ಪಾತ್ರ ನಿರ್ವಹಿಸುತ್ತಿರುವ ಸುನೀಲ್ ಈಗಾಗಲೇ ಉತ್ತಮ ಪ್ರಶಂಸೆ ಪಡೆಯುತ್ತಿದ್ದು, ಈಗ ಕನಿಷ್ಕ್ ಹನುಮಂತನ ಪಾತ್ರ ನಿರ್ವಹಿಸುತ್ತಾ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಇಡಲು ಪ್ರಾರಂಭಿಸಿದ್ದಾನೆ. ಈತನ‌ ಹಾದಿಯು ಸುಗಮವಾಗಿ, ಇನ್ನೂ ಹೆಚ್ಚಿನ ಹೆಸರು ಜಾಗೂ ಯಶಸ್ಸು ಪಡೆಯಲಿ ಎಂಬುದು ನಮ್ಮ ಹಾರೈಕೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here