ಶನಿ ದೇವನನ್ನು ಸ‌ಂಕಷ್ಟಗಳನ್ನು ನೀಡದೆ, ಸದಾ ಹರಸಲಿ ಎಂದು ಜನರು ಬಹಳ ಭಕ್ತಿಯಿಂದ ಆತನನ್ನು ಆರಾಧಿಸುತ್ತಾರೆ. ಅಲ್ಲದೆ ಶನಿ ದೇವನ ಕೋಪ ಎಂದರೆ ಎಂತಹವರಿಗೂ ಭಯ. ಅದಕ್ಕೆ ಬೇರೆಲ್ಲಾ ದೇವರುಗಳಿಗಿಂತ ಶನಿ ಮಹಾತ್ಮನೆಂದರೆ ಜನರಿಗೆ ತುಸು ಹೆಚ್ಚಾಗಿಯೇ ಭಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಇನ್ನು ನಮ್ಮ ದೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶನಿ ದೇವನ ದೇವಾಲಯಗಳಿವೆ. ಆದರೆ ಒಂದು ಶನಿ ದೇವಾಲಯ ಮಾತ್ರ ಈ ಸಹಸ್ರ ಸಂಖ್ಯೆಯ ದೇವಾಲಯಗಳಿಗಿಂತ ಭಿನ್ನವಾಗಿ ಹಾಗೂ ವಿಶೇಷವಾಗಿದೆ‌. ಅಂತಹ ದೇವಾಲಯ ಮತ್ತೊಂದು ಇಲ್ಲ ಎಂದೇ ಹೇಳಬಹುದು.

ಈ ದೇವಾಲಯ ಇರುವುದು ಉಜ್ಜೈನ್ ನಲ್ಲಿ. ಬೇರೆಲ್ಲಾ ದೇವಾಲಯಗಳಿಗೂ ಇದಕ್ಕೂ ಏನು ವ್ಯತ್ಯಾಸ ಎನ್ನುವುದಾದರೆ, ಇಲ್ಲಿ ಶನಿ ದೇವನನ್ನು ಶಿವನ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಹೀಗೆ ಶನಿ ದೇವನನ್ನು ಶಿವನ ರೂಪದಲ್ಲಿ ಆರಾಧಿಸುವ ಏಕೈಕ ಮಂದಿರ ಉಜ್ಜೈನ್ ನಲ್ಲಿ ಇರುವ ಶನಿ ಮಂದಿರ. ಸ್ಥಳ ಪುರಾಣದ ಪ್ರಕಾರ ಎರಡು ಸಾವಿರ ವರ್ಷಗಳಷ್ಟು ಹಳೆಯದು ಈ ಶ್ರೀ ನವಗ್ರಹ ಶನಿ ಮಂದಿರ. ರಾಜಾ ವಿಕ್ರಮಾದಿತ್ಯ ಈ ಆಲಯ ಸ್ಥಾಪನೆ ಮಾಡಿದರೆ, ರಾಜಾ ವಿಕ್ರಮ್ ಸಾವಂತ್ ಇಲ್ಲಿ ಪೂಜಾ ಕೈಂಕರ್ಯಗಳನ್ನು ಆರಂಭಿಸಿದ್ದಾನೆ ಎನ್ನುತ್ತದೆ ಸ್ಥಳ ಪುರಾಣ.

ಇಲ್ಲಿನ ಆಚರಣೆಗಳ ಪ್ರಕಾರ ಶನಿ ಅಮಾವಾಸ್ಯೆ ಸಂದರ್ಭದಲ್ಲಿ ಭಕ್ತರು ತಮ್ಮ ಮನೋಕಾಮನೆಯ ಪೂರ್ಣ ಮಾಡೆಂದು ಶನಿ ದೇವನಿಗೆ ಮಾಡುವ ಎಣ್ಣೆ ಅಭಿಷೇಕಕ್ಕಾಗಿ ಸುಮಾರು 5 ಕ್ವಿಂಟಾಲ್ ಗಳಷ್ಟು ಎಣ್ಣೆ ಬಳಕೆಯಾಗುತ್ತದೆ. ದೇಶದ ವಿವಿಧ ಮೂಲೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಶನಿ ದೇವನ ಕೃಪಾ ಕಟಾಕ್ಷ ಪಡೆಯಲು ಬರುತ್ತಾರೆ. ಇಲ್ಲಿ ಶನಿ ದೇವನನ್ನು ಮನಃಪೂರ್ವಕವಾಗಿ ಆರಾಧಿಸಿದರೆ ಮನೋ ಕಾಮನೆಗಳು ಖಚಿತವಾಗಿ ಸಾಕಾರ ವಾಗುವುದು ಎಂಬುದು ಭಕ್ತರ ದೃಢ ನಂಬಿಕೆ. ಇಂತಹ ವಿಶೇಷ ಆಲಯಕ್ಕೆ ಒಮ್ಮೆ ಭೇಟಿ ನೀಡಿ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here