ಇಂದು ದೇಶಾದ್ಯಂತ ಜನತಾ ಕರ್ಫ್ಯೂ ಆಚರಿಸಲಾಗುತ್ತಿದ್ದು ಎಲ್ಲ ಜನರು ಮನೆಯಿಂದ ಹೊರ ಬರದೆ ಜನತಾ ಕರ್ಫ್ಯೂ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಕೊರೋನೋ ಇಂದ ರಕ್ಷಿಸಿಕೊಳ್ಳಲು ಜನತಾ ಕರ್ಫ್ಯೂ ಗೆ  ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತಿಗೆ ದೇಶದ ಜನತೆಯು ಅದ್ಭುತವಾಗಿ ಗೌರವ ನೀಡಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಇಂದು ಮೈಸೂರಿನಲ್ಲಿ ಜನತಾ ಕರ್ಫ್ಯೂ ನಡುವೆಯೂ ವೈದ್ಯರಿಗೆ ತನ್ನಿಂದ ಆಗುವ  ಸೇವೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಸರ್ಕಾರ ಅಶ್ವಥ್ ಅವರು ಈ ರೀತಿಯಾಗಿ ಬರೆದುಕೊಂಡಿದ್ದಾರೆ.

ನೆನ್ನೆಯ ದಿನ ಟಿವಿಯಲ್ಲಿ ಜನತಾ ಕರ್ಫ್ಯೂನಲ್ಲಿ ಏನು ಮಾಡಬೇಕು ಏನು ಮಾಡಬಾರದೆಂದು ತಿಳಿದುಕೊಂಡ ನಂತರ:
ನಾನು ನನ್ನ ಊಬರ್ ಕ್ಯಾಬ್ ಚಾಲನೆ ಇಟ್ಟುಕೊಳ್ಳೋಣ ಯಾರಿಗಾದರು ತುರ್ತುಸ್ಥಿತಿ ಒದಗಿದರೆ ಸಹಾಯ ಆಗುತ್ತೆಂದು ಆನ್ ಮಾಡಿದ ತಕ್ಷಣವೇ ಒಂದು ಕರೆ ಬಂತು ಅನುಮಾನದಿಂದ ಪತ್ತೆ ಮಾಡಿದಾಗ ಅವರು ಆಸ್ಪತ್ರೆಗೆ ಬೇಗನೇ ಹೋಗಬೇಕು ಎಂದು ತಿಳಿದು ಪಿಕಪ್ ಮಾಡಲು ಹೋದೆ ನೋಡಿದರೆ ಅವರು ಡಾಕ್ಟರ್ ತುರ್ತು ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ನನಗೆಂತ ಪುಣ್ಯ ಭಗವಂತ ಕರುಣಿಸಿದನೆಂದು ಆ ಟ್ರಿಪ್ ಮುಗಿಸಿ ಮನೆಗೆ ಬಂದರೆ..

ತೊಂಬತ್ತೊಂದು ವರ್ಷದ ತಾಯಿ ಗಂಭೀರವಾಗಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ನನ್ನ ಕಾರಿನಲ್ಲಿ ಕರೆದುಕೊಂಡು ಬಂದೆ. ನನ್ನ ಕರ್ತವ್ಯವನ್ನು ಮಾಡು ಭಗವಂತ ಕೊಟ್ಟ ಅವಕಾಶ.

ಯಾವತ್ತೂ ಸೇವೆ ಮಾಡಲು ಕರ್ತವ್ಯ ಮಾಡಲು ಅವಕಾಶ ಸಿಕ್ಕಾಗ ಬಿಡಬೇಡ ಯಾಕೆಂದರೆ ಎಲ್ಲರಿಗೂ, ಯಾವಾಗಲೂ ಇದು ಸಿಗುವುದಿಲ್ಲ.ನಿನ್ನ ಜೀವನದಲ್ಲಿ ಬಡ್ತಿ(ಉದ್ಧಾರ) ಕೊಡಲೆಂದೇ ಕೊಡುವ ಅವಕಾಶ ಅದಾಗಿರುತ್ತದೆಯೆಂದು ನನಗೆ ನನ್ನ ತಂದೆ ಹೇಳುತ್ತಿದ್ದರು…

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here