ಇಡೀ ದೇಶವೇ ಲಾಕ್ ಡೌನ್ ಆಗಿ ಜನರು ಮನೆಗಳಲ್ಲಿ ಇದ್ದಾರೆ. ಹೊರಗೆ ಬಂದರೆ ಲಾಟಿ ಏಟು ತಿನ್ನುವ ಪರಿಸ್ಥಿತಿ. ಇದೆಲ್ಲಾ ನಮ್ಮ ಸುರಕ್ಷತೆಗಾಗಿ ಎಂದು ಅರಿತ ಜನರು ಮನೆಗಳಲ್ಲೇ ಇರುವಾಗಲೇ, ನಟಿಯೊಬ್ಬರು ಮಾತ್ರ ತನ್ನ ಸ್ನೇಹಿತರ ಜೊತೆಗೆ ಜಾಲಿ ರೈಡ್ ಮಾಡಲು ಹೋಗಿ, ಅಪಘಾತವನ್ನು ಮಾಡಿರುವ ಘಟನೆಯೊಂದು ವರದಿಯಾಗಿದೆ. ಹೀಗೆ ಕಾನೂನು ಹಾಗೂ ಲಾಕ್ ಡೌನ್ ನ ಮಹತ್ವ ಅರಿಯದೆ ಜಾಲಿ ರೈಡ್ ಮಾಡಲು ಹೊರಗೆ ಬಂದ ನಟಿ ಶರ್ಮಿಳಾ ಮಾಂಡ್ರೆ. ಇಂದು ನಸುಕಿನಲ್ಲಿ ಸುಮಾರು ಮೂರು ಗಂಟೆಯ ಸಮಯದಲ್ಲಿ ಅವರು ಜಾಲಿ ರೈಡ್ ಗೆಂದು ರಸ್ತೆಗೆ ಇಳಿದಿದ್ದರು ಎನ್ನಲಾಗಿದೆ.

ಪೋಲಿಸರ ಪ್ರಾಥಮಿಕ ತನಿಖೆಯಲ್ಲಿ ಇದು ಡ್ರಂಕ್ ಅಂಡ್ ಡ್ರೈವ್ ಕೇಸ್ ಎಂದು ತಿಳಿದು ಬಂದಿದೆ. ನಟಿ ಶರ್ಮಿಳಾ ಮಾಂಡ್ರೆ ಜಾಗ್ವಾರ್ ಕಾರಿನಲ್ಲಿ ತಮ್ಮ ಸ್ನೇಹಿತರ ಜೊತೆಗೆ ಜಾಲಿ ರೈಡ್ ಮಾಡಲು ರಾತ್ರಿ ಹೊತ್ತಲ್ಲಿ ಹೊರಗೆ ಬಂದಿದ್ದು, ವಸಂತ ನಗರದ ಅಂಡರ್ ಪಾಸ್ ಪಿಲ್ಲರ್ ಗೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದ ಪರಿಣಾಮವಾಗಿ ಶರ್ಮಿಳಾ ಮಾಂಡ್ರೆ ಅವರ ಮುಖಕ್ಕೆ ಪೆಟ್ಟಾಗಿದೆ ಎನ್ನಲಾಗಿದೆ. ಕಾರಿನಲ್ಲಿ ಇದ್ದ ಒಬ್ಬ ಸ್ನೇಹಿತನಿಗೆ ಕೈ ಫ್ರಾಕ್ಚರ್ ಆಗಿದ್ದು, ಇನ್ನುಳಿದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಕಾರು ಡಿಕ್ಕಿ ಹೊಡೆದ ವೇಗಕ್ಕೆ ಅದರ ಮುಂಭಾಗ ನಜ್ಜುಗುಜ್ಜಾಗಿದೆ. ಅಪಘಾತದ ನಂತರ ನಟಿ ಅಪಘಾತ ನಡೆದಿದ್ದು ಜಯನಗರ, ಜೆಪಿ ನಗರ ಎಂದೆಲ್ಲಾ ಹೇಳಿದ್ದಾರೆ ಎನ್ನಲಾಗಿದ್ದು, ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬುದು ಮಾತ್ರ ಇನ್ನೂ ತಿಳಿದು ಬಂದಿಲ್ಲ ಎನ್ನಲಾಗಿದೆ. ಈ ಅಪಘಾತದ ಕುರಿತಾಗಿ ಹೈಗ್ರೌಂಡ್ ಪೋಲಿಸ್ ಠಾಣೆಯಲ್ಲಿ ದೂರ ದಾಖಲಾಗಿದ್ದು, ಪೋಲಿಸರು ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here