ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸಿರುವ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಿದ್ದು, ಇದರ ಚಿಕಿತ್ಸೆ ಕಾರ್ಯ ಭರದಿಂದ ನಡೆಯುತ್ತಿದ್ದು, ಕೊರೊನಾ ರೋಗಿಗಳ ನೋವಿಗೆ ಮಿಡಿದ ಬಾಲಿವುಡ್ ನ ನಟಿಯೊಬ್ಬರು ತಮ್ಮ ವಾಲೆಂಟಿಯರ್ ನರ್ಸ್ ಆಗಿ ಕೊರೊನಾ ಸೋಂಕು ಪೀಡಿತರ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದಾರೆ. ಕಾಂಚಲೀ ಸಿನಿಮಾ ಖ್ಯಾತಿಯ ನಟಿ ಶಿಖಾ ಮಲ್ಹೋತ್ರ 2014 ರಲ್ಲಿ ನವದೆಹಲಿಯ ಸಫರ್ ಗಂಜ್ ನ ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ನರ್ಸಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಆದರೆ ಅವರು ನಟನೆಯತ್ತ ಬಂದ ಮೇಲೆ ಆ ವೃತ್ತಿ ನಿರ್ವಹಿಸುವುದು ಸಾಧ್ಯವಾಗಿರಲಿಲ್ಲ.

ಆದರೆ ಮಹಾರಾಷ್ಟ್ರ ದ ಮುಂಬೈನಲ್ಲಿ ಕೊರೊನಾ ಪರಿಸ್ಥಿತಿ ಬಗ್ಗೆ ತಿಳಿದ ಶಿಖಾ ದಿಟ್ಟ ನಿರ್ಧಾರ ಮಾಡಿ ಸ್ವಯಂಸೇವಕ ದಾದಿ(ನರ್ಸ್)ಯಾಗುವ ಮೂಲಕ ಜನರಿಗೆ ಸೇವೆ ಸಲ್ಲಿಸಲು ನಿರ್ಧರಿಸುತ್ತಿದ್ದಂತೆ, ಬಿಎಂಸಿ ಶಿಖಾಗೆ ತನ್ನ ಅನುಮೋದನೆ ಪತ್ರವನ್ನು ನೀಡಿದೆ. ಶಿಖಾ ಅವರು ಮುಂಬೈನ ಜೋಗೇಶ್ವರಿ ಪೂರ್ವದ ಹಿಂದೂಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಟ್ರಾಮಾ ಆಸ್ಪತ್ರೆಯಲ್ಲಿ ಸೇವೆ ಮಾಡಲು ಅವಕಾಶ ನೀಡಿದೆ‌. ಅಲ್ಲದೆ ಶಿಖಾ ಅವರನ್ನು ಪ್ರಸ್ತುತ ಐಸೋಲೇಶನ್ ವಾರ್ಡ್‌ನಲ್ಲಿ ಕರ್ತವ್ಯ ಮಾಡಲು ನಿಯೋಜಿಸಲಾಗಿದೆ.

ಶಿಖಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ನಟಿಯ ಈ ನಿರ್ಧಾರವನ್ನು ನೋಡಿ ಅವರ ಅಭಿಮಾನಿಗಳು ಮೆಚ್ಚುಗೆಯ ಮಹಾ ಪೂರವನ್ನೇ ಹರಿಸಿದ್ದಾರೆ. ಆಕೆಯ ನಿರ್ಧಾರವು ಜನ ಮೆಚ್ಚುಗೆಯನ್ನು ಗಳಿಸಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಶಿಖಾ ಅವರು ತಾವು ಪಡೆದ ನರ್ಸಿಂಗ್ ಶಿಕ್ಷಣವನ್ನು ಈಗ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದು, ಅವರ ಸೇವೆಗೆ ನಿಜಕ್ಕೂ ಸಾರ್ಥಕತೆ ದಕ್ಕುವಂತಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here