ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕುಮಾರಸ್ವಾಮಿ ಅವರು ನೆನ್ನೆ ಧರ್ಮಸ್ಥಳದಲ್ಲಿ ಈಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲದ ಹೇಳಿಕೆ ನೀಡಿದ್ದರು. ನಾವು ಜೆಡಿಎಸ್ ಪಕ್ಷ ಸ್ವಂತವಾಗಿ ಅಧಿಕಾರಕ್ಕೆ ಬಂದರೆ ಸಾಲ ಮನ್ನ ಮಾಡುವುದಾಗಿ ತಿಳಿಸಿದ್ದೆ.ನಮಗೆ ಬಹುಮತ ಬಂದಿದ್ದರೆ ಸಾಲಮನ್ನಾ ಆಗುತ್ತಿತ್ತು ಎಂದಿದ್ದಾರೆ.

ಆದರೆ ಈಗ ನಮ್ಮದು ಸಮ್ಮಿಶ್ರ ಸರ್ಕಾರ. ಹೀಗಾಗಿ ನಾವು ಏನೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದರು.ಅಷ್ಟೇ ಅಲ್ಲದೆ ನಮ್ಮ ರೈತರಿಗೆ ಯಾವುದೇ ನಿರಾಸೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು .ರೈತರ ಸಾಲಮನ್ನ ವಿಷಯಕ್ಕೆ ಕುಮಾರಸ್ವಾಮಿ ಅವರ ಹೇಳಿಕೆ ಕುರಿತಂತೆ ಈಗ ಬಿಜೆಪಿಯ ಒಬ್ಬೊಬ್ಬರೇ ತುಟಿ ಬಿಚ್ಚತೊಡಗಿದ್ದಾರೆ.

ಗೊಲ್ಡನ್ ಸ್ಟಾರ್ ಗಣೇಶ್ ಪತ್ನಿ ಮತ್ತು ಬಿಜೆಪಿಯ ಕಾರ್ಯಕರ್ತೆ ಶಿಲ್ಪಾ ಗಣೇಶ್ ಅವರು ಈಗ ಜೆಡಿಎಸ್ ರಾಜ್ಯಾದ್ಯಕ್ಷ ಹಾಗೂ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಹೆಚ್ ಡಿ  ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಟ್ವಿಟರ್ ಮೂಲಕ ಟಾಂಗ್ ಕೊಟ್ಟಿದ್ದಾರೆ.ಕುಮಾರಸ್ವಾಮಿ ಅವರಿಗೆ ಶಿಲ್ಪಾ ಗಣೇಶ್ ಅವರು ಕುಮಾರಸ್ವಾಮಿಯವರೇ,

ಈ ಸಲ ಹೇಗೋ ಕರ್ನಾಟಕದ ಜನತೆಯನ್ನು ತಮ್ಮ ಪ್ರಣಾಳಿಕೆಗಳ ಮೂಲಕ ಮೂರ್ಖರನ್ನಾಗಿಸಿದ್ದೀರಿ… ಆದರೆ ಇನ್ನು ಮುಂದೆ ಪ್ರಣಾಳಿಕೆಯ ಪ್ರತಿ ಅಂಶದ ಕೆಳಗೆ ಷರತ್ತುಗಳು ಅನ್ವಯಿಸುತ್ತದೆ ಎಂದು ಸೇರಿಸುವುದು ಉತ್ತಮ. ಎಂದು ಟ್ವೀಟ್ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here