2019ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಆಟಗಾರರ ಹರಾಜು ಜೈಪುರದಲ್ಲಿಮಂಗಳವಾರ  ನಡೆಯುತ್ತಿದೆ . ಈ ಹರಾಜಿನಲ್ಲಿ ಒಟ್ಟು 1003 ಆಟಗಾರರು ನೋಂದಣಿ ಮಾಡಿಕೊಂಡಿದ್ದು, ಇದನ್ನು ಪರಿಷ್ಕರಿಸಿ ಬಿಸಿಸಿಐ ಆಟಗಾರರ ಸಂಖ್ಯೆಯನ್ನು 351 ಇಳಿಸಿದೆ. ಇದರಲ್ಲಿ 228 ಭಾರತೀಯ ಆಟಗಾರರು ಮತ್ತು 123 ವಿದೇಶಿ ಆಟಗಾರರು ಸೇರಿದ್ದಾರೆ. ಪ್ರತಿಯೊಂದು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು (8 ವಿದೇಶಿ)  ಹೊಂದಲು ಅವಕಾಶವಿದೆ . ಸದ್ಯ ಚೆನ್ನೈ ಸೂಪರ್ ಕಿಂಗ್ಸ್  ಹೆಚ್ಚು (23) ಆಟಗಾರರು, ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಅತೀ ಕಡಿಮೆ (10 ) ಆಟಗಾರರನ್ನು ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಶಿರ್ಮೋನ್ ಹೆಟ್ಮೆಯರ್ ಅವರನ್ನು ಬರೋಬ್ಬರಿ 4 ಕೋಟಿ 20 ಲಕ್ಷಕ್ಕೆ ಖರೀದಿಸಿದೆ. ಶಿರ್ಮೋನ್ ಹೆಟ್ಮಯರ್ ವೆಸ್ಟ್ ಇಂಡೀಸ್ ತಂಡದಲ್ಲಿ ವಿಕೆಟ್ ಕೀಪರ್ ಸಹ ಮಾಡುತ್ತಿದ್ದು ಉತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ.

ಯುವರಾಜ್ ಸಿಂಗ್,  ಬಿ.ಮೆಕಲಮ್,  ಮಾರ್ಟಿನ್ ಗುಪ್ಟಿಲ್ , ಕ್ರಿಸ್ ವೋಕ್ಸ್  ಮಾರಾಟವಾಗದೆ ಉಳಿದ ಆಟಗಾರರು
ಶಿಮ್ರನ್ ಹೆಟ್ ಮೈರ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂಲ ಬೆಲೆ: 50 ಲಕ್ಷ  ಪಡೆದ ಮೊತ್ತ: 4.2 ಕೋಟಿ.
ಹನುಮ ವಿಹಾರಿ:  ಡೆಲ್ಲಿ ಕ್ಯಾಪಿಟಲ್ಸ್  ಮೂಲ ಬೆಲೆ: 50 ಲಕ್ಷ   ಪಡೆದ ಮೊತ್ತ:  2 ಕೋಟಿ.  ಈ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ ಹನುಮ ವಿಹಾರಿ
ಮನೋಜ್ ತಿವಾರಿ, ಅಲೆಕ್ಸ್ ಹೆಲ್ಸ್, ಚೇತೇಶ್ವರ ಪೂಜಾರ ಮೊದಲ ದಿನ ಯಾವುದೇ ತಂಡವನ್ನು ಸೇರುವಲ್ಲಿ ವಿಫಲರಾದರು.

ಹರಾಜಿನಲ್ಲಿ ಮಾರಾಟವಾದ ಆಟಗಾರರು
ಜಾನಿ ಬೇರಿಸ್ಟೊ : ಸನ್ ರೈಸರ್ಸ್ ಹೈದರಾಬಾದ್ .ಮೂಲ ಬೆಲೆ: 1.5 ಕೋಟಿ. ಪಡೆದ ಮೊತ್ತ:  2.2ಕೋಟಿ
ಅಕ್ಷರ್ ಪಟೇಲ್: ಡೆಲ್ಲಿ ಕ್ಯಾಪಿಟಲ್ಸ್.ಮೂಲ ಬೆಲೆ: 1 ಕೋಟಿ. ಪಡೆದ ಮೊತ್ತ:  5 ಕೋಟಿ
ಮೊಸಿಸ್ ಹೆನ್ರಿಕ್ಸ್ : ಕಿಂಗ್ಸ್ ಇಲೆವೆನ್ ಪಂಜಾಬ್. ಮೂಲ ಬೆಲೆ: 1 ಕೋಟಿ.  ಪಡೆದ ಮೊತ್ತ: 1 ಕೋಟಿ
ಯುವರಾಜ್ ಸಿಂಗ್ :  ಮೂಲ ಬೆಲೆ: 1 ಕೋಟಿ ಆನ್ ಸೋಲ್ಡ್
ಗುರುಕೀರತ್ ಸಿಂಗ್: ರಾಯಲ್ ಚಾಲೆಂಜರ್ಸ್ ಬೆಂಗಳೂರು. ಮೂಲ ಬೆಲೆ: 50 ಲಕ್ಷ . ಪಡೆದ ಮೊತ್ತ:  50 ಲಕ್ಷ
ಕ್ರಿಸ್ ಜೋರ್ಡನ್: ಆನ್ ಸೋಲ್ಡ್
ಕಾರ್ಲೋಸ್ ಬ್ರಾತ್ ವ್ಯಾಟ್: ಕೋಲ್ಕತ್ತಾ ನೈಟ್ ರೈಡರ್ಸ್. ಮೂಲ ಬೆಲೆ:  75  ಲಕ್ಷ. ಪಡೆದ ಮೊತ್ತ: 5 ಕೋಟಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here