ಬಿಗ್ ಬಾಸ್ ಸೀಸನ್ 7 ಮುಗಿದರೂ, ಅದರ ವಿನ್ನರ್ ಶೈನ್ ಶೆಟ್ಟಿ ಅವರ ಕ್ರೇಜ್ ಮಾತ್ರ ಜನರಲ್ಲಿ ಇನ್ನೂ ಕಡಿಮೆಯಾಗಿಲ್ಲ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಶೈನ್ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಶೈನ್ ಹೋದ ಕಡೆಯಲ್ಲೆಲ್ಲಾ ಸೇರುವ ಜನ, ಶೈನ್ ಅವರನ್ನು ಭೇಟಿ ಮಾಡಿ ಅವರಿಗೆ ವಿಶ್ ಮಾಡಲು ಬರುವ ಜನರ ಅಪಾರವಾದ ಅಭಿಮಾನ ನೋಡಿದಾಗ ಶೈನ್ ಜನರ ಮನಸ್ಸಿನಲ್ಲಿ ಎಂತಹ ಸ್ಥಾನವನ್ನು ಪಡೆದಿದ್ದಾರೆ ಎಂದು ತಿಳಿಯುತ್ತದೆ. ಈಗ ಶೈನ್ ಕೂಡಾ ಒಂದು ಆಸಕ್ತಿಕರ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಶೈನ್ ತಮ್ಮ ಜೀವನದ ಮೊದಲನೇ ಪತ್ರವನ್ನು ನೋಡಿ ಬಹಳ ಖುಷಿಯಾಗಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪತ್ರಗಳಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದ ಜೊತೆಗೆ ಅವರು, “ಅಭಿಮಾನಿ ಒಬ್ಬರು ಬರೆದ ನನ್ನ ಜೀವನದ ಮೊದಲನೇ ಪತ್ರ. ಅಂದು ಬಿಗ್ ಬಾಸ್ ಮನೆಗೆ ನನ್ನ ತಾಯಿ ಬರೆದ ಪತ್ರ ಎಷ್ಟು ಸಂತೋಷ ತಂದಿದೆಯೋ, ಇಂದು ನೀವು ಬರೆದ ಪತ್ರವೂ ಅಷ್ಟೇ ಸಂತಸ ತಂದಿದೆ. ಬರೆದ ತಮಗೂ, ವಿಳಾಸ ಸರಿಯಿಲ್ಲದಿದ್ದರೂ ಪತ್ರ ತಲುಪಿಸಿದ ಪೋಸ್ಟ್ ಮಾಸ್ಟರ್ ಮೇಡಂಗೂ ಧನ್ಯವಾದಗಳು ಎಂದು ಬರೆದು” ಪೋಸ್ಟ್ ಮಾಡಿದ್ದಾರೆ.

ಶೈನ್ ಅವರು ಪೋಸ್ಟ್ ಮಾಡಿರುವ ಫೋಟೋ ಹಾಗೂ ಅದರೊಂದಿಗೆ ಬರೆದ ಸಾಲುಗಳನ್ನು ನೋಡಿ ಅನೇಕರು ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಾ, ನಿಮಗೆ ವಿಳಾಸ ಎನ್ನುವುದು ಬೇಕಿಲ್ಲ. ನೀವು ಎಲ್ಲಿದ್ದರೆ ಅದೇ ನಿಮ್ಮ ವಿಳಾಸ, ನೀವು ಒಂದು ಲ್ಯಾಂಡ್ ಮಾರ್ಕ್ ಸೆಟ್ ಮಾಡಿದ್ದೀರಿ, ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದೆಲ್ಲಾ ಹೇಳುತ್ತಾ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆ ಪತ್ರ ಬರೆದ ಅಭಿಮಾನಿ ಇದನ್ನು ನೋಡಿದರೆ ನಿಜಕ್ಕೂ ಅವರಿಗೆ ಅಪಾರವಾದ ಸಂತೋಷವಾಗುವಂತಹದ್ದು ಖಚಿತ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here