ಬಿಗ್ ಬಾಸ್ ಸೀಸನ್ 7 ಮುಗಿದರೂ ಕೂಡಾ ಈ ಬಾರಿಯ ವಿನ್ನರ್ ಶೈನ್ ಶೆಟ್ಟಿ ಅವರ ಕ್ರೇಜ್ ಮಾತ್ರ ಜನರಲ್ಲಿ ಇನ್ನೂ ಕಡಿಮೆಯಾಗಿಲ್ಲ. ಶೈನ್ ತಮ್ಮ ವ್ಯಕ್ತಿತ್ವದಿಂದ ಅದೆಷ್ಟೋ ಜನರ ಮನಸ್ಸನ್ನು ಈ ಶೋ ಮೂಲಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಶೈನ್ ಬಿಗ್ ಬಾಸ್ ಗೆಲ್ಲಬೇಕೆಂದು ಅದೆಷ್ಟೋ ಜನ ಹರಕೆ ಮಾಡಿಕೊಂಡಿದ್ದು ಕೂಡಾ ನಿಜ. ಶೋ ಮುಗಿದ ಇಷ್ಟು ದಿನ ಕಳೆದರೂ ಇಂದಿಗೂ ಜನರು ಶೈನ್ ಅವರನ್ನು ಭೇಟಿ ಮಾಡಿ, ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿರುವುದು ಜನರು ಅವರ ಮೇಲಿಟ್ಟಿರುವ ಪ್ರೀತಿಗೆ ಒಂದು ನಿದರ್ಶನ ಎನಿಸಿದೆ. ಶೈನ್ ಕೂಡಾ ವಿವಿಧ ಕಡೆಗಳಿಗೆ ಭೇಟಿ ನೀಡಿ ಜನರೊಂದಿಗೆ ಬೆರೆತು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ.‌

ವಿಷಯ ಹೀಗಿರುವಾಗ, ದೇಶದ ಜನಪ್ರಿಯ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಅವರು ಶೈನ್ ಶೆಟ್ಟಿ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಅವರ ಕುಟುಂಬದವರು ಶೈನ್ ಗೆ ಬುದ್ಧಿ ವಾದವನ್ನು ಹೇಳಿದ್ದಾರೆ ಎನ್ನಲಾಗಿದೆ. ಅನಿಲ್ ಕುಂಬ್ಳೆ ಅವರು ಹಾಗೂ ಅವರ ಕುಟುಂಬದವರಿಗೆ ಕೂಡಾ ಬಿಗ್ ಬಾಸ್ ಪ್ರಸಾರವಾಗುವಾಗ ಶೈನ್ ಅವರ ಫೇವರಿಟ್ ಸ್ಪರ್ಧಿಯಾಗಿದ್ದರು. ಅದೇ ಕಾರಣದಿಂದ ಅವರು ಶೈನ್ ಅವರಿಗೆ ದೂರವಾಣಿ ಕರೆ ಮಾಡಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ, ಆತಿಥ್ಯವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಕುಂಬ್ಳೆ ಅವರ ಅತ್ತೆಯವರು ಶೈನ್ ಗೆ ಕೆಲವೊಂದು ಬುದ್ಧಿ ಮಾತನ್ನು ಹೇಳಿದ್ದಾರೆ. ಆಕೆ ಶೈನ್ ಗೆ ಅವರ ಭವಿಷ್ಯದ ಬಗ್ಗೆ ಕೆಲವು ಉತ್ತಮ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಶೈನ್ ಗೆ ಅವರು ಚೆನ್ನಾಗಿ ಹಣ ಸಂಪಾದಿಸಿಕೋ ಎಂದು ಹೇಳುತ್ತಲೇ ಇರುವ ಹಣವನ್ನು ದುಂದು ವೆಚ್ಚ ಮಾಡದೇ ಕೂಡಿಟ್ಟು ಕೋ ಎಂದು ಸಲಹೆ ನೀಡಿದ್ದಾರೆ.
ಅನಿಲ್ ಕುಂಬ್ಳೆ ಅವರ ಮನೆಗೆ ಹೋದ ಸಂದರ್ಭದಲ್ಲಿ ಅವರ ಕುಟುಂಬದೊಡನೆ ಶೈನ್ ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಮಾತ್ರವಲ್ಲದೇ, ಅನಿಲ್ ಕುಂಬ್ಳೆ ಅವರು ತಾವೇ ಖುದ್ದು ಕರೆ ಮಾಡಿ ಶೈನ್ ಗೆ ಆಹ್ವಾನ ನೀಡಿ ಆತಿಥ್ಯ ನೀಡಿರುವ ಅವರ ಸರಳತೆಯನ್ನು ಕೂಡಾ ಜನ ಮೆಚ್ಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here