ವಾರವಿಡೀ ಬಿಗ್ ಬಾಸ್ ನೋಡುವ ಪ್ರೇಕ್ಷಕರಿಗೆ ವಾರಾಂತ್ಯದ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ಅವರು ಯಾವೆಲ್ಲಾ ವಿಷಯವನ್ನು ಮಾತನಾಡುವರು? ಮನೆಯ ಯಾವ ಸದಸ್ಯರಿಗೆ ಏನೆಲ್ಲಾ ಸಲಹೆ ಸೂಚನೆ ನೀಡುವರು?ಯಾರಿಗೆ ಬುದ್ಧಿ ಮಾತು ಹೇಳುವರು? ಯಾರನ್ನು ದಂಡಿಸುವರು? ಎಂಬ ಕುತೂಹಲದೊಂದಿಗೆ ವಾರಾಂತ್ಯದ ಎಪಿಸೋಡ್ ಗಳಿಗಾಗಿ ಕಾಯುತ್ತಾ ಇರುತ್ತಾರೆ. ಈ ವಾರ ಕೂಡಾ ಅಂತಹುದೇ ಸನ್ನಿವೇಶಗಳಿಗೆ ನಿನ್ನೆಯ ಎಪಿಸೋಡ್ ಸಾಕ್ಷಿಯಾಯಿತು. ಈ ವಾರ ಸುದೀಪ್ ಅವರಿಂದ ಚಂದನ್ ಆಚಾರ್ ಅವರಿಗೆ ಚಪ್ಪಾಳೆ ಸಿಕ್ಕಿದ್ದು ಮಾತ್ರವೇ ಅಲ್ಲದೇ ಅವರು, ನಾಮಿನೇಟ್ ಸದಸ್ಯರಲ್ಲಿ ಹೆಚ್ಚು ಓಟು ಪಡೆದು ಸೇಫ್ ಆದ ಸದಸ್ಯ ಎಂಬ ಎರಡು ಖುಷಿ ಅವರ ಪಾಲಿಗೆ ಬಂದಿತು..

ಇನ್ನು ಸುದೀಪ್ ಅವರು ದೀಪಿಕಾ ದಾಸ್ ಅವರು ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ತೋರಿದ ವರ್ತನೆಯ ಬಗ್ಗೆ ಮಾತನಾಡಿದ ಕಿಚ್ಚ, ದೀಪಿಕಾ ಅವರು ಬೇಕಂತಲೇ ಹೆಚ್ಚಿನ ಶ್ರಮ ವಹಿಸದೇ, ತಮ್ಮ ಎಫೆರ್ಟ್ ಹಾಕದೇ,ಪ್ರಿಯಾಂಕ ಅವರು ಗೆಲ್ಲಲು ಸಹಾಯ ಮಾಡಿದ್ದರ ವಿರುದ್ಧ ಗರಂ ಆದರು ಕಿಚ್ಚ ಸುದೀಪ್ ಅವರು‌. ಅಲ್ಲದೇ ದೀಪಿಕಾ ಅವರು ಈ ರೀತಿ ಮೊದಲಿಂದಲೂ ಮಾಡುತ್ತಾ ಬರುವುದಾಗಿ ಅವರು ಹೇಳುತ್ತಾ ದೀಪಿಕಾ ಅವರನ್ನು ಮಾತಿನ ಮೂಲಕವೇ ದಂಡಿಸಿದರು ಸುದೀಪ್ ಅವರು‌.

ನಂತರ ಈ ಸೀಸನ್ ನಲ್ಲಿ ಸಾಕಷ್ಟು ಜನಪ್ರಿಯ ಹಾಗೂ ಜನಮೆಚ್ಚುಗೆ ಪಡೆದಿರುವ ಸ್ಪರ್ಧಿ ಶೈನ್ ಶೆಟ್ಟಿ ಅವರು ಬಲೂನ್ ಟಾಸ್ಕ್ ನಲ್ಲಿ ಮಾಡಿದ ರಿಸ್ಕ್ ಬಗ್ಗೆ ಮಾತನಾಡಿದ ಸುದೀಪ್ ಅವರು ಟಾಸ್ಕ್ ಗಿಂತ ಜೀವ ಮುಖ್ಯ. ಜೀವ ಇದ್ದರೆ ಟಾಸ್ಕ್ ಯಾವಾಗ ಬೇಕಾದರೂ ಮಾಡಬಹುದು ಎಂದು ಅವರು ಸಲಹೆ ನೀಡುತ್ತಾ, ಮುಂದೆ ಹೀಗೆ ಮಾಡಬೇಡಿ ಎಂಬ ಎಚ್ಚರಿಕೆಯನ್ನು ನೀಡಿದರು‌. ಶೈನ್ ಬಲೂನ್ ಟಾಸ್ಕ್ ನಲ್ಲಿ ಜಂಪ್ ಮಾಡಿ ಬರುವಾಗ ಅವರ ತಲೆಗೆ ಕಂಬಿಗೆ ತಗುಲಿತ್ತು. ಅಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಅನಾಹುತ ಸಂಭವಿಸುವ ಅವಕಾಶವಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here