ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನವನ್ನು ಮಾನ್ಯ ಸಿಎಂ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ನಿನ್ನೆ ರಾತ್ರಿಯೆಲ್ಲಾ ಮಾಡಿದ್ದಾರೆ ಎನ್ನಲಾಗಿದೆ. ಹರಸಾಹಸ ಮಾಡಿಯಾದರೂ ಸರ್ಕಾರವನ್ನು, ಅಧಿಕಾರವನ್ನು ಉಳಿಸಿಕೊಳ್ಳಲೇಬೇಕೆಂಬ ಅವರ ಪ್ರಯತ್ನ ಕೊನೆಯ ಹಂತದಲ್ಲೂ ನಡೆದಿದೆ. ಅತೃಪ್ತರ ಮನೆಗೆ ತೆರಳಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ ಡಿಕೆ ಶಿವಕುಮಾರ್ ಅವರು. ಅಲ್ಲಿ ಅವರು ನಿಮ್ಮ ಯಜಮಾನರಿಗೆ ವಾಪಸ್ಸು ಬಂದು ಬಿಡಲು ಹೇಳಿ, ಇಲ್ಲದಿದ್ದರೆ ಅವರು ಆರು ವರ್ಷಗಳಿಗೆ ಅನರ್ಹರಾಗಿ ಬಿಡುತ್ತಾರೆ. ಆಮೇಲೆ ಈಗ ಬರದೆ ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬದವರನ್ನು ಭೇಟಿ ಮಾಡಿದ ವಿಷಯ ತಿಳಿಯುತ್ತಿದ್ದಂತೆ ರೆಬೆಲ್ ಶಾಸಕರು ಸ್ಪೀಕರ್ ಅವರಿಗೆ ಪತ್ರವೊಂದನ್ನು ರವಾನೆ ಮಾಡಿದ್ದಾರೆ. ಆ ಪತ್ರದಲ್ಲಿ ಅವರು ನಾವು ಈಗಾಗಲೇ ಶಾಸಕರ ಸ್ಥಾನಕ್ಕೆ ರಾಜೀನಾಮೇ ನೀಡಿದ್ದೇವೆ. ರಾಜೀನಾಮೆಯ ಶೀಘ್ರ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದೇವೆ. ಈ ಮಧ್ಯೆ ನಮ್ಮನ್ನು ಅನರ್ಹಗೊಳಿಸುವಂತೆ ಪಕ್ಷದ ಕಡೆಯಿಂದ ನಿಮಗೆ ಮನವಿ ಬಂದಿದೆ ಎಂಬುದು ನಮ್ಮ ಅವಗಾಹನೆಗೆ ಬಂದಿದೆ ಎಂದು ಉಲ್ಲೇಖ ಮಾಡಿದ್ದಾರೆ.

ಅನರ್ಹತೆ ಸಂಬಂಧಿಸಿ ನಮಗೆ ಪಕ್ಷದ ಕಡೆಯಿಂದ ಯಾವುದೇ ನೋಟೀಸ್ ಬಂದಿಲ್ಲ. ಅಲ್ಲದೆ ನೀವು ನಮಗೆ ಇಂದು ಸದನದಲ್ಲಿ ಹಾಜರಿರಬೇಕೆಂದು ನೋಟೀಸ್ ನೀಡಿದ್ದೀರಿ. ಆದರೆ ನಾವು ಕೆಲವು ಅನಿವಾರ್ಯ ಕಾರಣಗಳಿಂದ ಹೊರಗೆ ಇರುವುದಿಂದ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು, ನಮಗೆ ನಾಲ್ಕು ವಾರಗಳ ಕಾಲಾವಕಾಶಬೇಕೆಂದು ಸ್ಪೀಕರ್ ಅವರಿಗೆ ಪತ್ರ ಮುಖೇನ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here