ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಕನ್ನಡದ ಹಿರಿಯ ನಟಿ ತಾರಾ ಅವರನ್ನು ಕಾಂಗ್ರೆಸ್ ಕಡೆ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ಜನಪ್ರಿಯ ಚಿತ್ರ ನಟಿಯಾಗಿರುವ ತಾರಾ ಅನುರಾಧ ಅವರು ಬಿಜೆಪಿಯ ಮಾಜಿ ಎಂ ಎಲ್ ಸಿ ಎನ್ನುವುದು ತಿಳಿದ ವಿಷಯವೇ ಆಗಿದೆ‌. ಈಗ ಇದೇ ತಾರಾ ಅವರಿಗೆ ಡಿಕೆಶಿ ಅವರು ತಮ್ಮ ಪಕ್ಷಕ್ಕೊಂದು ಆಹ್ವಾನವನ್ನು ನೀಡಿದ್ದಾರೆನ್ನಲಾಗಿದೆ. ಡಿಕೆಶಿ ಅವರು ಕಾಂಗ್ರೆಸ್ ನ ಮಹಿಳಾ ನಾಯಕಿಯರ ಜೊತೆ ಚರ್ಚೆ ನಡೆಸಿದ ನಂತರ ನಿನ್ನೆ ಸಂಜೆ ತಾರಾ ಅವರಿಗೆ ದೂರವಾಣಿ ಕರೆಯೊಂದನ್ನು ಮಾಡಿ, ತಾರಾ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುವಂತೆ ಆಹ್ವಾನವನ್ನು ನೀಡಿದ್ದಾರೆ.

ಫೋನ್ ಕರೆ ಮಾಡಿದ ಡಿಕೆಶಿ ಅವರು ಹಾಸ್ಯದ ಧಾಟಿಯಲ್ಲಿ ಮಾತನ್ನು ಆರಂಭಿಸಿದ್ದು, ಅನಂತರ ಅವರು ವಿಷಯವನ್ನು ತಿಳಿಸಿದ್ದಾರೆ. ಪಕ್ಷದ ಮಹಿಳಾ ನಾಯಕಿಯರ ಒತ್ತಾಯದ ಮೇಲೆ ಕರೆ ಮಾಡ್ತಾ ಇದ್ದೇನೆ, ನೀವು ಹೆಣ್ಮಕ್ಕಳು ಹೇಳ್ತಿರಲ್ಲ, ಸಂಜೆ ದೀಪ ಹಚ್ಚೋ ಹೊತ್ತು ಅಂತ ಆ ಶುಭ ಘಳಿಗೆಯಲ್ಲಿ ಫೋನ್ ಮಾಡಿದ್ದೀನಿ ನೋಡಮ್ಮ. ನಿಮ್ಮ ಪಕ್ಷದಲ್ಲಿ ನೀವು ನಿಮ್ಮನ್ನ ಎಂಎಲ್​​ಸಿ ಮಾಡ್ತಾರೆ ಎಂದು ಅಂದುಕೊಂಡಿದ್ರಿ, ಆದರೆ ಅದು ಆಗಿಲ್ಲ, ನಮ್ಮ ಪಕ್ಷದಲ್ಲಿ ನಿಮಗೆ ಅವಕಾಶ ಮಾಡಿಕೊಡ್ತೀವಿ, ಯೋಚನೆ ಮಾಡು ತಾಯಿ. ಮುಂದೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರೋದು. ಎಲ್ಲಾ ಗೌರವ, ಸ್ಥಾನಮಾನ ಕೊಡ್ತೀವಿ. ಒಂದು ಒಳ್ಳೇ ತೀರ್ಮಾನ ಮಾಡು ಎಂದು ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಇದಕ್ಕೆ ಉತ್ತರವಾಗಿ ತಾರಾ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು, ಅಲ್ಲದೇ ಅವರು ನೀವು ನನ್ನ ಬಗ್ಗೆ ಇಷ್ಟು ಗೌರವ ಹೊಂದಿರುವುದಕ್ಕೆ ಖುಷಿಯಾಯ್ತು. ಆದರೆ ನಾನು ಮೊದಲಿನಿಂದ ಬಿಜೆಪಿಯಲ್ಲಿ ಬೆಳೆದು ಬಂದವಳು, ಬೆಳೆದವಳು, ಪಕ್ಷ ಹಾಗೂ ಸಂಘಟನೆಯ ಜೊತೆ ಗುರುತಿಸಿಕೊಂಡವಳು, ನನಗೆ ಅಂತಹ ಆಲೋಚನೆ ಇಲ್ಲ ಎಂದು ಉತ್ತರ ನೀಡಿದ್ದಾರೆ ಎನ್ನಲಾಗಿದೆ. ತಾರಾ ಅವರು ಎಂ ಎಲ್ ಸಿ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ. ಆದರೆ ಸಿಎಂ ಯಡಿಯೂರಪ್ಪ ಭಾರತಿ ಶೆಟ್ಟಿ ಅವರನ್ನು ಪರಿಷತ್​​ಗೆ ನಾಮನಿರ್ದೇಶನ ಮಾಡಿದ್ದರಿಂದ ತಾರಾ ಅವರ ನಿರೀಕ್ಷೆ ಫಲಿಸಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here