ಮಾಜಿ ಸಚಿವ ಹಾಗೂ ಕೈ ನಾಯಕ ಡಿಕೆ ಶಿವಕುಮಾರ್ ಅವರು ಅಕ್ರಮ ಹಣವನ್ನು ಸಾಗಣೆ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಆದರೆ ಬಿಜೆಪಿ ಅಧಿಕಾರವನ್ನು ಪಡೆದುಕೊಳ್ಳಲು ಯಾರು ಯಾರಿಗೆ ಎಷ್ಟು ಹಣವನ್ನು ಅಕ್ರಮವಾಗಿ ಕೊಟ್ಟಿದ್ದಾರೆ. ಆಗೆಲ್ಲಾ ಈ ಅಧಿಕಾರಿಗಳೇನು ಮಾಡುತ್ತಿದ್ದರು, ಆಗ ಏಕೆ ಅವರು ಬರಲಿಲ್ಲವೆಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ನಿನ್ನೆ ಶಿವಕುಮಾರ್ ಅವರ ಬಂಧನ ವಿಷಯ ಹೊರಬಂದಾಗ ಯಡಿಯೂರಪ್ಪನವರ ಪ್ರತಿಕ್ರಿಯೆಯನ್ನು ನಾನು ಗಮನಿಸಿದೆ‌.

ಹೌದಾ? ಅರೆಸ್ಟ್ ಮಾಡಿದ್ದಾರೆಯೇ? ಅವರು ಬಹುಬೇಗ ಹೊರಗೆ ಬರಲೆಂದು ಪ್ರಾರ್ಥನೆ ಮಾಡುತ್ತೇನೆ ಎಂದಿದ್ದರು‌. ಅದು ಮಾತ್ರವಲ್ಲ 2008 ರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 10 ಕೋಟಿ, 20 ಕೋಟಿ ಹಣ ಕೊಟ್ಟು ಶಾಸಕರನ್ನು ಸೆಳೆದುಕೊಂಡಿದ್ದರು. ಅದೆಷ್ಟೇ ಅಲ್ಲದೆ ಈ ಮೈತ್ರಿ ಸರ್ಕಾರವನ್ನು ಕೆಡವಲು ಅವರು ಎಷ್ಟು ಕೋಟಿ ಖರ್ಚು ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನೇ, ಯಡಿಯೂರಪ್ಪನವರು ಶರಣಗೌಡನ ಜತೆ ಮಾತಾಡಿದ್ದ ಆಡಿಯೋವೊಂದನ್ನು ನಾನೇ ಬಿಡುಗಡೆ ಮಾಡಿದ್ದೆ.

ಯಡಿಯೂರಪ್ಪನವರು ಅದು ನಾನೇ ಹೇಳಿದ್ದು ಎಂದು ಕೂಡಾ ಒಪ್ಪಿಕೊಂಡಿದ್ದರು. ಸಾವಿರಾರು ಕೋಟಿ ರೂಪಾಯಿಗಳನ್ನು ಇವರು ಹದಿನೈದು ಇಪ್ಪತ್ತು ಶಾಸಕರಿಗೆ ಹಂಚಿದ್ದು, ಈ ಹಣವನ್ನು ಎಲ್ಲಿಂದ ತಂದರೆಂದು, ಇದು ಅಕ್ರಮವಲ್ಲವೇನು? ಎಂದು ಪ್ರಶ್ನಿಸಿದ್ದಾರೆ ಕುಮಾರಸ್ವಾಮಿ ಅವರು. ಅಲ್ಲದೆ ಆಗೆಲ್ಲ ಐಟಿ, ಇ.ಡಿ.ಇಲಾಖೆ ಸತ್ತುಹೋಗಿತ್ತಾ? ಎಂದು ತಮ್ಮ ಸಿಟ್ಟು ಮತ್ತ ಆಕ್ರೋಶವನ್ನು ಹೊರಹಾಕಿದ್ದಾರೆ.‌ ಬಿಜೆಪಿ ವಿರುದ್ಧ ಇರುವವರನ್ನು ಈ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here