ರಾಯಚೂರಿನ ಸಿಂಧ‌ನೂರು ತಾಲೂಕಿನ ಅಲಬನೂರಿನಲ್ಲಿ ಒಂದು ಸಂಕಟದ ಘಟನೆ ವರದಿಯಾಗಿದೆ. ರಜೆಗೆಂದು ಊರಿಗೆ ಬಂದದ ಸೇನೆಯ ಯೋಧನೊಬ್ಬ ಹೃದಯಾಘಾತದಿಂದ ಮೃತರಾಗಿರುವುದು ಗ್ರಾಮಸ್ಥರ ದುಃಖಕ್ಕೆ ಕಾರಣವಾಗಿದೆ. ರಜೆಯ ಮೇಲೆ ಕುಟುಂಬದೊಂದಿಗೆ ಸಮಯ ಕಳೆಯಲು, ಒಂದಷ್ಟು ದಿನ ಮನೆಯವರು, ಸ್ನೇಹಿತರ ಜೊತೆ ಕಳೆಯುವ ಆಸೆಯಿಂದ ಊರಿಗೆ ಬಂದ ಯೋಧನ ಇಂತಹ ಅಂತ್ಯ‌ ಯಾರೂ ಕೂಡಾ ಊಹಿಸಿರಲಿಲ್ಲ. ಹೃದಯಾಘಾತದಿಂದ ಮೃತರಾದ ಯೋಧನ ಹೆಸರು ಶಿವಕುಮಾರ್. ಅವರ ವಯಸ್ಸು 34 ವರ್ಷಗಳು.

ಶಿವಕುಮಾರ್ ಅವರು ರಾಜಸ್ಥಾನದ ಜೋಧ್ಪುರದಲ್ಲಿ ಸೈನಿಕನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ವಾರದ ರಜೆಯ ಮೇಲೆ ಸ್ವಗ್ರಾಮಕ್ಕೆ ಅವರು ಆಗಮಿಸಿದ್ದರು. ಕಳೆದ ಹದಿನೈದು ವರ್ಷಗಳಿಂದ ಸೇನೆಯಲ್ಲಿ ಇದ್ದು ಅವರ ದೇಶ ಸೇವೆಯನ್ನು ಮಾಡುತ್ತಿದ್ದರು. ಶಿವಕುಮಾರ್ ಅವರಿಗೆ ಈ ಮೊದಲು ಕೂಡಾ ಎರಡು ಬಾರಿ ಹೃದಯಾಘಾತ ಆಗಿತ್ತು ಎನ್ನಲಾಗಿದೆ‌. ಆದರೆ ಈ ಬಾರಿ ಅದು ಅವರ ಪ್ರಾಣಕ್ಕೆ ಸಂಚಕಾರವನ್ನು ತಂದು, ಕುಟುಂಬ ಹಾಗೂ ದೇಶಕ್ಕೆ ತೀರದ ನಷ್ಟವನ್ನುಂಟು ಮಾಡಿದೆ.

ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದ, ಶಿವಕುಮಾರ್ ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ‌. ಇಂದು ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಅಲಬನೂರಿಗೆ ತರಲಾಗುವುದು ಎನ್ನಲಾಗಿದೆ. ಯೋಧನ ಸಾವಿಗೆ ಇಡೀ ಗ್ರಾಮದ ಜನರು ಸಂತಾಪವನ್ನು ಸೂಚಿಸಿದ್ದಾರೆ. ಅವರ ಮನೆಯವರಿಗೆ ನೋವು ಹಾಗೂ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here