ಇತ್ತೀಚೆಗೆ ದೇಶದ ಹಲವೆಡೆ ದ್ವಿಚಕ್ರದಲ್ಲಿ ಯುವಕರು ಮೋಜು ಮಸ್ತಿ ಮಾಡುವುದು ವಾಡಿಕೆಯಾಗಿದೆ.ಅದರಲ್ಲೂ ಕೆಲ ಯುವಕರು ಬೈಕ್ ನಲ್ಲಿ ವೀಲಿಂಗ್ ಮಾಡುವುದು ಫ್ಯಾಷನ್ ಆಗಿಹೋಗಿದೆ.ಇತ್ತೀಚೆಗೆ ಯುವಕರು ವೀಲಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಎಷ್ಟೋ ಉದಾಹರಣೆಗಳು ಸಹ ವರದಿಯಾಗುತ್ತಿವೆ. ಕೆಲವು ರಾಜ್ಯಗಳಲ್ಲಿ ಬೈಕ್ ವೀಲಿಂಗ್ ನಿಷೇಧವನ್ನು ಸಹ ಹೇರಲಾಗಿದೆ.ಆದರೂ ಪೋಲೀಸರ ಕಣ್ತಪ್ಪಿಸಿ ಕೆಲವು ರಸ್ತೆಗಳಲ್ಲಿ ಯುವಕರು ಬೈಕ್ ವೀಲಿಂಗ್ ಮಾಡಿ ಅಪಘಾತದಲ್ಲಿ ಕೈ ಕಾಲು ಮುರಿದ ಪ್ರಸಂಗಗಳು ವರದಿ ಆಗುತ್ತಲೇ ಇರುತ್ತವೆ.ಅದರಲ್ಲೂ ಬೆಂಗಳೂರಿನಂತ ಸಿಟಿಯಲ್ಲಿ ಸಹ ಹೈವೇ ರಸ್ತೆಗಳಲ್ಲಿ ಯುವಕರು ಬೈಕ್ ವೀಲಿಂಗ್ ಮಾಡುವ ಸೋಕಿ ಕಮ್ಮಿಯಾಗಿಲ್ಲ.

ಹೀಗೆ ವೀಲಿಂಗ್ ಮಾಡುವ ಸಮಯದಲ್ಲಿ ಕೆಲವು ಬಾರಿ ಪೋಲೀಸರು ಮತ್ತು ಸಾರ್ವಜನಿಕರ ಕೈಯಲ್ಲಿ ಯುವಕರು ಛೀಮಾರಿ ಹಾಕಿಸಿಕೊಂಡ ಘಟನೆಗಳು ಸಹ ಇವೆ.ಇಂದು ಸಹ ಇಂತಹುದ್ದೇ ಒಂದು ಘಟನ ನಮ್ಮ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದಿದೆ.ಶಿವಮೊಗ್ಗ ನಗರದ ಬೈ ಪಾಸ್ ರಸ್ತೆಯಲ್ಲಿ ವಾಹನ ಸವಾರರ ಸಂಖ್ಯೆ ಅಧಿಕವಾಗೇ ಇರುತ್ತದೆ.ಅಂತಹ ಪ್ರದೇಶದಲ್ಲಿ ಯುವಕನೊಬ್ಬ ನಡುರಸ್ತೆಯಲ್ಲೇ ಬೈಕ್ ವೀಲಿಂಗ್ ಮಾಡಿದ್ದಾನೆ. ಇದರಿಂದ ಬಸ್ ಚಾಲಕರಿಗೆ ಕಿರಿಕಿರಿ ಉಂಟಾಗಿ ಆ ಹುಡುಗನನ್ನು ಅಡ್ಡ ಹಾಕಿ ಹಿಡಿದು ಬಸ್ ಚಾಲಕರು ಮತ್ತು ಬಸ್ ನಲ್ಲಿದ್ದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಹಿಗ್ಗಾಮುಗ್ಗಾ ಥಳಿಸಿದ ನಂತರ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಪೋಲೀಸ್ಗೆ ಒಪ್ಪಿಸಿದ್ದಾರೆ‌.ಸಾರ್ವಜನಿಕರು ಹುಡುಗನಿಗೆ ಹಿಗ್ಗಾಮುಗ್ಗಾ ಥಳಿಸಿದ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

 

Photo and video credit :- Suddimane

https://m.facebook.com/story.php?story_fbid=417301488774215&id=305529579951407

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here