ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ ಭಜರಂಗಿ ಸಿನಿಮಾವ‌ನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆ ಸಿನಿಮಾ ಸೂಪರ್ ಹಿಟ್ ಆದದ್ದು ಒಂದೆಡೆಯಾದರೆ, ಆ ಸಿನಿಮಾ‌ ನೋಡುಗರಿಗೆ ಒಂದು ಭರ್ಜರಿ ಎಂಟರ್ಟೈನ್ಮೆಂಟ್ ನೀಡುವಲ್ಲಿ ಯಶಸ್ವಿಯಾಗಿತ್ತು. ನಿರ್ದೇಶಕ ಹರ್ಷ ಹಾಗೂ ಶಿವಣ್ಣನ ಸೂಪರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಭಜರಂಗಿ ಸಿನಿ ರಸಿಕರು ಹಾಗೂ ಶಿವಣ್ಣ ಅವರ ಅಭಿಮಾನಿಗಳಿಗೆ ಮೋಡಿ ಮಾಡಿದ್ದಲ್ಲದೆ, ಬ್ಲಾಕ್ ಬಸ್ಟರ್ ಚಿತ್ರಗಳ ಸಾಲಿಗೆ ಸೇರಿ ಭಾರೀ ಸದ್ದು ಮಾಡಿದ ಚಿತ್ರವಾಗಿತ್ತು.

ಇನ್ನು ಆ ಚಿತ್ರಕ್ಕಾಗಿ ಶಿವಣ್ಣ ದೇಹವನ್ನು ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಆಬ್ಸ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೈ ನವಿರೇಳುವಂತೆ ನಟಿಸಿದ್ದರು.ನಂತರ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ಬಂದಿದ್ದ ವಜ್ರಕಾಯ ಸಹ ಸೂಪರ್ ಹಿಟ್ ಆಗುವ ಮೂಲಕ ಶಿವಣ್ಣ ಹರ್ಷ ಜೋಡಿ ಯಶಸ್ಸು ಮುಂದುವರಿದಿತ್ತು.  ಈಗ ಮತ್ತೊಮ್ಮೆ ಅದೇ ಜೋಡಿ  ಮತ್ತೊಂದು ಮ್ಯಾಜಿಕ್ ಮಾಡಲು, ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸೂಪರ್ ಡೂಪರ್ ಹಿಟ್ ಸಿನಿಮಾ ನೀಡಲು, ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಲು ಸಿದ್ಧತೆಗಳನ್ನು ನಡೆಸಿದ್ದಾರೆ. ವಿಶೇಷವೆಂದರೆ ಈ ಕಾಂಬಿನೇಷನ್ ನಲ್ಲಿ ಬರುತ್ತಿರುವ ಹೊಸ ಸಿನಿಮಾ ಭಜರಂಗಿ 2 . ಆಗಿರುವುದರಿಂದ ನಿರೀಕ್ಷೆಗಳು ದುಪ್ಪಟ್ಟಾಗಲಿವೆ.

ಜಯಣ್ಣ ಫಿಲ್ಮ್ಸ್ ಅವರು ನಿರ್ಮಾಣ ಮಾಡುತ್ತಿರುವ ಭಜರಂಗಿ ಎರಡರ ಚಿತ್ರೀಕರಣವನ್ನು ಇಂದಿನಿಂದ ಶು‌ಭಾರಂಭ ಮಾಡಲಾಗಿದೆ. ಈ ಚಿತ್ರಕ್ಕೆ ಶಿವಣ್ಣನ ಜೊತೆ ಭಾವನಾ ಮೆನನ್ ಅವರು ನಾಯಕಿಯಾಗಿದ್ದು, ಟಗರು ಚಿತ್ರದ ನಂತರ ಅವರು ಮತ್ತೊಮ್ಮೆ ಶಿವಣ್ಣನ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಭಜರಂಗಿ ಈಗಾಗಲೇ ಜನರ ಮನದಲ್ಲಿ ಸ್ಥಾನ ಪಡೆದಿದ್ದು, ಈ ಭಜರಂಗಿ ೨ ಏನು ಅದ್ಬುತ ಸೃಷ್ಟಿಸಲಿದೆ ಎಂಬುದು ಮುಂದೆ ನೋಡಬೇಕಾಗಿದೆ. ಈ ಚಿತ್ರದ ವಿಶೇಷತೆಗಳ ಬಗ್ಗೆ ನಿರ್ದೇಶಕ ಹರ್ಷ ಅವರು ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಭಜರಂಗಿ 2 ಚಿತ್ರದ ಬಗ್ಗೆ ಈಗಾಗಲೇ ಶಿವರಾಜಕುಮಾರ್ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದ್ದು ಹರ್ಷ ನಿರೀಕ್ಷೆಗಳನ್ನು ಹೇಗೆ ಸಾಕಾರಗೊಳಿಸುತ್ತಾರೆ ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here