ಬಹುದಿನಗಳ ನಂತರ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.ಕಳೆದ ಬಾರಿ ನಾನಿರುವುದೇ ನಿನಗಾಗಿ ಮತ್ತು ಕಿಕ್ ಕಾರ್ಕ್ರಮಗಳನ್ನು ನಡೆಸಿಕೊಟ್ಟಿದ್ದ ಶಿವಣ್ಣ ಈ ಬಾರಿ ಸುವರ್ಣ ವಾಹಿನಿಗಾಗಿ ನಂಬರ್ 1 ಯಾರೀ ವಿಥ್ ಶಿವಣ್ಣ ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.ಕಳೆದ ಭಾನುವಾರ ಈ ಕಾರ್ಯಕ್ರಮ ಪ್ರಸಾರ ಆರಂಭಿಸಿದೆ.ಮೊದಲ ಎಪಿಸೋಡ್ ನಲ್ಲೇ ಶಿವಣ್ಣನವರ ಈ ಕಾರ್ಯಕ್ರಮಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ.ಮೊದಲ ಎಪಿಸೋಡ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಗುರುಕಿರಣ್ ಭಾಗವಹಿಸಿದ್ದರು.

ಈ ಕಾರ್ಯಕ್ರಮ ಈಗ ಎಲ್ಲೆಡೆ ಸುದ್ದಿ ಮಾಡುತ್ತಿದ್ದು ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಜನಮನ್ನಣೆ ಸಿಕ್ಕಿದೆ. ಮುಂದಿನ ಎಪಿಸೋಡ್ ಗಳಲ್ಲಿ ಶರಣ್ ಮತ್ತು ಚಿಕ್ಕಣ್ಣ , ಶ್ರೀಮುರಳಿ ಮತ್ತು ನರ್ತನ್ , ಶೃತಿ ಹರಿಹರನ್ ಮತ್ತು ಶ್ರದ್ಧಾ ಶ್ರ ಭಾಗವಹಿಸಲಿರುವ ಒಟ್ಟು ನಾಲ್ಕು ಎಪಿಸೋಡ್ ಗಳ ಚಿತ್ರೀಕರಣ ಕೂಡ ಮುಗಿದಿದೆ. ಈಗ ಮುಂದಿನ ಎಪಿಸೋಡ್ ಗಳಿಗೆ ದರ್ಶನ್ , ಸುದೀಪ್ ಮತ್ತು ಯಶ್ ಅವರನ್ನು ಕರೆಸಬೇಕೆಂದು ಈ ಎಲ್ಕಾ ನಟರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಅವರನ್ನು ಕರೆಸಬೇಕೆಂದು ಫೇಸ್‌ಬುಕ್‌ ಗಳಲ್ಲಿ ಕಾಮೆಂಟ್ ಮೂಲಕ ಕೇಳಿಕೊಳ್ಳುತ್ತಿದ್ದಾರೆ.ಆದರೆ ಈ ಕಾರ್ಯಕ್ರಮದಲ್ಲಿ ಶಿವಣ್ಣ ಅವರು ಯಾರನ್ನು ಕರೆಸಬೇಕೆಂದು ನಿರ್ಧರಿಸುವುದಿಲ್ಲ. ಸುವರ್ಣ ವಾಹಿನಿಯ ಮುಖ್ಯಸ್ಥರು ಯಾರನ್ನು ಕರೆಸುತ್ತಾರೋ ಅವರ ಬಳಿ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎನ್ನುವ ಸುದ್ದಿಯಿದೆ.ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರು ಎಂದೇ ಕರೆಸಿಕೊಳ್ಳುವ ಶಿವಣ್ಣನವರ ಯಾರೀ ನಂಬರ್ 1 ವಿಥ್ ಶಿವಣ್ಣ ಕಾರ್ಯಕ್ರಮಕ್ಕೆ ದರ್ಶನ್ ಅವರು ಬರುತ್ತಾರ …? ಮುಂದೆ ಕಾದು ನೋಡೋಣ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here