ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕೆಂದು ಕದಂಬ ಸೈನ್ಯ ಆಗ್ರಹವೊಂದನ್ನು ಮಾಡಿದೆ. ಈ ವರದಿ ಜಾರಿಯಾಗಬೇಕಾದರೆ ಇದಕ್ಕಾಗಿ ಮೈಸೂರಿನಲ್ಲಿ ಈಗಾಗಲೇ ಅಂಚೆ ಚಳವಳಿಯೊಂದು ಆರಂಭವಾಗಿದೆ. ಮೈಸೂರು ನಗರದ ಲಷ್ಕರ್ ಪೋಲಿಸ್ ಠಾಣೆ ಎದುರು ಇರುವ ಅಂಚೆ ಕಛೇರಿಯ ಮುಂದೆ ಪ್ರತಿಭಟನಾಕಾರರು ಅಂಚೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಚಿತ್ರ ನಟ ಶಿವರಾಜ್ ಕುಮಾರ್ ಅವರಿಗೆ ಅಂಚೆ ಮೂಲಕ ಮನವಿ ಪತ್ರ ಕಳುಹಿಸಲಾಗಿದೆ.

ನಮ್ಮ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗುತ್ತಿಲ್ಲವಾದ ಕಾರಣ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಕರ್ನಾಟಕದಲ್ಲಿ ಇಂದು ಮತ್ತೊಂದು ಗೋಕಾಕ್ ಮಾದರಿಯಲ್ಲಿ ಚಳುವಳಿಯು ನಡೆಯಬೇಕು. ಆ ಹೋರಾಟದ ನೇತೃತ್ವವನ್ನು ನಟ ಶಿವರಾಜ್ ಕುಮಾರ್ ವಹಿಸಿಕೊಳ್ಳಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಲು ಇಂತಹುದೊಂದು ಚಳುವಳಿ ನಡೆಯಬೇಕಿದೆ ಹಾಗೂ ಅದು ಅಗತ್ಯ ಕೂಡಾ ಎಂದು ಕದಂಬ ಸೈನ್ಯದ ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಾರೆ.

ಈ ಚಳುವಳಿಯಲ್ಲಿ ಶಿವರಾಜ್ ಕುಮಾರ್ ಅವರ ಜೊತೆಯಲ್ಲೇ ಕನ್ನಡದ ಪ್ರಸಿದ್ಧ ನಟರುಗಳಾದ ಪುನೀತ್ ರಾಜ್‌ಕುಮಾರ್, ದರ್ಶನ್, ಯಶ್, ಗಣೇಶ್ ಹಾಗೂ ಹಿರಿಯ ನಟರಾದ ರವಿಚಂದ್ರನ್, ಉಪೇಂದ್ರ ಎಲ್ಲರೂ ಸೇರಿ ಇಡೀ ಚಲನಚಿತ್ರರಂಗವು ಒಟ್ಟಾಗಿ ತನ್ನ ಬೆಂಬಲ ನೀಡಬೇಕಿದ್ದು, ಈ ಚಳುವಳಿಯಲ್ಲಿ ಭಾಗವಹಿಸಬೇಕೆಂದು ಪ್ರತಿಭಟನಾಕಾರರು ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ. ಕನ್ನಡಕ್ಕಾಗಿ ಇಂದು ಮತ್ತೊಂದು ಗೋಕಾಕ್ ಚಳುವಳಿ ನಡೆಯಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here