ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಭಜರಂಗಿ 2 ತೆರೆಗೆ ಬರಲು ಹಣಿಯಾಗುತ್ತದೆ. A.ಹರ್ಷ ಮತ್ತು ಡಾ.ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ತೆರೆಗೆ ಬರಲು ತಯಾರಾಗಿರುವ ಮೂರನೇ ಚಿತ್ರ ಭಜರಂಗಿ 2 . ಈ ಹಿಂದೆ ಇದೇ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದ ಭಜರಂಗಿ ಮತ್ತು ವಜ್ರಕಾಯ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಇದೀಗ ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆಯಾಗಿ ಭಾರತದಾದ್ಯಂತ ಯಶಸ್ಸು ಪಡೆದು, ಭಜರಂಗಿ 2 ಚಿತ್ರದ ಬಗ್ಗೆ ಸಿನಿರಸಿಕರಿಗೆ ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಭಜರಂಗಿ 2 ತೆರೆಗೆ ಬರುವ ಮೊದಲೇ ಹರ್ಷ ಡಾ.ಶಿವರಾಜಕುಮಾರ್ ಅಭಿಮಾನಿಗಳಿಗೆ ಮತ್ತೊಂದು ಶುಭಸುದ್ದಿ ಕೊಟ್ಟಿದ್ದಾರೆ ನಿರ್ದೇಶಕ ಎ ಹರ್ಷ. ಹೌದು ಭಜರಂಗಿ 2 ಚಿತ್ರವು ತೆರೆಗೆ ಬರುತ್ತಿದ್ದಂತೆ ಮತ್ತೆ ಡಾ.ಶಿವರಾಜಕುಮಾರ್ ಮತ್ತು ನಿರ್ದೇಶಕ ಹರ್ಷ ಅವರು ಜೊತೆಯಾಗುತ್ತಿದ್ದಾರೆ. ಈ ಜೋಡಿಯ ಮತ್ತೊಂದು ಸಿನಿಮಾ ಭಜರಂಗಿ 2 ತೆರೆಗೆ ಬಂದ ಬಳಿಕ ಸೆಟ್ಟೇರಲಿದೆ. ಹೊಸ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ನಿರ್ದೇಶಕರಾದ ಎ ಹರ್ಷ ಅವರು ಸದ್ಯಕ್ಕೆ ನಮ್ಮ ಗಮನವೆಲ್ಲ ಭಜರಂಗಿ 2 ಚಿತ್ರದ ಮೇಲಿದ್ದು ಅದು ತೆರೆಗೆ ಬಂದ ನಂತರವಷ್ಟೇ ಹೊಸ ಸಿನಿಮಾದ ಬಗ್ಗೆ ಮಾಹಿತಿ ತಿಳಿಸುವುದಾಗಿ ಹೇಳಿದ್ದಾರೆ. ಆದರೆ ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಹೊಸ ಸಿನಿಮಾದ ಬಗ್ಗೆ ಮಾಹಿತಿಯನ್ನು ಖುದ್ದು ಡಾ.ಶಿವರಾಜ್ ಕುಮಾರ್ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶಿವರಾಜಕುಮಾರ್ ಮತ್ತು ಹರ್ಷ ಜೋಡಿಯ ಹೊಸ ಸಿನಿಮಾವು ಬಾರಿ ಬಜೆಟ್ ಚಿತ್ರವಾಗಿದ್ದು ಈ ಚಿತ್ರದ ಮೂಲಕ ಶಿವರಾಜ್ಕುಮಾರ್ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಚಿತ್ರದ ಒಂದು ಪೋಸ್ಟರ್ ಬಿಡುಗಡೆಯಾಗಿದ್ದು ಇದರಲ್ಲಿ ಬರೆದಿರುವ “ಹೆದರಬೇಡ ಕ್ಷಮಿಸಬೇಡ” ಎನ್ನುವ ಸಾಲುಗಳು ಸಾಕಷ್ಟು ಕುತೂಹಲ ಮೂಡಿಸಿವೆ. ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿಗಳು ದೊರೆಯಲಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here