ಕೊರೋನ ವೈರಸ್ ನಿಂದಾಗಿ  ದೇಶದಾದ್ಯಂತ ಎಲ್ಲಾ ಕಡೆ  ಲಾಕ್ ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಲವಾರು ಜನರಿಗೆ ಊಟ ಮತ್ತು ವಸತಿ ಗೆ ತೊಂದರೆಯಾಗಿದ್ದು ಹಲವಾರು ಜನರು ಸ್ವಯಂಪ್ರೇರಿತರಾಗಿ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಲಾಕ್ ಡೌನ್  ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಲವೆಡೆ ಬೇರೆ ರಾಜ್ಯಗಳಿಗೆ ತೆರಳಬೇಕಿದ್ದ ಜನ ಇದ್ದಲ್ಲಿ ಉಳಿದುಕೊಂಡಿದ್ದಾರೆ. ಸಿಕ್ಕಸಿಕ್ಕ ಸ್ಥಳಗಳಲ್ಲಿ ಉಳಿದುಕೊಂಡಿರುವ ಜನಗಳಿಗೆ ಅಲ್ಲಿಯ ಸ್ಥಳೀಯ ಜನತೆ ಸಹಾಯ ಮಾಡುತ್ತಿರುವುದು ಕಂಡುಬರುತ್ತಿದೆ.

ಇದೀಗ ತಮಿಳು ನಾಡಿನಲ್ಲಿ ನೆಲೆಸಿರುವ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಅಭಿಮಾನಿ ಸಂಘದ ಅಭಿಮಾನಿಗಳು ತಮಿಳುನಾಡಿನ ಸುಮಾರು 200ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದೆ. ತಮಿಳುನಾಡಿನ ಹೊಸೂರು ಹಾಗೂ ಕೃಷ್ಣಗಿರಿ ನಡುವೆ ಇರುವ ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್

ಅಭಿಮಾನಿಗಳ ಸಂಘದ ಸದಸ್ಯರು ಸುಮಾರು 200 ಜನರಿಗೆ ಎರಡು ಮೂರು ದಿನಗಳಿಂದ ಊಟದ ವ್ಯವಸ್ಥೆ ಮತ್ತು ವಸತಿ ಸೌಕರ್ಯ ಮಾಡಿದ್ದಾರೆ ಅಷ್ಟೇ ಅಲ್ಲದೆ ಅವರಿಗೆ ಅಗತ್ಯವಿರುವ ವಸ್ತುಗಳನ್ನು ಕೂಡಲೇ ಸರ್ಕಾರ ನೀಡುವ ಮೂಲಕ ಕೇಳಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟರು ಅಭಿಮಾನಿಗಳು ಸಹ ಇರುವಲ್ಲಿಯೇ ತಮ್ಮಿಂದಾಗುವ ಸಹಾಯ ಮಾಡುತ್ತಿದ್ದಾರೆ.

 

ತಮಿಳುನಾಡಿನಲ್ಲಿ ಇರುವ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ನೂರಾರು ಜನರಿಗೆ ಊಟ ವಸತಿಯ ವ್ಯವಸ್ಥೆ ಮಾಡಿದ್ದಾರೆ.

Movies Station Kannada यांनी वर पोस्ट केले बुधवार, १ एप्रिल, २०२०

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here