ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾ ಆಯುಷ್ಮಾನ್ ಭವ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಚಿತ್ರ ಪೋಸ್ಟರ್ ಹಾಗೂ ಟೀಸರ್ ಮೂಲಕವೇ ಚಿತ್ರ ರಸಿಕರ ನಿದ್ದೆಗೆಡಿಸಿದೆ‌. ಈ ಸಿನಿಮಾದ ಬಗ್ಗೆ ಮತ್ತೊಂದು ವಿಶೇಷವನ್ನು ನಾವು ಹೇಳಲೇಬೇಕು, ಅದೇನೆಂದರೆ ಚಿತ್ರ ನಿರ್ಮಾಪಕ ದ್ವಾರಕೀಶ್ ಅವರು ಸಿನಿಮಾ ರಂಗಕ್ಕೆ ಬಂದು 50 ವರ್ಷಗಳಾಗಿದ್ದು, ಈ ಸಿನಿಮಾ ಅವರಿಗೂ ಕೂಡಾ ವಿಶೇಷವೇ ಹೌದು. ಅವರ ನಿರ್ಮಾಣ ಸಾರಥ್ಯದಲ್ಲಿ ಆಯುಷ್ಮಾನ್ ಭವ ಬರುತ್ತಿದೆ ಎಂಬುದು ವಿಶೇಷ.

ಈ ಸಿನಿಮಾದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಪಿ.ವಾಸು ಅವರು ಮಾತನಾಡುತ್ತಾ, ತಾವು ನಿರ್ದೇಶನಕ್ಕೆ ಬಂದ ಹೊಸದರಲ್ಲಿ ಚೆನ್ನೈನಲ್ಲಿ ದ್ವಾರಕೀಶ್ ಅವರನ್ನು ಭೇಟಿಯಾದ ದಿನಗಳನ್ನು ಸ್ಮರಿಸುತ್ತಾ, ದ್ವಾರಕೀಶ್ ಸಿನಿಮಾಗಾಗಿಯೇ ಜೀವನ ಮುಡಿಪಾಗಿಟ್ಟವರು ಎಂದು ಹೊಗಳಿದರು. ನಂತರ ಅವರು ಹ್ಯಾಟ್ರಿಕ್ ಹೀರೋ ಶಿವಣ್ಣ ಈ ಸಿನಿಮಾದಲ್ಲಿ ಬಹಳ ಎನರ್ಜಿಟಿಕ್ ಆಗಿ ನಟಿಸಿರುವುದನ್ನು ಹೇಳುತ್ತಾ, ಶಿವಣ್ಣ ಅವರ ಎನರ್ಜಿ ನೋಡಿ ಶಾಕ್ ಆಯಿತು ಎಂದು ಅವರು ಬಹಳ ಸಂತಸದಿಂದ ಹೇಳಿದರು.

ಕೇರಳದಲ್ಲಿ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಒಂದು ದೊಡ್ಡ ಬಂಡೆಯನ್ನು ಹತ್ತಿ ಹೋಗಬೇಕಾದಾಗ ಶಿವಣ್ಣನವರು ಚಕಚಕನೆ ಅದನ್ನು ಏರಿದ ರೀತಿ ನೋಡಿ ಪಿ.ವಾಸು ಅವರು ಅಕ್ಷರಶಃ ಶಾಕ್ ಆದರಂತೆ. ಅದು ಮಾತ್ರವಲ್ಲದೇ ಡಾನ್ಸ್ ದೃಶ್ಯವೊಂದರಲ್ಲಿ ತೇವವಾದ, ಎತ್ತರದ ಬಂಡೆಯ ಮೇಲೆ ಬಹಳ ರಿಸ್ಕ್ ತೆಗೆದುಕೊಂಡು ಶಿವಣ್ಣ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಂತೆ. ಆ ದೃಶ್ಯವನ್ನು ನೋಡಿದ ಹತ್ತಿರದ ಮನೆಯೊಂದರಿಂದ ಬಂದ ವ್ಯಕ್ತಿಯೊಬ್ಬರು ನಿರ್ದೇಶಕರ ಬಳಿ ಏನಿದು ಅಂತಹ ರಿಸ್ಕಿಯಾಗಿರುವ ಬಂಡೆ ಮೇಲೆ ನಿಂತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದ್ದರಂತೆ. ಇದು ಶಿವಣ್ಣ ಎಷ್ಟು ರಿಸ್ಕ್ ತೆಗದುಕೊಂಡು ತಮ್ಮ ಕೆಲಸವನ್ನು ಮಾಡುತ್ತಾರೆ ಎಂಬುದಕ್ಕೆ ಪಿ.ವಾಸು ಅವರು ಕೊಟ್ಟ ಉದಾಹರಣೆಯಾಗಿದೆ. ಸಿನಿಮಾದಲ್ಲಿ ಆ ದೃಶ್ಯ ನಿಜಕ್ಕೂ ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡುತ್ತದೆ ಎಂದಿದ್ದಾರೆ ನಿರ್ದೇಶಕ ಪಿ.ವಾಸು ಅವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here