ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರಿಗೆ ಇಂದು 57 ನೇ ವರ್ಷದ ಜನ್ಮದಿನದ ಸಡಗರ . ವರ್ಷಪೂರ್ತಿ ಸಿನಿಮಾಗಳಲ್ಲಿ ನಟಿಸುವ ಭಾರತದ ಅತ್ಯಂತ ಬ್ಯುಸಿ ನಟ ಅಂತ ಅಂದ್ರೆ ಅದು ಡಾ.ಶಿವರಾಜಕುಮಾರ್. ಪ್ರತಿ ವರ್ಷವೂ ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳುವ ಶಿವಣ್ಣ ಈ ಬಾರಿ ಮಾತ್ರ ಅಭಿಮಾನಿಗಳಿಂದ ದೂರ ಉಳಿದಿದ್ದಾರೆ. ತಮ್ಮ ಬಲಗೈ ಗೆ ಶಸ್ತ್ರಚಿಕಿತ್ಸೆ ಇದ್ದ ಕಾರಣದಿಂದಾಗಿ ಶಿವರಾಜಕುಮಾರ್ ಅವರು ಲಂಡನಿನಲ್ಲಿ ಉಳಿದಿದ್ದಾರೆ. ನೆನ್ನೆಯಷ್ಟೇ ಶಸ್ತ್ರಚಿಕಿತ್ಸೆ ಮುಗಿದಿದ್ದು ಶಿವರಾಜಕುಮಾರ್ ಅವರು ಆರೋಗ್ಯವಾಗಿದ್ದಾರೆ. ದೂರದ ದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಶಿವಣ್ಣನ ಮನಸ್ಸು ಮಾತ್ರ ಕರುನಾಡಿನ ಅಭಿಮಾನಿಗಳ ಮೇಲೆಯೇ ಇದೆ.

ShivaRajkumar – Live from London

ShivaRajkumar – Live from London Thank you so much for all your wishes.Will be Back soon.ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವದಗಳು

Dr Shiva Rajkumar यांनी वर पोस्ट केले गुरुवार, ११ जुलै, २०१९

ನೆನ್ನೆ ತಾನೆ ಸಾಮಾಜಿಕ ಜಾಲತಾಣಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟ ಡಾ.ಶಿವರಾಜಕುಮಾರ್ ಅವರು ಮಧ್ಯರಾತ್ರಿ 12 ಗಂಟೆಗೆ ಲೈವ್ ಬಂದು ಅಭಿಮಾನಿಗಳ ಜೊತೆ ಜನ್ಮದಿನ ಆಚರಣೆ ಮಾಡಿದ್ದಾರೆ.ಇನ್ನು ಡಾ.ಶಿವರಾಜಕುಮಾರ್ ಅವರ ಜನ್ಮದಿನದ ಈ ಶುಭದಿನದಂದು ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಲು ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರಗಳ ಅನೌನ್ಸ್ ಆಗಿವೆ. ಈ ಬಾರಿ ಡಾ.ಶಿವರಾಜಕುಮಾರ್ ಅವರು ಆರ್.ಚಂದ್ರು ನಿರ್ದೇಶನದ ಚಿತ್ರದಲ್ಲಿ ಮತ್ತೊಮ್ಮೆ ನಟಿಸುವುದು ಕನ್ಫರ್ಮ್ ಆಗಿದೆ. ಶಿವಣ್ಣ ಮತ್ತು ಆರ್.ಚಂದ್ರು ಕಾಂಬಿನೇಷನ್ ನ ಮೈಲಾರಿ ಚಿತ್ರವು ಬ್ಲಾಕ್‌ಬಸ್ಟರ್ ಆಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಈ ಜೋಡಿ ಮತ್ತೆ “ಜಂಗಮ” ಎಂಬ ಚಿತ್ರಕ್ಕಾಗಿ ಒಂದಾಗುತ್ತಿದೆ.

ಎ.ಹರ್ಷ ಅವರು ನಿರ್ದೇಶನ ಮಾಡುತ್ತಿರುವ ಭಜರಂಗಿ ೨ ಚಿತ್ರದ ಜಬರ್ದಸ್ತ್ ಫಸ್ಟ್ ಲುಕ್ ಸಹ ಇಂದು ರಿವೀಲ್ ಆಗಿದ್ದು ಮೊದಲ ಲುಕ್ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಿದೆ. ಎ ಹರ್ಷ ಅವರು ಡಾ.ಶಿವರಾಜಕುಮಾರ್ ಅವರಿಗಾಗಿ ಈ ಹಿಂದೆ ನಿರ್ದೇಶನ ಮಾಡಿದ್ದ ಭಜರಂಗಿ ಮತ್ತು ವಜ್ರಕಾಯ ಚಿತ್ರಗಳು ಮೆಗಾ ಹಿಟ್ ಆಗಿದ್ದವು.
ಇನ್ನು ಇದೇ ಮೊದಲ ಬಾರಿಗೆ ಕನ್ನಡದ ಖ್ಯಾತ ನಟ ಮತ್ತು ನಿರ್ಮಾಪಕ ದ್ವಾರಕೀಶ್ ಅವರು ಡಾ.ಶಿವರಾಜಕುಮಾರ್ ಅವರಿಗಾಗಿ ನಿರ್ಮಿಸುತ್ತಿರುವ ಚಿತ್ರದ ಚಿತ್ರೀಕರಣ ಸಹ ಮುಗಿದಿದ್ದು ಚಿತ್ರದ ಗ್ರಾಫಿಕ್ಸ್ ವರ್ಕ್ ಹಾಗೂ ಸಂಗೀತ ಸಂಯೋಜನೆ ನಡೆಯುತ್ತಿದೆ.ಚಿತ್ರಕ್ಕೆ ಆಯುಷ್ಮಾನ್ ಭವ ಎಂದು ಹೆಸರು ಹಿಡಲಾಗಿದೆ.

ಡಾ.ಶಿವರಾಜಕುಮಾರ್ ಜೊತೆ ಶಿವಲಿಂಗ ದಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ಪಿ.ವಾಸು ಮತ್ತೊಮ್ಮೆ ಡಾ.ಶಿವರಾಜಕುಮಾರ್ ಅವರಿಗೆ ಆಕ್ಸನ್ ಕಟ್ ಹೇಳುತ್ತಿರುವುದು ಚಿತ್ರದ ವಿಶೇಷ ಆಗಿದೆ .ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ.
ಇದಷ್ಟೇ ಅಲ್ಲದೇ ಶಿವರಾಜಕುಮಾರ್ ಅವರ ಹೆಸರಿನಲ್ಲಿ ಇಂದು ರಾಜ್ಯಾದ್ಯಂತ ಅಭಿಮಾನಿಗಳು ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಶಿವರಾಜಕುಮಾರ್ ಅವರ ಮೇಲಿನ ಪ್ರೀತಿಯಿಂದ ಶಿವಸೈನ್ಯ ತಂಡ ಮಹಾನ್ ಕಲಾವಿದ ಎಂಬ ಶೀರ್ಷಿಕೆಯಲ್ಲಿ ಅಭಿಮಾನದ ಹಾಡನ್ನು ಪಿ ಆರ್ ಕೆ ಆಡಿಯೋ ಮೂಲಕ ಹೊರತಂದಿದ್ದು ಈ ಹಾಡು ಕೇಳುಗರ ಮನಸೂರೆಗೊಳ್ಳುತ್ತಿದೆ‌. ಅಷ್ಟೇ ಅಲ್ಲದೇ ರಾಜ್ಯದ ಹಲವಾರು ಸಂಘ ಸಂಸ್ಥೆಗಳು ಶಿವರಾಜಕುಮಾರ್ ಹೆಸರಿನಲ್ಲಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ , ಶಾಲೆ ಬ್ಯಾಗ್ , ರೋಗಿಗಳಿಗೆ ಹಣ್ಣು ಹಂಪಲು ,ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here