ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ಯಾರು ಎಂದು ಕನ್ನಡ ಚಿತ್ರರಂಗದವರನ್ನು ಕೇಳಿದರೆ ಥಟ್ ಅಂತ ಬರುವುದು ಒಂದೇ ಹೆಸರು ಅದು ಕರುನಾಡ ಚಕ್ರವರ್ತಿ  ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್.ಹೌದು ಕನ್ನಡ ಚಿತ್ರರಂಗಕ್ಕೆ ಬಂದು ಬರೋಬ್ಬರಿ 33 ವರ್ಷಗಳನ್ನು ಕಳೆದಿರುವ ಡಾ.ಶಿವಣ್ಣನವರು ಇಲ್ಲಿಯವರೆಗೂ ಸರಿಸುಮಾರು 120 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ‌1986 ರಿಂದ ಇಲ್ಲಿಯ ತನಕ ಸಾಕಷ್ಟು ಇಂಡಸ್ಟ್ರಿ ಹಿಟ್ಸ್ ಸಿನಿಮಾ ಗಳನ್ನು ನೀಡಿರುವ ಶಿವರಾಜಕುಮಾರ್ ಅವರು ತಮ್ಮ ಸಿನಿಮಾ ಜೀವನದಲ್ಲಿ ಸೋಲು ಗೆಲುವು ಎರಡನ್ನೂ ನೋಡಿದ್ದಾರೆ.ಕಳೆದ ಗುರುವಾರವಷ್ಟೇ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆ ತಮ್ಮ 56 ನೇ ಜನ್ಮದಿನವನ್ನು ಆಚರಿಸಿಕೊಂಡ ಡಾ.ಶಿವರಾಜಕುಮಾರ್ ಅವರು

ಇದೀಗ ಭಾರತೀಯ ಚಿತ್ರರಂಗದಲ್ಲಿ ಯಾರೊಬ್ಬರೂ ಮಾಡಲಾಗದ ಹೊಸ ದಾಖಲೆ ಬರೆದಿದ್ದಾರೆ.ಅದೇನು ಅಂತೀರಾ ಇನ್ನು ಹತ್ತರಿಂದ ಹನ್ನೆರಡು ವರ್ಷಗಳ ಕಾಲ ಶಿವರಾಜಕುಮಾರ್ ಅವರು ಸಂಪೂರ್ಣ ಬ್ಯುಸಿ.ಈ ಮಾತಾನ್ನು ನಾವು ಹೇಳುತ್ತಿಲ್ಲ ಸ್ವತಃ ಶಿವರಾಜಕುಮಾರ್ ಅವರ ಕಾಲ್ ಶೀಟ್ ಪಡೆದಿರುವ ಕನಗನ ಚಿತ್ರರಂಗದ ನಿರ್ಮಾಪಕರೇ ಹೇಳುತ್ತಿದ್ದಾರೆ‌.ಇತ್ತೀಚೆಗೆ ತಾನೇ ಮಫ್ತಿ ಮತ್ತು ಟಗರು ಚಿತ್ರಗಳಂತ ಬ್ಲಾಕ್ ಬಸ್ಟರ್ ಸಿನಿಮಾಗಳ ಯಶಸ್ಸು ಶಿವರಾಜಕುಮಾರ್ ಅವರನ್ನು ಮತ್ತಷ್ಟು ಬ್ಯುಸಿ ಮಾಡಿದೆ.ಟಗರು 150 ದಿನ ಪೂರೈಸಿ ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ಶಿವರಾಜಕುಮಾರ್ ಜನಪ್ರಿಯತೆಗೆ ಸಾಕ್ಷಿ ಎನ್ನಬಹುದು.

ಈಗ ಶಿವರಾಜಕುಮಾರ್ ಅವರ ಕೈಯಲ್ಲಿ ಏನಿಲ್ಲವೆಂದರೂ ಕನಿಷ್ಟ 23 ಸಿನಿಮಾಗಳು ಇವೆ.ಇವು ಕಥೆ ಫೈನಲ್ ಆಗಿರುವ ಲಿಸ್ಟ್ ಮಾತ್ರ.ಇನ್ನೂ ಅನೇಕರು ಕಥೆ ಹೇಳದೇ ಡೇಟ್ಸ್ ಸಹ ಪಡೆದಿದ್ದಾರೆ.ಸದ್ಯಕ್ಕೆ ಡಾ.ಶಿವರಾಜಕುಮಾರ್ ಮತ್ತು ಸುದೀಪ್ ನಟನೆಯ ದಿ ವಿಲನ್ ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ.ನಂತರ ಶಿವಣ್ಣನವರ ಕವಚ , ರುಸ್ತುಂ ಮತ್ತು ದ್ರೋಣ ಚಿತ್ರಗಳು ಚಿತ್ರೀಕರಣ ನಡೆಸುತ್ತಿವೆ.ಮುಹೂರ್ತ ಆಚರಿಸಿಕೊಳ್ಳಲು ಲಕ್ಕಿ ಗೋಪಾಲ್ ನಿರ್ದೇಶನದ SRK , ರಥಾವರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ವೈರಮುಡಿ , ಟಗರು -2 , ಯೋಗರಾಜ್ ಭಟ್ ನಿರ್ದೇಶನದ ಹೆಸರಿಡದ ಚಿತ್ರ , ಟಿ

ಎಸ್ ನಾಗಾಭರಣ ನಿರ್ದೇಶನದ ಚಿತ್ರ ,ಎ ಪಿ ಅರ್ಜುನ್ ನಿರ್ದೇಶನದ ಶಿವಪ್ಪ , ರಮೇಶ್ ಯಾದವ್ ನಿರ್ಮಾಣದ ಚಿತ್ರ , ಕೆ ಸುರೇಶ್ ನಿರ್ಮಾಣದ ಖದರ್ , ಈಸೂರು ದಂಗೆ ಸೇರಿದಂತೆ ಹಲವು ಚಿತ್ರಗಳಿಗೆ ಶಿವರಾಜಕುಮಾರ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ.ಇವೆಲ್ಲ ಮುಗಿಯುವ ಹೊತ್ತಿಗೆ ಇನ್ನಷ್ಟು ಚಿತ್ರಗಳು ಶಿವರಾಜಕುಮಾರ್ ಲಿಸ್ಟ್ ಗೆ ಸೇರಿದ್ರೆ ಅಚ್ಚರಿ ಇಲ್ಲ ಹೀಗೆ ಡಾ.ಶಿವರಾಜಕುಮಾರ್ ಅವರು ಅಭಿನಯಿಸುವ ಚಿತ್ರಗಳ ಸಂಖ್ಯೆ ಜಾಸ್ತಿ ಇವೆ.ಇದೊಂದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಆಗಿದೆ.ಶಿವರಾಜಕುಮಾರ್ ಅವರು ಇಷ್ಟೊಂದು ಬ್ಯುಸಿ ಆಗಿರಲು ಏನು ಕಾರಣ ಎಂದು ಹುಡುಕುತ್ತಾ ಹೊರಟರೆ ನಿರ್ಮಾಪಕರು ಹಲವು ಉತ್ತರ

ಕೊಡುತ್ತಾರೆ ಅವುಗಳಲ್ಲಿ ಪ್ರಮುಖವಾದ ಕಾರಣಗಳು ಶಿವರಾಜಕುಮಾರ್ ಅವರು ಮಿನಿಮಾಮ್ ಗ್ಯಾರಂಟಿ  ಹೀರೋ ಅವರಿಗಿರುವ ಅಪಾರ ಅಭಿಮಾನಿಗಳ ವರ್ಗ ಶಿವಣ್ಣನವರ ಸಿನಿಮಾಗಳನ್ನು ಗೆಲ್ಲಿಸುವ ತಾಕತ್ತು ಹೊಂದಿದೆ ಜೊತೆಗೆ ಶಿವರಾಜಕುಮಾರ್ ಅವರು ಒಬ್ಬ ನಿರ್ದೇಶಕನ ನಟ ಹಾಗೂ ನಿರ್ಮಾಪಕರ ನಟ ಚಿತ್ರೀಕರಣದ ಸಮಯದಲ್ಲಿ ಅನಗತ್ಯ ಖರ್ಚಾಗದಂತೆ ಖುದ್ದು ಶಿವರಾಜಕುಮಾರ್ ಕಾಳಜಿ ವಹಿಸುತ್ತರೆ.ಜೊತೆಗೆ ನಿರ್ದೇಶಕರ ಕಥೆಯಲ್ಲಿ ಮೂಗು ತೂರಿಸುವುದಿಲ್ಲ ಹಾಗೂ ಶಿವರಾಜಕುಮಾರ್ ಅವರ ಸಿಂಪ್ಲಿಸಿಟಿ ಮತ್ತು ಶಿಸ್ತು.ಹೀಗೆ ಹಲವು ಕಾರಣಗಳಿಂದ ಶಿವರಾಜಕುಮಾರ್ ಅವರು ಇನ್ನೂ ಹತ್ತು ವರ್ಷ ಸಖತ್ ಬ್ಯುಸಿ ಆಗಲಿದ್ದಾರೆ.

Photos credit :- Facebook Page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here