ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟರಾದ ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಇಬ್ಬರು ಕನ್ನಡ ಚಿತ್ರರಂಗದಲ್ಲಿ  ಹಲವು ಸಿನಿಮಾಗಳ ಮೂಲಕ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಸರಳತೆಗೆ ಹೆಸರುವಾಸಿಯಾಗಿರುವ ಅಣ್ಣಾವ್ರ ಕುಟುಂಬದ ಸ್ಟಾರ್ ಸಹೋದರರು ತಮ್ಮದೇ ಶೈಲಿಯಲ್ಲಿ ತಮ್ಮ ಅಭಿಮಾನಿಗಳಿಗೆ ಮಾದರಿಯಾಗುತ್ತಾರೆ. ಸದಾ ಕಾಲ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕನ್ನಡದ ಈ ಸ್ಟಾರ್ ಸಹೋದರರು ಚಿತ್ರೀಕರಣ ಇಲ್ಲದ ಸಮಯದಲ್ಲಿ ಒಬ್ಬರ ಮನೆಗೆ ಒಬ್ಬರು ತೆರಳಿ ಸ್ಟಾರ್ ಪಟ್ಟ ಮರೆತು ಗೆಳೆಯರಂತೆ ಬೆರೆತುಬಿಡುತ್ತಾರೆ.

ಇಂದು ಸಹ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ಅವರು ಭೇಟಿ ಆಗಿದ್ದಾರೆ. ಈ ಸಮಯದಲ್ಲಿ ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಇಬ್ಬರೂ ಜೊತೆಯಾಗಿ ಕಾರು ಚಲಾಯಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪುನೀತ್ ರಾಜಕುಮಾರ್ ಅವರ ಹೊಸ ಲ್ಯಾಂಬೋರ್ಗಿನಿ ಕಾರನ್ನು ಶಿವರಾಜ್ ಕುಮಾರ್ ಅವರು ಚಲಾಯಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಈ  ವೀಡಿಯೋದ  ವಿಶೇಷವೆಂದರೆ ಲ್ಯಾಂಬೋರ್ಗಿನಿ ಕಾರಿನ ವಿಶೇಷತೆಗಳ ಬಗ್ಗೆ ಪುನೀತ್ ರಾಜಕುಮಾರ್ ಅವರು ಶಿವರಾಜಕುಮಾರ್ ಪಕ್ಕದಲ್ಲಿ ಕುಳಿತು ವಿವರಣೆ ನೀಡುತ್ತಿರುವಾಗ ಶಿವರಾಜಕುಮಾರ್ ಅವರು ಆಲಿಸುತ್ತಾ ಚಲಾವಣೆ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here