ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ಬಹಳ ಚಟುವಟಿಕೆಯಿಂದ ತೊಡಗಿರುವ ಸ್ಟಾರ್ ಎಂದರೆ ಅದು ಶಿವಣ್ಣ ಮಾತ್ರ. ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರ ಬಹುನಿರೀಕ್ಷೆಯ ರುಸ್ತುಂ ಸಿನಿಮಾ ಈ ವಾರದಲ್ಲಿ ಬಿಡುಗಡೆಯಾಗಲಿದೆ. ಅದರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಕೆಲವು ಇತರೆ ವಿಷಯಗಳನ್ನು ಕೂಡಾ ಹಂಚಿಕೊಂಡಿದ್ದಾರೆ.ಅದೇನೆಂದರೆ ಸದಾ‌ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತಿದ್ದ ಶಿವಣ್ಣ ಅವರು ಜುಲೈ ಮತ್ತು ಆಗಸ್ಟ್ ನಲ್ಲಿ ಸಂಪೂರ್ಣ ವಿಶ್ರಾಂತಿಯಲ್ಲಿರುತ್ತಾರೆ. ಅದಾದ ನಂತರ ನವೆಂಬರ್ ವೇಳೆಗೆ ಮತ್ತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಅವರ ವಿಶ್ರಾಂತಿಗೆ ಕಾರಣ ಅವರ ಭುಜದಲ್ಲಿ ನೋವು ಹೆಚ್ಚಾಗಿರುವುದರಿಂದ ಅವರು ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲಿದ್ದಾರೆ. ಕೀ ಹೋಲ್ ಸರ್ಜರಿಗಾಗಿ ಅವರು ಲಂಡನ್ ಗೆ ತೆರಳುತ್ತಿದ್ದಾರೆ. ಅವರ ಅನಾರೋಗ್ಯದ ಕಾರಣ ಅವರ ಬಗ್ಗೆ ಅವರ ಪತ್ನಿ ಮತ್ತು ಮಗಳು ಸಂಪೂರ್ಣ ಕಾಳಜಿ ವಹಿಸುತ್ತಿದ್ದಾರೆ. ಚಿಕಿತ್ಸೆಗಾಗಿ ಲಂಡನ್ ಗೆ ತೆರಳಲಿರುವ ಶಿವಣ್ಣನ ಜೊತೆ ಮಧು, ಪುನೀತ್ , ಶಿವಣ್ಣ ಅವರ ಪತ್ನಿ ಹಾಗೂ ಕಿರಿಯ ಮಗಳು ಕೂಡಾ ಹೊರಡಲಿದ್ದಾರೆ. ಭಜರಂಗಿ ಎರಡರ ಸೆಟ್ ಹಾಕಿರುವುದರಿಂದ , ಸೆಟ್ ಮುಖ್ಯವಾಗಿದ್ದರಿಂದ ಹದಿನೈದು ದಿನಗಳ ಚಿತ್ರೀಕರಣ ಕೂಡಾ ಮುಗಿಸಿದ್ದಾರೆ.

ಚಿಕಿತ್ಸೆಯ ನಂತರ ಮೂರು ತಿಂಗಳ ವಿಶ್ರಾಂತಿ ಕ್ರಮವಾಗಿ ನಡೆಯಲೇಬೇಕಿದೆ. ಶಿವಣ್ಣ ಚಿತ್ರೀಕರಣದಲ್ಲಿ ಫೈಟ್ ಮಾಡಬೇಕಾದಾಗ ಈ ನೋವನ್ನು ಲೆಕ್ಕಿಸದೆ ಚಿತ್ರೀರಣದಲ್ಲಿ ತೊಡಗುವುದರಿಂದ ಅನಂತರ ನಿದ್ರೆ ಮಾಡುವಾಗ , ಏನೂ ಕೆಲಸ ಮಾಡದೇ ಇರುವಾಗ ನೋವು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ನ್ಯುಯಾರ್ಕ್ ಗೆ ಹಾಲಿಡೇಸ್ ಗೆ ಹೋದಾಗ, ಹಿಮದ ಮೇಲೆ ಜಾರಿ ಬಿದ್ದಾಗ ಆದ ಪೆಟ್ಟು ಈಗ ಭಾಧಿಸಿದೆ ಎಂದು ಅವರು ಭುಜದ ನೋವಿನ ಹಿಂದಿನ ಕಾರಣವನ್ನು ಹೇಳಿದರು.

ಆಗ ಪೈನ್ ಕಿಲ್ಲರ್ ನಿಂದಲೇ ನೋವು ಗುಣವಾಗಿತ್ತೆಂದ ಅವರು ಆಗ ಬ್ರೇಕ್ ತಗೊಂಡರೆ ನಾಲ್ಕು ತಿಂಗಳು ಚಿತ್ರೀಕರಣ ಮುಂದೆ ಹಾಕಬೇಕಾಗುವುದೆಂಬ ಕಾಳಜಿಯಿಂದ ಕೆಲವು ಚಿತ್ರಗಳ ಚಿತ್ರೀಕರಣ ಮುಗಿಸಿ ಚಿಕಿತ್ಸೆಗಾಗಿ ಹೊರಡಲು ಸಿದ್ಧವಾಗಿದ್ದಾರೆ. ಅಲ್ಲದೆ ಈಗ ಸಿಕ್ಕಿರುವ ಡಾಕ್ಟರ್ ಅಪಾಯಿಂಟ್ಮೆಂಟ್ ಮತ್ತೆ ಸಿಗುವುದು ಆಗಸ್ಟ್ ಕೊನೆಯಲ್ಲಿ. ಅದಕ್ಕೆ ಸಮಯ ಹರಣ ಮಾಡೋದು ಬೇಡ ಎಂದು ಜುಲೈನಲ್ಲಿ ಅವರು ಲಂಡನ್ ಗೆ ಚಿಕಿತ್ಸೆಗಾಗಿ ಹೊರಟಿದ್ದಾರೆ. ನವೆಂಬರ್ ವೇಳೆಗೆ ಮತ್ತೆ ಅವರು ಎಂದಿನಂತೆ ಚಟುವಟಿಕೆಯಿಂದ ಇರುವುದು ಖಚಿತ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here