ಇದೇ ಜುಲೈ 12 ಸೆಂಚುರಿ ಸ್ಟಾರ್ ಡಾ.ಶಿವರಾಜಕುಮಾರ್ ಅವರ ಜನ್ಮದಿನ. ಈ ಬಾರಿಯ ಜನ್ಮದಿನದಂದು ಶಿವರಾಜಕುಮಾರ್ ಅವರು ಬೆಂಗಳೂರಿನಲ್ಲಿ ಇರುವುದಿಲ್ಲ ಎನ್ನುವ ವಿಷಯವಾಗಿ ಶಿವರಾಜಕುಮಾರ್ ಅವರ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗಿತ್ತು. ಕಾರಣ ಶಿವರಾಜಕುಮಾರ್ ಅವರಿಗೆ ಬಹು ದಿನಗಳಿಂದ ಬಲ ಭುಜದ ನೋವು ಕಾಡಿದ್ದ ಪರಿಣಾಮ ಲಂಡನ್ ನಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಶಿವರಾಜಕುಮಾರ್ ಅವರಿಗೆ ಅಲ್ಲಿನ ವೈದ್ಯರು ಜುಲೈ 9 ರಿಂದ ಡೇಟ್ ನೀಡಿದ್ದರು. ಹೀಗಾಗಿ ಶಿವರಾಜಕುಮಾರ್ ಅವರು ಸದ್ಯ ಲಂಡನ್ನಿನ ಆಸ್ಪತ್ರೆಯಲ್ಲಿ ಇದ್ದಾರೆ.ಡಾ.ಶಿವರಾಜಕುಮಾರ್ ಅವರಿಗೆ ನೆನ್ನೆಯಷ್ಟೇ ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿದಿದ್ದು ಆಸ್ಪತ್ರೆಯಲ್ಲಿ ಶಿವಣ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇನ್ನು ಶಿವಣ್ಣ ಈ ಬಾರಿಯ ಜನ್ಮದಿನ ಆಚರಿಸದಿರುವುದರಿಂದ ಅಭಿಮಾನಿಗಳು ಕೊಂಚ ಬೇಸರ ಮಾಡಿಕೊಂಡಿದ್ದರೂ ಸಹ ಜನ್ಮದಿನದಂದು ಅಭಿಮಾನಿಗಳಿಗೆ ಕರುನಾಡ ಚಕ್ರವರ್ತಿ ಸರ್ಫ್ರೈಸ್ ಉಡುಗೊರೆ ನೀಡಲು ತಯಾರಾಗಿದ್ದಾರೆ. ಹೌದು ಇದೇ ಜುಲೈ 12 ಶುಕ್ರವಾರ ಶಿವರಾಜಕುಮಾರ್ ಜನ್ಮದಿನ. ಈ ಸಂದರ್ಭದಲ್ಲಿ ಶಿವಣ್ಣ ಅವರು ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡುತ್ತಿದ್ದಾರೆ. ಅದೇನೆಂದರೆ ಇದೇ ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಡಾ.ಶಿವಣ್ಣ ಸಾಮಾಜಿಕ ಜಾಲತಾಣಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

ಹೌದು ಸೋಷಿಯಲ್ ಮೀಡಿಯಾದ ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಮ್ ಗೆ ಡಾ.ಶಿವರಾಜಕುಮಾರ್ ಎಂಟ್ರಿ ಆಗಿದ್ದು ಜನ್ಮದಿನದ ಸಂದರ್ಭದಲ್ಲಿ ಮೊದಲ ಬಾರಿಗೆ ಅಭಿಮಾನಿಗಳಿಗಾಗಿ ಸೋಷಿಯಲ್ ಮೀಡಿಯಾಗೆ ಶಿವರಾಜಕುಮಾರ್ ಬಂದಿದ್ರೆದಾ. ಈಗಾಗಲೇ ಶಿವರಾಜಕುಮಾರ್ ಅವರ ಹೆಸರಿನಲ್ಲಿ ಹಲವಾರು ಫ್ಯಾನ್ಸ್ ಖಾತೆಗಳು ಕಾರ್ಯನಿರ್ವಹಿಸುತ್ತಿದ್ದು ಇದುವರೆಗೂ ಸಹ ಶಿವಣ್ಣ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಆದರೆ ಕೊನೆಗೂ ಅಭಿಮಾನಿಗಳ ಆಸೆಯಂತೆ ಶಿವಣ್ಣ ಸೋಷಿಯಲ್ ಮೀಡಿಯಾದ ಫೇಸ್‌ಬುಕ್‌ ಗೆ ಜನ್ಮದಿನದ ಸಂದರ್ಭದಲ್ಲಿ ಎಂಟ್ರಿ‌ ಕೊಟ್ಟಿದ್ದಾರೆ.ಇನ್ನು ಮುಂದೆ ಶಿವರಾಜಕುಮಾರ್ ಅವರ ಬಗ್ಗೆ ಕುತೂಹಲ ಭರಿತ ಮಾಹಿತಿಗಳನ್ನು ಅಭಿಮಾನಿಗಳಿಗೆ ಬಹಳ ಹತ್ತಿರದಿಂದಲೇ ಶಿವರಾಜಕುಮಾರ್ ಹಂಚಿಕೊಳ್ಳಲಿದ್ದಾರೆ. ಶಿವಣ್ಣನವರ ಅಫಿಷಿಯಲ್ ಫೇಸ್‌ಬುಕ್‌ ಖಾತೆಯ ಲಿಂಕ್ ಇಲ್ಲಿದೆ ನೋಡಿ.

https://www.facebook.com/Dr-Shiva-Rajkumar-889260844764025/

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here