ಕನ್ನಡ ಚಿತ್ರರಂಗದ ಪ್ರಸಿದ್ದ ನಟರಾದ ಡಾ.ಶಿವರಾಜಕುಮಾರ್ ಅವರು ಸದಾ ಒಂದಿಲ್ಲೊಂದು ಉತ್ತಮ ವಿಷಯಗಳಿಂದ ಸುದ್ದಿಯಲ್ಲಿರುತ್ತಾರೆ. ಕಳೆದ ವಾರ ಕೊಡಗು ನಿರಾಶ್ರಿತರಿಗೆ ಹತ್ತು ಲಕ್ಷ ನೆರವು ನೀಡಿದ್ದ ಶಿವರಾಜಕುಮಾರ್ ಅವರು ಇದೀಗ ಮತ್ತೊಂದು ಉತ್ತಮ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ. ಹಾಗೆ ನೋಡಿದರೆ ಶಿವರಾಜಕುಮಾರ್ ಅವರು ಈ ಹಿಂದಿನಿಂದಲೂ ಹಲವು ಸಾಮಾಜಿಕ ಕಾರ್ಯಗಳನ್ನು ಸದ್ದಿಲ್ಲದೇ ಮಾಡುತ್ತಲಿದ್ದಾರೆ. ಇತ್ತೀಚಿಗೆ ಡಾ.ಶಿವರಾಜಕುಮಾರ್ ಅವರು ಶಿಕ್ಷಕನಾಗಿ ಕಾಣಿಸಿಕೊಳ್ಳುತ್ತಿರುವ ದ್ರೋಣ ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತಲಿನಲ್ಲಿ ನಡೆಯುತ್ತಿದೆ.

ಮೊನ್ನೆ ನೆಲಂಮಗಲದ ಸರ್ಕಾರಿ ಶಾಲೆಯಲ್ಲಿ ದ್ರೋಣ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಶಾಲೆಯ ಆಡಳಿತ ಮಂಡಳಿ ಶಿವರಾಜಕುಮಾರ್ ಅವರ ಜೊತೆ ಮಾತುಕತೆಯಲ್ಲಿ ತೊಡಗಿರುವಾಗ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಯುಪಿಎಸ್ ಮತ್ತು 10 ಗ್ರೀನ್ ಬೋರ್ಡ್ ಶಾಲೆಗೆ ಅವಶ್ಯಕತೆ ಇರುವುದಾಗಿ ತಿಳಿಸಿದ್ದಾರೆ. ಈ ವೇಳೆ ಕರುನಾಡ ಚಕ್ರವರ್ತಿ ಡಾ.  ಶಿವರಾಜಕುಮಾರ್ ಅವರು ಶಾಲೆಗೆ ಅಗತ್ಯ ಇರುವ ಎಲ್ಲಾ ವಸ್ತುಗಳನ್ನು ಕೊಡುವುದಾಗಿ ತಿಳಿಸಿ ಶಾಲೆಯ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.

ದ್ರೋಣ ಚಿತ್ರೀಕರಣ ಸದ್ಯ ಶಾಲೆಗಳಲ್ಲಿ ನಡೆಯುತ್ತಿದ್ದು ಚಿತ್ರೀಕರಣದ ಸಮಯದಲ್ಲಿ ಸರ್ಕಾರಿ ಶಾಲೆಯನ್ನು ಬಳಸಿಕೊಳ್ಳಲಾಗುತ್ತಿದೆ.ಸರ್ಕಾರಿ ಶಾಲೆಗಳು ಉಳಿಯಬೇಕು ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಲು ಸರ್ಕಾರ ಸಹ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.ನನಗೆ ಸರ್ಕಾರಿ ಶಾಲೆಗಳೆಂದರೆ ವಿಶೇಷ ಪ್ರೀತಿ ಇದೆ.ಹೀಗಾಗಿ ನನ್ನಿಂದ ಆಗುವ ನೆರವನ್ನು ನಾನು ಅಗತ್ಯವಿರುವ ಸರ್ಕಾರಿ ಶಾಲೆಗಳಿಗೆ ಮಾಡುತ್ತೇನೆ ಎಂದು ಶಿವರಾಜಕುಮಾರ್ ಅವರು ತಿಳಿಸಿದ್ದಾರೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here