ಉತ್ತರ ಕರ್ನಾಟಕದಲ್ಲಿ ಮಹಾಮಳೆಯಿಂದ ಉಂಟಾಗಿರುವ ತೀವ್ರವಾದ ಪರಿಣಾಮಗಳಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಪರಿಹಾರ ಕಾರ್ಯಗಳು ನಡೆಯುತ್ತಿವೆ. ಸರ್ಕಾರ, ಸಂಘ ಸಂಸ್ಥೆಗಳು, ಸೆಲೆಬ್ರಿಟಿಗಳು , ಸಾರ್ವಜನಿಕರು ತೊಂದರೆಯಲ್ಲಿ ಸಿಲುಕಿರುವ ಜನರಿಗೆ ತಮ್ಮಿಂದಾಗುವ ಸಹಾಯವನ್ನು ನೀಡಲು ಮುಂದಾಗುತ್ತಿದ್ದಾರೆ. ಹಲವು ಗಣ್ಯರು ಸಂಕಷ್ಟಕ್ಕೆ ಗುರಿಯಾಗಿರುವ ಜನರಿಗೆ ಸಾಂತ್ವನ ಹಾಗೂ ಧೈರ್ಯ ಹೇಳುವ ಕಾರ್ಯವನ್ನು ಮಾಡುತ್ತಾ ನಿಮಗೆ ನಾವಿದ್ದೇವೆ ಎಂಬ ಭರವಸೆಯನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಹಾ ಜನರಿಗೆ ಧೈರ್ಯವನ್ನು ಹೇಳಿದ್ದಾರೆ.

ಶಿವಣ್ಣ ಅವರು ಮಾತನಾಡುತ್ತಾ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಆವೇದನೆ ವ್ಯಕ್ತಪಡಿಸುತ್ತಾ, ಬಹಳ ಬೇಗ ಪ್ರವಾಹ ಕಡಿಮೆ ಆಗಲಿ, ಅಲ್ಲಿ ಜನರ ಜೀವನ ಸಾಮಾನ್ಯ ಆಗಲಿ ಎಂದು ಹೇಳಿದ್ದಾರೆ. ಅಲ್ಲದೆ ಇಂತಹ ಸಂದರ್ಭಗಳಲ್ಲಿ ನಾವು ನಿಮ್ಮ ಜೊತೆ ಸದಾ ಇರ್ತೀವಿ ಎಂದ ಅವರು, ತಮ್ಮ ಅಭಿಮಾನಿ ಸಂಘಗಳವರು ಕೇವಲ ಸಿನಿಮಾ ಅಂತ ಅಲ್ಲದೆ ನೆಚ್ಚಿನ ನಟನ ಹೆಸರಲ್ಲಿ ಜನರಿಗೆ ಸಹಾಯ ಮಾಡೋದಿಕ್ಕೆ ಮುಂದಾಗಿರುವುದರ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದು ಶಿವಸೇನೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಕೇವಲ ತಾನು ಮಾತ್ರ ಅಲ್ಲ ಇಡೀ ಸ್ಯಾಂಡಲ್ ವುಡ್ ಉತ್ತರ ಕನ್ನಡದ ಜನರ ಜೊತೆ ಇರುತ್ತೆ ಎನ್ನುವ ಮಾತು ಹೇಳಿದ ಅವರು, ಅಭಿಮಾನಿ ದೇವರುಗಳಿಂದ ನಾವು ಇವತ್ತು ಈ ಸ್ಥಾನ ಪಡೆದಿದ್ದು, ಅಂತಹ ದೇವರುಗಳಿಗೆ ಕಷ್ಟ ಬಂದರೆ ನಾವು ಸುಮ್ಮನೆ ಇರೋಕಾಗಲ್ಲ ಎಂದಿದ್ದಾರೆ. ಲಂಡನ್ ನಿಂದ ಆಪರೇಷನ್ ಮುಗಿಸಿ ಬಂದ ಮೇಲೆ ಸ್ವಲ್ಪ ವಿಶ್ರಾಂತಿಯಲ್ಲಿ ಇದ್ದಿದ್ದರಿಂದ ಬಹಳ ಬೇಗ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡದೆ ಇದ್ದದ್ದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು. ಉತ್ತರ ಕನ್ನಡದ ಜನರ ‌ಸಂಕಷ್ಟದಲ್ಲಿ ನಾವೆಲ್ಲಾ ಇರ್ತೀವಿ ಅನ್ನೋ ಮಾತನ್ನು ಅವರು ಆಡಿ , ಜನಕ್ಕೆ ಧೈರ್ಯ ಹೇಳಿದ್ದಾರೆ.‌

ಉತ್ತರ ಕರ್ನಾಟಕದ ಪ್ರವಾಹದ ದೃಶ್ಯವಾಳಿಗಳು ಕಂಡು ಬೇಜಾರು ಹಾಗು ಭಯವಾಯಿತು. ನಿಮ್ಮ ಜೊತೆ ನಾವಿದ್ದೀವಿ ನಿಮ್ಮ ಸಹಾಯಕ್ಕೆ ನಾವೆಲ್ಲಾ ಕೈ…

Dr Shiva Rajkumar यांनी वर पोस्ट केले गुरुवार, ८ ऑगस्ट, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here