ಸ್ಟಾರ್ ನಟರು ಎಂದರೆ ಜನರ ಮನಸ್ಸಿನಲ್ಲಿ ಕೂಡಲೇ ನೆನಪಾಗುವುದು ಅವರ ಐಷಾರಾಮೀ ಜೀವನ‌. ಆದರೆ ಅಂತಹ ಸ್ಟಾರ್ ಗಳು ಕೂಡಾ ಸಾಮಾನ್ಯ ಜನರಂತೆ ರಸ್ತೆ ಬದಿಯ ಹೊಟೇಲ್ ಗೆ ಬಂದು ಟಿಫನ್ ಮಾಡಿ ಹೋಗುವುದು ಎಂದರೆ ಅದು ಅಪರೂಪವೇ ಸರಿ. ಆದರೆ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಮಾತ್ರ  ಎಂದಿನಂತೆ ತಮ್ಮ ಸಿಂಪ್ಲಿ ಸಿಟಿ ಜೀವನ ಮುಂದುವರಿಸಿದ್ದಾರೆ.  ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮ ಭುಜದ ಶಸ್ತ್ರ ಚಿಕಿತ್ಸೆಯನ್ನು ಲಂಡನ್ ನಲ್ಲಿ ಮುಗಿಸಿಕೊಂಡು ಬಂದ ಮೇಲೆ ಮುತ್ತತ್ತಿ ಮತ್ತು ಮಹದೇಶ್ವರ ಬೆಟ್ಟಕ್ಕೆ ಹೋಗಿ ಹರಕೆ ತೀರಿಸಕೊಂಡು ಬಂದಿರುವುದರ ಜೊತೆಗೆ ಅಲ್ಲಿನ ದೇಗುಲಗಳಲ್ಲಿ ನಡೆಯುವ ಅನ್ನ ದಾಸೋಹಕ್ಕೆ ಕಾಣಿಕೆಯನ್ನು  ಸಹ ಸದ್ದಿಲ್ಲದೇ ನೀಡಿ ಬಂದಿದ್ದಾರೆ.

ಅವರು ಮುತ್ತತ್ತಿಗೆ ಹೋಗುವ ಸಂದರ್ಭದಲ್ಲಿ, ಮಂಡ್ಯ ಜಿಲ್ಲೆಯ ಮಳ್ಳವಳ್ಳಿಯ-ಮದ್ದೂರು ರಸ್ತೆಯಲ್ಲಿ ಕಾರು ನಿಲ್ಲಿಸಿ, ತಿಂಡಿ ತಿನ್ನಲು ಅಲ್ಲಿರುವ ಬಾಬು ಶೆಡ್ ಹೊಟೇಲ್ ಗೆ ಗೆಳೆಯರಾದ ನಿರ್ಮಾಪಕ ಕೆ ಪಿ ಶ್ರೀಕಾಂತ್,  ನಟ ಗುರುದತ್ ಸೇರಿದಂತೆ  ಇತರರೊಂದಿಗೆ ಹೋಗಿ, ಅಲ್ಲಿನ ಇಡ್ಲಿ, ದೋಸೆ, ಚಿತ್ರಾನ್ನದ ರುಚಿ ಸವಿದಿದ್ದಾರೆ. ಇನ್ನು ಶಿವಣ್ಣ ಬಂದ ವಿಷಯ ತಿಳಿದ ಅಭಿಮಾನಿಗಳು ಅಲ್ಲಿಗೆ ಬಂದು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದಾರೆ. ಶಿವಣ್ಣನವರು ನಂತರ ಮಾತನಾಡುತ್ತ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಅವರು ಮಾತನಾಡುತ್ತಾ ನಾನು ಈ ಭಾಗದಲ್ಲಿ ಹೋಗುವಾಗ ಇಲ್ಲಿಗೆ ಬಂದು ತಿಂಡಿ ತಿನ್ನುವುದಾಗಿ ಹೇಳಿದ್ದಾರೆ. ಇಲ್ಲಿ ಮಾಡುವ ತಿಂಡಿಗಳ ರುಚಿ ಚೆನ್ನಾಗಿರುತ್ತದೆ ಎಂದ ಅವರು , ಹಲಗೂರಿನ ಭಾಗದಲ್ಲಿ ತಮ್ಮ ಸಂಬಂಧಿಕರು ಇರುವುದರಿಂದ ತಾವು ತಿಂಡಿ ತಿನ್ನಲು ಹೋದ ಹೊಟೇಲ್ ಜೊತೆ ಹಳೆಯ ಪರಿಚಯವಿದೆ ಎಂದು ಅವರು ಹೇಳಿದ್ದಾರೆ. ಶಿವಣ್ಣ ಇದಕ್ಕೂ ಮೊದಲು ಕೂಡಾ ಹೀಗೆ ಶೆಡ್ ಹೊಟೇಲ್ ಗಳಲ್ಲಿ ತಿನ್ನುವ ಮೂಲಕ ಸರಳತೆಯನ್ನು ಮೆರೆಯುವುದು ಸಾಮಾನ್ಯವೇ ಎಂದು ಹೇಳಬಹುದು.

His craze remember the name🎉🎊 DR SHIVARAJKUMAR 🎊🎉

Troll Who Trolls Dr.Shivanna SRK यांनी वर पोस्ट केले गुरुवार, ५ सप्टेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here