ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು ಮೂವತ್ತಮೂರು ವರ್ಷಗಳಿಂದ ಸತತವಾಗಿ ಚಿತ್ರಗಳಲ್ಲಿ ಅಭಿನಯಿಸುತ್ತಾ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಇಂದಿಗೂ ಜನಪ್ರಿಯ ನಟರ ಪೈಕಿ ಮುಂಚೂಣಿಯಲ್ಲಿರುವ ನಟ ಎಂದರೆ ಅದು ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್. ಹ್ಯಾಟ್ರಿಕ್ ಹೀರೋ  ಶಿವರಾಜ್ ಕುಮಾರ್ ಅವರಿಗಿಂದು ಡಬಲ್ ಖುಷಿ. ಕನ್ನಡ ಖ್ಯಾತ ನಟ ವರನಟ ಡಾ. ರಾಜ್ ಅವರ ಜ್ಯೇಷ್ಠ ಪುತ್ರ ಶಿವರಾಜ್ ಕುಮಾರ್ ಇಂದು 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರವನ್ನಾಚರಿಸುತ್ತಿದ್ದಾರೆ. ಅಲ್ಲದೆ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ತಂದುಕೊಟ್ಟ ಚಿತ್ರ “ಓಂ” ಬಿಡುಗಡೆಯಾಗಿ ಇಂದಿಗೆ 24 ವರ್ಷ.

ಶಿವರಾಜ್ ಕುಮಾರ್ ಹಾಗೂ ಗಿತಾ ಶಿವರಾಜ್ ಕುಮಾರ್ ವಿವಾಹವಾಗಿದ್ದು 1986ರ ಈ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿರುಪಮಾ ಹಾಗೂ ನಿವೇದಿತಾ ಎಂಬಿಬ್ಬರಲ್ಲಿ ಇದಾಗಲೇ ನಿರುಪಮಾ ವಿವಾಹವಾಗಿ ಪತಿಯ ಮನೆ ಸೇರಿದ್ದಾರೆ. ಇನ್ನು ನಿವೇದಿತಾ ವಿದ್ಯಾಭ್ಯಾಸ ಮುಂದುವರಿಸಿದ್ದು ಜತೆಗೆ ತಂದೆಯ ಶ್ರೀಮುತ್ತು ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಇದರ ಜೊತೆಗೆ ಇಂದು ನಟ  ಶಿವರಾಜ್ ಕುಮಾರ್ ಅಭಿನಯಿಸಿ ಉಪೇಂದ್ರ ನಿರ್ದೇಶನದ  ಅವರ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ನೀಡಿದ್ದ ಚಿತ್ರ “ಓಂ” ಇದೇ ದಿನ ತೆರೆ ಕಂಡಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದ “ಓಂ” ಅದೆಷ್ಟು ಬಾರಿ ಬಿಡುಗಡೆಯಾಗಿತ್ತೆನ್ನುವುದು ಲೆಕ್ಕವಿಲ್ಲ. ಹಾಗೆಯೇ ಎಷ್ಟೇ ಬಾರಿ ರೀ ರಿಲೀಸ್ ಆದರೂ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿತ್ತೆನ್ನುವುದು ಗಮನಾರ್ಹ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here