ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ದಿ ವಿಲನ್.ಇದೇ ಮೊದಲಬಾರಿಗೆ ಡಾ.ಶಿವರಾಜಕುಮಾರ್ ಮತ್ತು ಕಿಚ್ಚ ಸುದೀಪ್ ಜೊತೆಯಾಗಿ ನಟಿಸುತ್ತಿರುವ ದಿ ವಿಲನ್ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಇರುವುದು ಇಡೀ ಕನ್ನಡ ಚಿತ್ರರಂಗದ ಕಣ್ಣು ದಿ ವಿಲನ್ ಮೇಲೆ ಬಿದ್ದಿದೆ.ಮಾತಿನ ಭಾಗದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ದಿ ವಿಲನ್ ಚಿತ್ರ ತಂಡ ಮೂರು ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿತ್ತು.ಇದೀಗ ಅದರಲ್ಲಿ ಡಾ.ಶಿವರಾಜಕುಮಾರ್ ಅಭಿನಯದ ಒಂದು ಹಾಎಇನ ಚಿತ್ರೀಕರಣ ಇಂದು ಮುಗಿದಿದೆ ಎಂದು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರೇಮ್ ಅವರೇ ಬರೆದಿರುವ ಈ ಹಾಡು ಶಿವರಾಜಕುಮಾರ್ ಅವರ ಕೆರಿಯರ್ ಬಗ್ಗೆ ಇದೆ ಎನ್ನಲಾಗಿದ್ದು ನೆನ್ನೆ ಮೊನ್ನೆ ಬಂದೋರೆಲ್ಲಾ ನಂಬರ್ ಒನ್ ಅಂತಾರಲ್ಲ..ಎಂದು ಶುರುವಾಗಲಿದೆ.ಈ ಹಾಡಿನ ಸಾಲಿನ ಮೂಲಕವೇ ಪ್ರೇಮ್ ಸ್ಯಾಂಡಲ್ ವುಡ್ ನಂಬರ್ ಒನ್ ಎನ್ನೋರಿಗೆ ಟಾಂಗ್ ಕೊಡಲಿದ್ದಾರೆ ಎಂದು ಗೊತ್ತಾಗುತ್ತಿದೆ.ಈ ಎನರ್ಜಿಟಿಕ್ ಹಾಡಿಗೆ ವಿ ನಾಗೇಶ್ ಮಾಸ್ಟರ್ ಅವರು ನೃತ್ಯ ಸಂಯೋಜನೆ ಮಾಡಿದ್ದು ಶಿವಣ್ಣ ಸಖತ್ ಆಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

        #TheVillain MASS SONG “NINNE MONNE BANDAVARELLA NUMBER 1 ANTHAARO” shoot done

 

        Young & Energetic Shivanna has danced superbly & has done a brilliant job in this mass number!This marks the end of Shivannas portions!Song is choreographed by V.Nagesh Master.Hope u guys enjoy this

????

    1. https://t.co/3FDTvOsuxm

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here