ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು ಶಬರಿಮಲೆಗೆ ತೆರಳಲು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದಾರೆ. ಬೆಂಗಳೂರಿನ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಇಂದು ಮುಂಜಾನೆ ಶಿವರಾಜ್ ಕುಮಾರ್ ಅವರು ತಮ್ಮ ಗೆಳೆಯರು ಹಾಗೂ ಕುಟುಂಬದವರ ಜೊತೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದಾರೆ. ಮುಂದೆಯೂ ಸಹ ಹಲವಾರು ಬಾರಿ ಶಿವರಾಜಕುಮಾರ್ ಅವರು ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ತಾಯಿ ಪಾರ್ವತಮ್ಮ ರಾಜಕುಮಾರ್ ನಿಧನದ ಬಳಿಕ  ಕಳೆದ ಎರಡು ಮೂರು  ವರ್ಷಗಳಿಂದ ಶಿವಣ್ಣ ಅವರು ಶಬರಿಮಲೆ ಯಾತ್ರೆ ಕೈಗೊಳ್ಳಲು ಆಗಿರಲಿಲ್ಲ.

ಇದೀಗ ಮತ್ತೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ತಮ್ಮ ಚಿತ್ರರಂಗದ ಗೆಳೆಯರ ಜೊತೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಅಯ್ಯಪ್ಪಸ್ವಾಮಿ ಮೇಲಿನ ಭಕ್ತಿ ಮೆರೆದಿದ್ದಾರೆ. ಇಂದು ಅಯ್ಯಪ್ಪ ಮಾಡಿದರೆ ಸಿಗುವ ಶಿವರಾಜ್ ಕುಮಾರ್ ಅವರು ಬರುವ ತಿಂಗಳು ಅಂದರೆ ಮಾರ್ಚ್ 14 ನೇ ತಾರೀಕು ಶಬರಿಮಲೆಗೆ ತೆರಳಿ ತೆರಳಲಿದ್ದಾರೆ. ಶಿವರಾಜ್ ಕುಮಾರ್ ಜೊತೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಘುರಾಂ ಸಹ ಇಂದು ಅಯ್ಯಪ್ಪ ಮಾಲೆ ಧರಿಸಿದ್ದಾರೆ.

ಇನ್ನು ಶಿವರಾಜ್ ಕುಮಾರ್ ಅವರ ಜೊತೆ  ಹಲವಾರು ಸಿನಿರಂಗದ ಗಣ್ಯರು  ಸಹ  ಶಬರಿಮಲೆಗೆ ತೆರಳುವ  ಸಾಧ್ಯತೆ ಇದೆ. ಈ ಹಿಂದೆಯೂ ಸಹ ಡಾ. ರಾಜಕುಮಾರ್ ಜೊತೆ ಶಿವರಾಜಕುಮಾರ್,  ಪುನೀತ್ ರಾಜಕುಮಾರ್,  ಸೇರಿ ಸಿನಿ ರಂಗದ ಹಲವಾರು ಗಣ್ಯರು  ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದನ್ನು  ಸ್ಮರಿಸಬಹುದು.

ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏

Raghu Ram D. P यांनी वर पोस्ट केले शुक्रवार, २१ फेब्रुवारी, २०२०

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here