ಇಂದು ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಜನ್ಮದಿನದ ಸವಿ ನೆನಪು. ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳು ರಾಜ್ಯಾದ್ಯಂತ ಡಾಕ್ಟರ್ ವಿಷ್ಣುವರ್ಧನ್ ಅವರ ಜನ್ಮದಿನವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಹ ಹಲವಾರು ನಟ-ನಟಿಯರು ಸಾಹಸಸಿಂಹನ ನೆನಪನ್ನು ಸ್ಮರಿಸಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ಸೂಪರ್ ಸ್ಟಾರ್ ನಟರು ಸೋಶಿಯಲ್ ಮೀಡಿಯಾದಲ್ಲಿ ವಿಷ್ಣುವರ್ಧನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಸಾಹಸಸಿಂಹ ಡಾ ವಿಷ್ಣುವರ್ಧನ್ ಮತ್ತು ಅಣ್ಣಾವ್ರ ಕುಟುಂಬಕ್ಕೂ ಇದ್ದ ಒಂದು ಭಾಂಧವ್ಯದ ಬಗ್ಗೆ ಡಾ.ಶಿವರಾಜ್ ಕುಮಾರ್ ಅವರು ಭಾರತಿ ವಿಷ್ಣುವರ್ಧನ್ ಎದುರು ನೆನಪು ಮಾಡಿಕೊಂಡಿದ್ದರು.

ಡಾಕ್ಟರ್ ವಿಷ್ಣುವರ್ಧನ್ ಅವರ ಕುಟುಂಬ ಕಳೆದ ವರ್ಷ ಆಯೋಜನೆ ಮಾಡಿದ್ದ ವಿಭಾ ಟ್ರಸ್ಟ್ ನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾದಿದ್ದ  ಡಾ.ಶಿವರಾಜಕುಮಾರ್ ಅವರು ತಮ್ಮ ಮೊದಲ ಚಿತ್ರ ಆನಂದ್  ಬಿಡುಗಡೆಯಾದಾಗ ಡಾ.ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಚಿತ್ರವನ್ನು ವೀಕ್ಷಣೆ ಮಾಡಿ ಆನಂದ್  ಚಿತ್ರದ ಬಗ್ಗೆ ಮನಃಪೂರ್ವಕವಾಗಿ ಮೆಚ್ಚಿಕೊಂಡಿದ್ದರು ಹಾಗೂ ಆನಂದ್ ಚಿತ್ರದಲ್ಲಿನ ನನ್ನ ಅಭಿನಯ ಕೊಂಡಾಡಿ ವಿಷ್ಣುವರ್ಧನ್ ನನಗಾಗಿ ಒಂದು ವಿಶೇಷ ಉಡುಗೊರೆಯನ್ನು ಸಹ ನೀಡಿದ್ದರು ಎಂದು ಶಿವರಾಜಕುಮಾರ್ ನೆನಪು ಮಾಡಿಕೊಂಡರು. ಅಂದಹಾಗೆ ಡಾ.ವಿಷ್ಣುವರ್ಧನ್ ಅವರು  ಶಿವರಾಜಕುಮಾರ್ ಅವರಿಗೆ ನೀಡಿದ ಉಡುಗೊರೆ ಏನೆಂದರೆ ಅದು ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಎಂಜಿಆರ್ ಅವರು ವಿಷ್ಣುವರ್ಧನ್ ಅವರಿಗೆ ನೀಡಿದ್ದ ಬೆಲೆಬಾಳುವ ವಾಚನ್ನು ವಿಷ್ಣುವರ್ಧನ್ ಅವರು ಶಿವರಾಜ್ ಕುಮಾರ್ ಅವರಿಗೆ

ನೀಡಿದ್ದರಂತೆ. ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಅವರು ಆನಂದ್ ಚಿತ್ರ ವೀಕ್ಷಿಸಿ ಶಿವರಾಜಕುಮಾರ್ ಅವರನ್ನು ತಬ್ಬಿಕೊಂಡು ಮುದ್ದಾಡಿದ್ದನ್ನು ಸಹ  ಶಿವರಾಜಕುಮಾರ್ ನೆನಪು ಮಾಡಿಕೊಂಡರು. ಇನ್ನು ಶಿವರಾಜಕುಮಾರ್ ಇದೇ ಸಂದರ್ಭದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಕುಟುಂಬ ನಡೆಸುತ್ತಿರುವ ಸಾಮಾಜಿಕ ಕಳಕಳಿಯುಳ್ಳ ವಿಭಾ ಟ್ರಸ್ಟ್ ಗೆ  ತಮ್ಮ ಕೈಲಾದ ಹಣದ ನೆರವನ್ನು ಸಹ ನೀಡಿ ವಿಷ್ಣುವರ್ಧನ್ ಕುಟುಂಬದ ಮೇಲಿನ ಅಭಿಮಾನ ಹಾಗೂ ಆತ್ಮೀಯತೆ ಅರ್ಥಪೂರ್ಣವಾಗಿ ತೋರಿಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here