ಕನ್ನಡ ಚಿತ್ರರಂಗದಲ್ಲಿ ಕಳೆದ 33 ವರ್ಷಗಳಿಂದ ಸತತವಾಗಿ ಚಿತ್ರಗಳಲ್ಲಿ ನಟಿಸುತ್ತಾ ವರ್ಷಪೂರ್ತಿ ಅತ್ಯಂತ ಬ್ಯುಸಿ ಇರುವ ನಟ ಯಾರೆಂದು ಕೇಳಿದರೆ ಬರುವ ಒಂದು ಹೆಸರು ಶಿವಣ್ಣ. ಹೌದು ಶಿವರಾಜಕುಮಾರ್ ಚಿತ್ರಜಗತ್ತಿಗೆ ಕಾಲಿಟ್ಟ ಅಂದಿನಿಂದ ಇಂದಿನ ತನಕ ಸರಿ ಸುಮಾರು 122 ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಹಲವಾರು ಸಿನಿಮಾಗಳು ಇಂಡಸ್ಟ್ರಿ ಹಿಟ್ ಎನಿಸಿವೆ. ಮತ್ತೆ ಹಲವು ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ಇವೆ. ಕೆಲವು ಸಿನಿಮಾಗಳು ಸೋತಿವೆ. ಆದರೆ ಶಿವಣ್ಣ ಮಾತ್ರ ಅಂದಿನಿಂದ ಇಂದಿನ ತನಕ ಸೋತಿಲ್ಲ. ವರ್ಷಪೂರ್ತಿ ಬ್ಯುಸಿ ಆಗಿ ನಟಿಸುವ ಶಿವರಾಜಕುಮಾರ್ ಕೆಲವು ಚಿತ್ರಗಳನ್ನು ನಿರ್ಮಾಪಕರ ಮತ್ತು ನಿರ್ದೇಶಕರ ಮೇಲಿನ ಪ್ರೀತಿಗೆ ಕಟ್ಟುಬಿದ್ದು ನಟಿಸಿದ ಉದಾಹರಣೆಗಳಿವೆ.

ಮತ್ತೊಂದು ವಿಶೇಷ ಎಂದರೆ ಶಿವಣ್ಣನಿಗೆ ಹಲವಾರು ನಿರ್ಮಾಪಕರು ಬ್ಲಾಂಕ್ ಚೆಕ್ ಕೊಟ್ಟಿರುವ ಉದಾಹರಣೆಗಳು ಇವೆ. ಆದರೂ ಶಿವಣ್ಣ ಈ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ಹಲವು ಬಾರಿ ಶಿವರಾಜಕುಮಾರ್ ಅವರು ತಮ್ಮ ಖಾಸಗಿ ಜೀವನಕ್ಕೆ ಸಮಯ ಮೀಸಲಿಡದೆ ಸಿನಿಮಾಗಳಲ್ಲಿ ನಟಿಸಿದ ಉದಾಹರಣೆಗಳಿವೆ ಈ ಬಗ್ಗೆ ಸ್ವತಃ ಶಿವರಾಜಕುಮಾರ್ ಅವರು ಖಾಸಗಿ ಮಾಧ್ಯಮದ ಜೊತೆ ಒಂದು ಇಂಟರಿಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಶಿವಣ್ಣ ನೀವು ವರ್ಷಪೂರ್ತಿ ಸತತವಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತೀರ ನಿಮ್ಮ ಸಮಕಾಲಿನ ನಟರು

ಅಥವಾ ನಿಮಗಿಂತ ಕಿರಿಯ ನಟರು ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾಗಳಿಗೆ ಸೀಮಿತವಾಗುವಾಗ ನೀವು ನಾಲ್ಕು ಅಥವಾ ಐದು ಸಿನಿಮಾ ಮಾಡುವುದು ಯಾಕೆ ಎಂಬ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ ನಿಜಕ್ಕೂ ಆಶ್ಚರ್ಯವಾಗಿತ್ತು ಅದೇನೆಂದರೆ ” ನಾನು ವರ್ಷ ಪೂರ್ತಿ ಪ್ರತಿದಿನ ಸಿನಿಮಾಗಳಲ್ಲಿ ನಟಿಸಲು ಬಯಸುತ್ತಿರುತ್ತೇನೆ ಯಾಕೆಂದರೆ ನಾನು ನಾಲ್ಕೈದು ಸಿನಿಮಾ ಒಪ್ಪಿಕೊಳ್ಳುವುದಿಂದ ಪ್ರತಿದಿನ ಸಾವಿರಾರು ಜನ ನನ್ನ ಸಿನಿಮಾಗೆ ಕೆಲಸ ಮಾಡುತ್ತಾರೆ. ಅವರೆಲ್ಲರ ಕುಟುಂಬಕ್ಕೆ ಒಂದು ರೀತಿ ಸಹಾಯ ಆಗುತ್ತದೆ. ಹೀಗಾಗಿ ನಿರ್ಮಾಪಕರು ನನಗೆ ಕೊಡುವ ಹಣಕ್ಕಿಂತ ನನ್ನ ಸಿನಿಮಾ ಮಾಡುವ ಕಾರ್ಮಿಕರ ಕುಟುಂಬ ಮುಖ್ಯವಾಗುತ್ತದೆ ಎಂದು ಶಿವರಾಜಕುಮಾರ್ ಅವರು ತಿಳಿಸಿದ್ದಾರೆ.    ಮನಸು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here